Advertisement

ಅಂತರಿಕ್ಷ ಗೆದ್ದರೂ ಅಂತರಂಗ ಗೆಲ್ಲಲು ಸಾಧ್ಯವಾಗಿಲ್ಲ: ಸ್ವಾಮೀಜಿ

02:41 PM Jan 12, 2018 | Team Udayavani |

ಕೆಂಭಾವಿ: ಮನುಷ್ಯ ಆಧುನಿಕ ಜೀವನ ಶೈಲಿ ಅಳವಡಿಸಿಕೊಳ್ಳುವ ತವಕದಲ್ಲಿ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಯೋಚಿಸುತ್ತಿಲ್ಲ. ಅಂತರೀಕ್ಷವನ್ನೆ ಗೆದ್ದಿರುವ ನಮಗೆ ನಮ್ಮ ಅಂತರಂಗವನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಶಾಂತರುದ್ರಮುನಿ ಸ್ವಾಮೀಜಿ ಹೇಳಿದರು.

Advertisement

ಸಮೀಪದ ಕರಡಕಲ ಗ್ರಾಮದ ಕೋರಿಸಿದ್ದೇಶ್ವರ ಶಾಖಾಮಠದಲ್ಲಿ ಈಚೆಗೆ ನಡೆದ ಸಿದ್ದಪರ್ವತದ ಬಗಳಾಂಬದೇವಿಯ ಜಾತ್ರೋತ್ಸವದ ನಿಮಿತ್ಯ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಯುವ ಸಮೂಹ ಆಧುನಿಕತೆಯ ಭರಾಟೆಯಲ್ಲಿ ಧಾರ್ಮಿಕ ಚಟುವಟಿಕೆಗಳತ್ತ ಗಮನ ಕಡಿಮೆಗೊಳಿಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕಲಬುರಗಿಯ ವರ್ಣಸಿಂದು ನೃತ್ಯ ಕಲಾ ಕೇಂದ್ರ ನಡೆಸಿಕೊಟ್ಟ ನವದುರ್ಗೆಯರ ನೃತ್ಯರೂಪಕ, 1008 ಜನ ರೈತರಿಗೆ ತಲೆಗೆ ಪೇಟ ಸುತ್ತುವುದು, 203ನೇ ಶಿವಾನುಭವ ಗೋಷ್ಠಿ ಕಣ್ಮನ ಸೆಳೆಯಿತು. 

ಮುದನೂರ ಮಲ್ಲಿಕಾರ್ಜುನ ದೇವರು ನೇತೃತ್ವ ವಹಿಸಿದ್ದರು. ಮಾಜಿ ಸಚಿವ ಶರಣಬಸಪ್ಪಗೌಡ ದರ್ಶಾನಪೂರ, ಜಿಪಂ
ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್‌ ಪಾಟೀಲ, ಸಂಗನಗೌಡ ವಜ್ಜಲ, ರಾಜಕುಮಾರ ನಾಯಕ ಸುರಪುರ, ಶರಣಬಸವ ಡಿಗ್ಗಾವಿ, ವಾಮನರಾವ ದೇಶಪಾಂಡೆ, ಹಣಮಂತ್ರಾಯ ನಿಲವಂಜಿ, ಸಂಗನಗೌಡ ಮರಡ್ಡಿ, ಡಾ| ಅನ್ನದಾನಯ್ಯ ಹಿರೇಮಠ, ನಾನಾಗೌಡ ಮೇಟಿ, ಸಿದ್ದನಗೌಡ ಮಾಳಳ್ಳಿ, ಮಾನಶೆಪ್ಪ ಘಂಟಿ, ಅಣ್ಣೆಪ್ಪಗೌಡ ಪಾಟೀಲ, ಬಸನಗೌಡ ಮರಡ್ಡಿ ಇದ್ದರು. ಮಠದ ವಕ್ತಾರ ಶಿವಪ್ರಕಾಶ ಸ್ವಾಗತಿಸಿದರು. ಮಲ್ಲಿಕಾರ್ಜುನ ಪರಸನಹಳ್ಳಿ ನಿರೂಪಿಸಿದರು. ರವಿರಾಜ ಕಂದಳ್ಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next