Advertisement

ಬಾಹ್ಯಾಕಾಶಕ್ಕೆ ಜಿಗಿದ ಸ್ಪೇಸ್‌ ಎಕ್ಸ್‌ ರಾಕೆಟ್‌ 

03:45 AM Feb 20, 2017 | |

ಕೇಪ್‌ಕೆನರವಲ್‌:  ಸುಮಾರು ಅರ್ಧ ಶತಮಾನ ಹಿಂದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೈಗೊಂಡಿದ್ದ ಚಂದ್ರಯಾನದ ರಾಕೆಟ್‌ ಲಾಂಚ್‌ ಪ್ಯಾಡ್‌ನಿಂದಲೇ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ಪೇಸ್‌ ಎಕ್ಸ್‌ ರಾಕೆಟ್ಟನ್ನು ಉಡ್ಡಯನ ಮಾಡಿದೆ. 

Advertisement

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಸರಂಜಾಮುಗಳನ್ನು ಹೊತ್ತ ಸ್ಪೇಸ್‌ಎಕ್ಸ್‌ ಫಾಲ್ಕನ್‌ ರಾಕೆಟ್‌ ಭಾನುವಾರ ಬೆಳಗ್ಗಿನ ಜಾವ ನಭಕ್ಕೆ ನೆಗೆದಿದೆ. ರಾಕೆಟ್‌ ಯಶಸ್ವಿಯಾಗಿ ಅಂ.ರಾ.ಬಾಹ್ಯಾಕಾಶ ಕೇಂದ್ರ ತಲುಪಿದೆ. ಈ ಲಾಂಚ್‌ ಪ್ಯಾಡ್‌ ಅನ್ನು ಆರು ವರ್ಷಗಳ ಹಿಂದೆ ನಾಸಾ ತನ್ನ ಕೊನೆಯ ಸ್ಪೇಸ್‌ ಷಟಲ್‌ ಯೋಜನೆಗೆ ಬಳಸಿಕೊಂಡಿತ್ತು. 
 

Advertisement

Udayavani is now on Telegram. Click here to join our channel and stay updated with the latest news.

Next