Advertisement

ಗವಿಮಠದಲ್ಲಿ ಕಸಗುಡಿಸಿದ ಎಸ್ಪಿ

11:06 PM Jan 17, 2020 | Lakshmi GovindaRaj |

ಕೊಪ್ಪಳ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಶ್ರಮಿಸಿದ ಕಾರ್ಮಿಕರಿಗೆ ಗವಿಸಿದ್ದೇಶ್ವರ ಶ್ರೀಗಳು ಗುರುವಾರ ಸ್ವತಃ ಉಪಾಹಾರ ಬಡಿಸಿದ ಬೆನ್ನಲ್ಲೇ, ಕೊಪ್ಪಳ ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಜಿ. ಸಂಗೀತಾ ಹಾಗೂ ತಂಡ ಶುಕ್ರವಾರ ಸ್ವಚ್ಛತಾ ಕಾರ್ಯದಲ್ಲಿ ಶ್ರಮದಾನ ಮಾಡಿ ಸರಳತೆ ಮೆರೆದಿದೆ.

Advertisement

ಗವಿಸಿದ್ದೇಶ್ವರ ಸ್ವಾಮೀಜಿಗಳು ಭಕ್ತರಿಗೆ ಹೇಳುವುದಕ್ಕಿಂತ ತಾವೇ ಕಾಯಕದಲ್ಲಿ ತೊಡಗಿ ಇತರರನ್ನು ಕಾಯಕದಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ. ಜಾತ್ರೆಗೆ ಬಂದ ಭಕ್ತರು ಮಠದ ಆವರಣ, ಗುಡ್ಡದ ಪ್ರದೇಶದಲ್ಲಿ ಕಸ ಬಿಸಾಡಿದ್ದರೆ, ಎಲ್ಲೆಂದರಲ್ಲಿ ಕಸ, ತ್ಯಾಜ್ಯ ಹಾಕಿದ್ದನ್ನು ಶ್ರೀಗಳೇ ಸ್ವಚ್ಛಗೊಳಿಸುತ್ತಿದ್ದಾರೆ.

ಇದರಿಂದ ಪ್ರೇರಣೆಗೊಂಡ ಎಸ್‌ಪಿ ಸಹ ಸುಮಾರು 3 ಗಂಟೆ ಶ್ರಮದಾನ ಮಾಡಿದರು. ಇವರೊಟ್ಟಿಗೆ ಪೊಲೀಸ್‌ ತಂಡ ಕೈಜೋಡಿಸಿತು. ಬಳಿಕ ಮಠದ ದಾಸೋಹ ಭವನದಲ್ಲಿ ಪ್ರಸಾದ ಬಡಿಸಿ ಸೇವೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next