Advertisement

ಸಮಾಜವಾದಿ ಪಕ್ಷದ ನಾಯಕ ಶಾಸಕ ಅಜಂ ಖಾನ್‌ ಅನರ್ಹ

10:00 PM Oct 28, 2022 | Team Udayavani |

ಲಕ್ನೋ: ದ್ವೇಷ ಭಾಷಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

Advertisement

ಶುಕ್ರವಾರ ಸಂಜೆ ಅವರ ರಾಂಪುರ ಕ್ಷೇತ್ರವನ್ನು “ತೆರವಾದ ಕ್ಷೇತ್ರ’ ಎಂದು ಉತ್ತರಪ್ರದೇಶ ಸ್ಪೀಕರ್‌ ಘೋಷಿಸಿದ್ದಾರೆ.

2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ಅಜಂ ಖಾನ್‌ ದ್ವೇಷಪೂರಿತ ಭಾಷಣ ಮಾಡಿದ್ದರು. ಗುರುವಾರ ಈ ಪ್ರಕರಣದ ತೀರ್ಪು ನೀಡಿದ್ದ ಕೋರ್ಟ್‌, ಅಜಂ ಖಾನ್‌ರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಕ್ರಿಮಿನಲ್‌ ಪ್ರಕರಣದಲ್ಲಿ ಶಾಸಕ, ಎಂಎಲ್‌ಸಿ ಅಥವಾ ಸಂಸದ ದೋಷಿ ಎಂದು ಸಾಬೀತಾದರೆ ಮತ್ತು ಕನಿಷ್ಠ 2 ವರ್ಷ ಜೈಲು ಶಿಕ್ಷೆಯಾದರೆ ಅಂಥವರು ತತ್‌ಕ್ಷಣದಿಂದಲೇ ಸದನದ ಸದಸ್ಯತ್ವ ಕಳೆದುಕೊಳ್ಳುತ್ತಾರೆ ಎಂದು 2013ರಲ್ಲೇ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಅದರಂತೆ, ಅಜಂ ಖಾನ್‌ ಅವರು ಶಾಸಕತ್ವವನ್ನು ಗುರುವಾರವೇ ಕಳೆದುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next