Advertisement

ಸ್ಪೇಸ್‌ ಟೂರ್‌ ಶುರು; ಏನಿದು ಸ್ಪೇಸ್‌ ಟೂರಿಸಂ?

03:13 PM Sep 17, 2021 | Team Udayavani |

ಸ್ಪೇಸ್‌ ಎಕ್ಸ್‌ ದಿಗ್ಗಜ ಎಲನ್‌ ಮಸ್ಕ್ “ಬಾಹ್ಯಾಕಾಶ ಪ್ರವಾಸೋದ್ಯಮ’ಕ್ಕೆ ಚಾಲನೆ ನೀಡುವ ಮೂಲಕ ಮತ್ತೂಂದು ಮೈಲುಗಲ್ಲು  ನೆಟ್ಟಿದ್ದಾರೆ. ನಾಗರಿಕ ಬಾಹ್ಯಾಕಾಶ ನೌಕೆ ಮೂಲಕ ವೃತ್ತಿಪರರಲ್ಲದ ನಾಲ್ವರನ್ನು ಗಗನಯಾತ್ರೆಗೆ ಕಳುಹಿಸಿದ್ದಾರೆ…

Advertisement

ಏನಿದು ಸ್ಪೇಸ್‌ ಟೂರಿಸಂ? :

ನಾಗರಿಕರನ್ನು ಭೂ ಕಕ್ಷೆಯ ಸುತ್ತಾಟಕ್ಕೆ ಕಳುಹಿಸುವ ಯೋಜನೆ. ಸ್ಪೇಸ್‌ ಎಕ್ಸ್‌ ತನ್ನ ಪುನರ್ಬಳಕೆಯ “ಫಾಲ್ಕನ್‌ 9′ ರಾಕೆಟ್‌ನ “ಇನ್‌ಸ್ಪಿರೇಷನ್‌ 4 ಮಿಷನ್‌’ ನೌಕೆಯಲ್ಲಿ ನಾಲ್ವರನ್ನು ಕೂರಿಸಿ, ಬುಧವಾರ ರಾತ್ರಿ ಈ ಯಾತ್ರೆಗೆ ಚಾಲನೆ ನೀಡಿದೆ.

ಎಲ್ಲಿಯವರೆಗೆ ಪ್ರಯಾಣ?: ಸ್ಪೇಸ್‌ ಎಕ್ಸ್‌ ಹಾರಿಬಿಟ್ಟ ಇನ್‌ಸ್ಪಿರೇಶನ್‌  4 ನೌಕೆಯು ಭೂಮೇಲ್ಮೆ„ನಿಂದ 675 ಕಿ.ಮೀ. ದೂರದಲ್ಲಿ ಹಾರಾಟ ನಡೆಸಲಿದೆ. ಅಂತಾ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತಲೂ ಎತ್ತರದಲ್ಲಿ ಹಾರಾಡಲಿದೆ.

ನಾಲ್ವರು ನಭಕ್ಕೆ!:

Advertisement

ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ವೃತ್ತಿಪರರಲ್ಲದ ನಾಲ್ವರು  ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದಾರೆ. ಸ್ಪೇಸ್‌ ಎಕ್ಸ್‌ನ ಉದ್ಯಮದ ಜತೆ ಕೈಜೋಡಿಸಿರುವ ಬಿಲಿಯನೇರ್‌ ಜಾರೆಡ್‌ ಐಸಾಕ್‌ಮನ್‌ ಜತೆಗೆ ಹ್ಯಾಲೆ ಆರ್ಸೆನಿಯಾಕ್ಸ್‌, ಸಿಯಾನ್‌ ಪ್ರೊಕ್ಟರ್‌, ಕ್ರಿಸ್‌ ಸೆಂಬ್ರೊಸ್ಕಿ  ನೌಕೆಯಲ್ಲಿದ್ದಾರೆ.

ಕ್ಯಾನ್ಸರ್‌ ಗೆದ್ದಾಕೆ  ಮೊದಲ ಪ್ಯಾಸೆಂಜರ್‌ :

ಕ್ಯಾನ್ಸರ್‌ನಿಂದ ಬದುಕುಳಿದ, 29 ವರ್ಷದ ಹ್ಯಾಲೆ ಆರ್ಸೆನಿಯಾಕ್ಸ್‌ಗೆ ಸ್ಪೇಸ್‌ ಎಕ್ಸ್‌ ತನ್ನ “ಮೊದಲ ನಾಗರಿಕ ಪ್ರಯಾಣಿಕ’ ಗೌರವ ನೀಡಿದೆ. ಮೂಳೆ ಕ್ಯಾನ್ಸರ್‌ ಚಿಕಿತ್ಸೆ ಕಾರಣ ಈಕೆಯ ಎಡಗಾಲಿಗೆ ರಾಡ್‌ ಅಳವಡಿಸಲಾಗಿದೆ.

5 ತಿಂಗಳ ತಾಲೀಮು : ನಾಲ್ವರು ಪ್ರಯಾಣಿಕರಿಗೆ ಸ್ಪೇಸ್‌ ಎಕ್ಸ್‌  5 ತಿಂಗಳು ಕಠಿನ ತರಬೇತಿ ನೀಡಿತ್ತು. ಬಾಹ್ಯಾಕಾಶದ ಫಿಟ್ನೆಸ್‌, ಕೇಂದ್ರಾಪಗಾಮಿ, ಮೈಕ್ರೋ ಗ್ರಾವಿಟಿ ಬ್ಯಾಲೆನ್ಸ್‌, ಎಮರ್ಜೆನ್ಸಿ ಡ್ರಿಲ್‌, ನಿರಂತರ ವೈದ್ಯಕೀಯ ಪರೀಕ್ಷೆ ಕೈಗೊಂಡಿತ್ತು.

90 ನಿಮಿಷದಲ್ಲಿ ಭೂಮಿಗೆ ಸುತ್ತು! : ನೌಕೆಯ ವೇಗವು ಶಬ್ದದ ವೇಗಕ್ಕಿಂತ  22 ಪಟ್ಟು ಅಧಿಕ, ಗಂಟೆಗೆ 27,600 ಕಿ.ಮೀ. ಕ್ರಮಿಸಲಿದೆ. ಭೂಮಿಗೆ ಒಂದು ಸುತ್ತು ಬರಲು ಈ ನೌಕೆಗೆ ಕೇವಲ 90 ನಿಮಿಷ ಸಾಕು!

ಟಿಕೆಟ್‌ ದರವೆಷ್ಟು? : 200 ಮಿಲಿಯನ್‌ ಡಾಲರ್‌

Advertisement

Udayavani is now on Telegram. Click here to join our channel and stay updated with the latest news.

Next