Advertisement

Space Station: ರಷ್ಯಾದ ಗಗನನೌಕೆಯಿಂದ ಹೊರಬಿದ್ದ ವಿಷಕಾರಿ ಅನಿಲ!

03:31 AM Dec 01, 2024 | Team Udayavani |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಮತ್ತೂಂದು ಅನಪೇಕ್ಷಿತ ಘಟನೆ ನಡೆದಿದೆ. ರಷ್ಯಾದ ಗಗನನೌಕೆಯೊಂದು ಐಎಸ್‌ಎಸ್‌ಗೆ ಬಂದು ಸೇರುತ್ತಿದ್ದಂತೆ ಅದರಿಂದ ವಿಷಕಾರಿ ವಾಸನೆ ಬರುತ್ತಿರುವುದು ಗೊತ್ತಾಗಿದೆ! ಆದರೆ, ಇದರಿಂದ ಏನು ಅಪಾಯ ಎದುರಾಗಿದೆ ಎಂಬ ಮಾಹಿತಿಯನ್ನು ನಾಸಾ ನೀಡಿಲ್ಲ.

Advertisement

ಈ ಘಟನೆ ಕಳೆದ ವಾರ ನಡೆದಿದ್ದು, ಈಗ ನಾಸಾ ಮಾಹಿತಿಯನ್ನು ಹೊರ ಹಾಕಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳಿಗೆ ಅಗತ್ಯ ವಸ್ತುಗಳನ್ನು ಹೊತ್ತಿದ್ದ ಈ ನೌಕೆ ಕಜಕಿಸ್ಥಾನದಿಂದ ನ.21ರಂದು ಉಡಾವಣೆಯಾಗಿತ್ತು. ಗಗನನೌಕೆಯ ಹ್ಯಾಚ್‌(ಬಾಗಿಲು) ತೆರೆಯುತ್ತಿದ್ದಂತೆ ವಿಷಕಾರಿ ಅನಿಲ ಹೊರ ಸೂಸುತ್ತಿರುವುದು ಮತ್ತು ಕೆಲವು ಹನಿಗಳು ಬೀಳುತ್ತಿರುವುದನ್ನು ಅಲ್ಲಿದ್ದ ಗಗನಯಾತ್ರಿಗಳು ಗುರುತಿಸಿ ದ್ದಾರೆ. ಆಗ ಕೂಡಲೇ ಗಗನಯಾತ್ರಿಗಳು ಹ್ಯಾಚ್‌ ಬಂದ್‌ ಮಾಡಿದ್ದಾರೆ. ಅಲ್ಲದೇ, ರಷ್ಯಾದ ವಿಭಾಗವನ್ನು ಪೂರ್ತಿ ಮುಚ್ಚಿದ್ದಾರೆ.

ಇನ್ನೂ 6 ತಿಂಗಳವರೆಗೆ ಐಎಸ್‌ಎಸ್‌ನಲ್ಲೇ ಇರಲಿರುವ ನೌಕೆ, ಬಳಿಕ ಹಿಂದಿರು ಗಲಿದೆ. ಹಾಗೆ ಹಿಂದಿರುಗುವಾಗ ಅದು ನಿಲ್ದಾಣದಲ್ಲಿ ಉತ್ಪತ್ತಿಯಾಗಿರುವ ಕಸವನ್ನು ಭೂಮಿಯ ವಾತಾವರಣದಲ್ಲಿ ಬಿಡಲಿದೆ ಎಂದು ನಾಸಾ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next