Advertisement

ಮೂರು ತಿಂಗಳ ಬಳಿಕ ಲಾಕ್‌ಡೌನ್‌ಗೆ ಅಂತ್ಯ ಹಾಡಿದ ಸ್ಪೈನ್

05:25 PM Jun 22, 2020 | sudhir |

ಮಣಿಪಾಲ : ಅತೀ ಹೆಚ್ಚು ಸೋಂಕಿತರನ್ನು ಒಳಗೊಂಡಿದ್ದ ರಾಷ್ಟ್ರಗಳ ಪೈಕಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದ ಸ್ಪೈನ್ ಸರಕಾರ ಒಂದು ಮಹತ್ತರವಾದ ನಿರ್ಧಾರವನ್ನು ತೆಗೆದುಕೊಂಡಿದ್ದು, ದೇಶಾದ್ಯಂತ ಜಾರಿಯಲ್ಲಿದ್ದ ಲಾಕ್‌ಡೌನ್‌ ನಿಯಮಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ.

Advertisement

ಹೌದು ಸ್ಪೈನ್‌ನಲ್ಲಿ ಅಧಿಕಾರಿಗಳು ಮೂರು ತಿಂಗಳ ಸುದೀರ್ಘ‌ ತುರ್ತು ಪರಿಸ್ಥಿತಿ ಹಾಗೂ ಲಾಕ್‌ಡೌನ್‌ಗೆ ಅಂತ್ಯವಾಡಿದ್ದು, ಮಾರ್ಚ್‌ 14ರ ಬಳಿಕದ ನಂತರ ಇದೇ ಮೊದಲ ಬಾರಿಗೆ ದೇಶದ ಜನರಿಗೆೆ ದೇಶಾದ್ಯಂತ ಮುಕ್ತವಾಗಿ ಪ್ರಯಾಣಿಸಲು ಸ್ಪೈನ್ ಸರಕಾರ ಅವಕಾಶ ಮಾಡಿಕೊಟ್ಟಿದೆ.

ಇನ್ನು ಬ್ರಿಟನ್‌ ಹಾಗೂ ವೀಸಾ ಮುಕ್ತ ಪ್ರಯಾಣಕ್ಕೆ ಅನುಮತಿ ಇರುವ 26 ಯುರೋಪಿಯನ್‌ ದೇಶಗಳ ಪ್ರವಾಸಿಗರ 14 ದಿನಗಳ ಕ್ವಾರಂಟೈನ್‌ ನಿರ್ಧಾರವನ್ನು ಸ್ಪೈನ್‌ ಕೈಬಿಟ್ಟಿದ್ದು, ಸಾರ್ವಜನಿಕವಾಗಿ ಸೇರಲು ಅವಕಾಶ ಕಲ್ಪಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next