Advertisement

ಸಂಸದರನ್ನೇ ಹೆದರಿಸಿ, ಸುಸ್ತಾಗಿಸಿದ ಇಲಿ!

12:06 AM Jul 23, 2021 | Team Udayavani |

ಸಂಸದರನ್ನೇ ಹೆದರಿಸಿ, ಸುಸ್ತಾಗಿಸಿದ ಇಲಿ!

Advertisement

ಮ್ಯಾಡ್ರಿಡ್‌: ಸ್ಪೇನ್‌ನ ಸೆವಿಲ್ಲೆಯಲ್ಲಿರುವ ಆ್ಯಂಡಲೂಸಿಯಾ ಪಾರ್ಲಿಮೆಂಟ್‌ನಲ್ಲಿ ಇಲಿಯೊಂದು ಸಂಸದರನ್ನೇ ಬೆದರಿಸಿ, ಹೌಹಾರಿಸಿದ ಘಟನೆ ನಡೆದಿದೆ!

ಸ್ಪೀಕರ್‌ ಮಾರ್ತಾ ಬಾಸ್ಕ್ವೆಟ್‌ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ, ಏಕಾಏಕಿ ಇಲಿ ಸದನದೊಳಕ್ಕೆ ನುಗ್ಗಿದೆ. ಅದನ್ನು ನೋಡುತ್ತಿದ್ದಂತೆ, ಅವರು ಕಿರುಚಾಡಿದ್ದಾರೆ. ಸಂಸದರೆಲ್ಲ ಎದ್ದು ನಿಂತು, ಎಲ್ಲಿ ತಮ್ಮ ಕಾಲಡಿಯಲ್ಲೇ ಇಲಿ ನುಗ್ಗಿದೆಯೋ ಎಂದು ಕೈಕಾಲು ಕೊಡವಿಕೊಳ್ಳತೊಡಗಿದ್ದಾರೆ.

ಈ ವೀಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸಂಸದರನ್ನು ಬೆಚ್ಚಿ ಬೀಳಿಸಿ ಸುಸ್ತಾಗಿಸಿದ ಇಲಿಯನ್ನು ಸೆರೆಹಿಡಿಯಲಾಗಿದೆ!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next