Advertisement

Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!

03:58 AM Nov 17, 2024 | Team Udayavani |

ನವದೆಹಲಿ: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯು ಈಗ ಎಲಾನ್‌ ಮಸ್ಕ್ ಮಾಲೀಕತ್ವದ ಸ್ಪೇಸ್‌ಎಕ್ಸ್‌ನೊಂದಿಗೆ ಸಹಭಾಗಿತ್ವ ಸಾಧಿಸಿದ್ದು, ಮುಂದಿನ ವಾರವೇ ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್‌-20(ಜಿಸ್ಯಾಟ್‌ ಎನ್‌-2) ಅನ್ನು ಹೊತ್ತು ಸ್ಪೇಸ್‌ಎಕ್ಸ್‌ನ ಫಾಲ್ಕನ್‌-9 ರಾಕೆಟ್‌ ನಭಕ್ಕೆ ಚಿಮ್ಮಲಿದೆ.

Advertisement

ಮರುಬಳಕೆಯ ಮತ್ತು ಅಗ್ಗದ ಫಾಲ್ಕನ್‌ 9 ರಾಕೆಟ್‌ ಮೂಲಕ ಅಮೆರಿಕದ ಕೇಪ್‌ ಕಾರ್ನಿವಾಲ್‌ನಿಂದ ಜಿಸ್ಯಾಟ್‌-20 ಉಪಗ್ರಹದ ಉಡಾವಣೆ ನಡೆಯಲಿದೆ.  ಜಿಸ್ಯಾಟ್‌-20 ಉಪಗ್ರಹವು ಬರೋಬ್ಬರಿ 4700 ಕೆ.ಜಿ. ತೂಕವಿದೆ. ಅದನ್ನು ಭಾರತದ ಅತಿದೊಡ್ಡ ಉಡಾವಣಾ ನೌಕೆ “ಬಾಹುಬಲಿ’ ಜಿಎಸ್‌ಎಲ್‌ವಿ ಮಾರ್ಕ್‌-3)ಗೆ ಕೂಡ ಹೊತ್ತೂಯ್ಯಲು ಸಾಧ್ಯವಿಲ್ಲ. ಏಕೆಂದರೆ, ಬಾಹುಬಲಿ ಗರಿಷ್ಠ 4,100 ಕೆ.ಜಿ. ತೂಕ ಹೊರಬಲ್ಲ ಸಾಮರ್ಥ್ಯವಷ್ಟೇ ಹೊಂದಿದೆ.

ಈಗ ನಾವು ಸ್ಪೇಸ್‌ಎಕ್ಸ್‌ನೊಂದಿಗೆ ಚೊಚ್ಚಲ ಉಪಗ್ರಹ ಉಡಾವಣೆಯ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಇಸ್ರೋದ ವಾಣಿಜ್ಯಿಕ ಅಂಗವಾದ ಬೆಂಗಳೂರು ಮೂಲದ ನ್ಯೂ ಸ್ಪೇಸ್‌ ಇಂಡಿಯಾ ಲಿ.(ಎನ್‌ಎಸ್‌ಐಎಲ್‌) ಮುಖ್ಯಸ್ಥ ರಾಧಾಕೃಷ್ಣನ್‌ ದುರೈರಾಜ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next