Advertisement

ಗೋ ಕಳವು, ಅಕ್ರಮ ಸಾಗಾಟ ವಿರುದ್ಧ ಕಣ್ಗಾವಲು

11:05 AM Jun 29, 2019 | keerthan |

ಮಂಗಳೂರು: ಗೋ ಕಳವು ಮತ್ತು ಅಕ್ರಮ ಸಾಗಾಟ ಪ್ರಕರಣವನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿ ಗಣಿಸಿದ್ದು, ಇವುಗಳ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

Advertisement

ಅವರು ಶುಕ್ರವಾರ ಫೋನ್‌ ಇನ್‌ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಜೋಕಟ್ಟೆ ಪ್ರಕರಣದಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದರು.

ಗೋವು ಕಳ್ಳತನಕ್ಕೆ ಸಂಬಂಧಿಸಿ ಹಳೆ ಆರೋಪಿಗಳ ಬಗ್ಗೆ ನಿಗಾ ಇರಿಸಲಾಗುತ್ತಿದೆ. ಎಲ್ಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಬಿಗಿ ಗೊಳಿಸುವುದರ ಜತೆಗೆ ಹೆಚ್ಚಿಸಲಾಗುತ್ತಿದೆ. ಗೋ ಕಳವು ಅಪರಾಧಿಗಳ ಚಟುವಟಿಕೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಅವರ ಮನೆಗಳಲ್ಲಿಯೂ ತಪಾಸಣೆ ನಡೆಸಲಾಗುವುದು. ಕೆಲವು ನಿರ್ದಿಷ್ಟ ಪ್ರದೇಶಗಳ ಗೋ ಕಳವು ಅಪರಾಧಿಗಳ ಮೇಲೂ ನಿಗಾ ಇರಿಸಲಾಗಿದೆ ಎಂದರು.

ಮಂಗಳೂರು ನಗರ ಮಾತ್ರ ವಲ್ಲದೆ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಿಗೆ ಸಂಬಂಧಿಸಿದ ಇಂತಹ ಅಪರಾಧಿಗಳ ಬಗ್ಗೆಯೂ ಸಂಬಂಧಪಟ್ಟ ಪೊಲೀಸ್‌ ವರಿಷ್ಠರಿಗೆ ಪತ್ರ ಬರೆಯಲಾಗಿದೆ. ಕುಟ್ಟ ಇಮ್ರಾನ್‌, ಬಶೀರ್‌, ಅನ್ಸಾರ್‌ ಮೊದಲಾದ ತಲೆಮರೆಸಿಕೊಂಡಿರುವ ಗೋ ಕಳವು ಅಪರಾಧಿಗಳನ್ನು ಬಂಧಿ ಸಲು ವಿಶೇಷ ತಂಡದ ಮೂಲಕ ಪತ್ತೆ ನಡೆಯುತ್ತಿದೆ ಎಂದು ತಿಳಿಸಿದರು.

“ಕಾನೂನು ಕೈಗೆತ್ತಿಕೊಳ್ಳದಿರಿ; ನಮಗೆ ಮಾಹಿತಿ ಕೊಡಿ ‘ ಅಕ್ರಮ ಗೋ ಸಾಗಾಟ, ಗೋ ಕಳವಿಗೆ ಸಂಬಂಧಿಸಿ ಮಾಹಿತಿ ದೊರಕಿದಾಗ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಮನವಿ ಮಾಡಿದ ಪೊಲೀಸ್‌ ಆಯುಕ್ತರು, ಅಕ್ರಮ ವ್ಯವಹಾರದ ಬಗ್ಗೆ ಮಾಹಿತಿ ಕೊಡಿ; ನಾವು ಕಠಿನ ಕ್ರಮ ಕೈಗೊಳ್ಳು ತ್ತೇವೆ ಎಂದರು. ರಾತ್ರಿ ಗಸ್ತು ಕಾರ್ಯಾಚರಣೆ ಜತೆಗೆ ನಾಕಾಬಂದಿ ಮಾಡಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next