Advertisement

ಬಾಹ್ಯಾಕಾಶ ಕೇಂದ್ರದಲ್ಲಿ ಚಾಕೋಲೆಟ್‌ ಸಿದ್ಧ!

09:48 AM Jan 26, 2020 | Hari Prasad |

ಕೇಪ್‌ ಕೆನೆವರಾಲ್‌: ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾತ್ರಿಗಳ ಆಹಾರವನ್ನು ಭೂಮಿಯಿಂದಲೇ ತೆಗೆದುಕೊಂಡುಹೋಗಿ ಸಂಗ್ರಹಿಸುವ ಕಾಲ ಮುಗಿಯಿತೇನೋ? ಏಕೆಂದರೆ ಭೂಮಿಯ ವ್ಯಾಪ್ತಿ ಮೀರಿದ ಪ್ರದೇಶದಲ್ಲಿ ಆಹಾರ ಸಿದ್ಧಪಡಿಸುವ ಪ್ರಯತ್ನವನ್ನು ಅಮೆರಿಕದ ಗಗನ ಯಾತ್ರಿ ಕ್ರಿಸ್ಟೀನಾ ಕೋಚ್‌ ಮತ್ತು ಇಟೆಲಿಯ ಲೂಸಾ ಪರ್ಮಿಟಾನೋ ನಡೆಸಿದ್ದಾರೆ.

Advertisement

ಅವರು ಚಾಕೊಲೆಟ್‌ ಚಿಪ್‌ ಕುಕಿ ಸಿದ್ಧಪಡಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಅದಕ್ಕಾಗಿ ಒಟ್ಟು ಎರಡು ಗಂಟೆಗಳ ಶ್ರಮ ವ್ಯಯ ಮಾಡಿದ್ದಾರೆ. ಆದರೆ ಅಲ್ಲಿ ಸಿದ್ಧಪಡಿಸಿದ ಕುಕಿಗಳು ತಿನ್ನಲು ಸುರಕ್ಷಿತವೇ ಎಂಬುದರ ಬಗ್ಗೆ ಇನ್ನಷ್ಟೇ ಪರೀಕ್ಷೆ ಗಳು ನಡೆಯಬೇಕಾಗಿವೆ.

ಎರಡು ವಾರಗಳ ಹಿಂದೆ ಸ್ಪೇಸ್‌ ಎಕ್ಸ್‌ನ ಗಗನ ನೌಕೆಯ ಮೂಲಕ ಬಾಹ್ಯಾಕಾಶ ಕೇಂದ್ರದಿಂದ ಅಮೆರಿಕದ ಹ್ಯೂಸ್ಟನ್‌ಗೆ ಆಗಮಿಸಿದ್ದ ಕ್ರಿಸ್ಟೀನಾ ಕೋಚ್‌ ಮತ್ತು ಇಟೆಲಿಯ ಲೂಸಾ ಪರ್ಮಿಟಾನೋ ತಮ್ಮ ಮೊದಲ ಪ್ರಯೋಗದ ಬಗ್ಗೆ ವಿವರಣೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next