Advertisement

ಸಂಗೀತ ಮೂಲಕ ಹಿಮೋಫಿಲಿಯಾ ಪೀಡಿತರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಎಸ್ ಪಿಬಿ

03:47 PM Sep 25, 2020 | sudhir |

ದಾವಣಗೆರೆ : ಕರ್ನಾಟಕ ಹಿಮೋಫಿಲಿಯಾ ಪೀಡಿತರ ಚಿಕಿತ್ಸೆಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸೇವೆ ಅಪಾರ, ತಾವು ನಡೆಸುತ್ತಿದ್ದ ಸಂಗೀತ ಕಾರ್ಯಕ್ರಮಗಳ ಮೂಲಕ ರೋಗಿಗಳ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು.

Advertisement

ದಾವಣಗೆರೆಯ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಯಲ್ಲಿ 2010 ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಮಲ್ಲಿಕಾರ್ಜುನ ಕಡಕೋಳರವರ ಕುಸುಮ2010 ಬಿಡುಗಡೆ ಮಾಡಿದ್ದ ಸಂದರ್ಭ.

ಅದೇ ದಿನ ಸಂಜೆ ಶಿವಯೋಗಿ ಮಂದಿರದ ಆವರಣದಲ್ಲಿ ಸಂಗೀತ ಸಂಜೆ ನಡೆಸಿಕೊಟ್ಟಿದ್ದರು. ಅರ್ಚನಾ ಉಡುಪ ಇತರರು ಸಾಥ್ ನೀಡಿದ್ದರು.

ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಮಹಾಪೋಷಕರಾಗಿದ್ದ ಅವರು ಸಂಗೀತ ಸಂಜೆ ಮೂಲಕ ಹಿಮೋಫಿಲಿಯಾ ಪೀಡಿತರ ಚಿಕಿತ್ಸೆಗೆ ಸಹಾಯ ಮಾಡಿದ್ದರು.

Advertisement

ಹಿಮೋಫಿಲಿಯಾ ಪೀಡಿತರ ನೆರವಿಗೆ ಟೊಂಕ ಕಟ್ಟಿ ನಿಂತಿದ್ದರು. ಸೊಸೈಟಿ ಬೆಳವಣಿಗೆಗೆ ಸಾಕಷ್ಟು ಕೊಡುಗೆ ಸಹ ನೀಡಿದ್ದರು. ದಾವಣಗೆರೆಯ ಸೋಮೇಶ್ವರ ವಿದ್ಯಾಲಯದಲ್ಲಿ ನಡೆದ ಸೋಮೇಶ್ವರೋತ್ಸವ ದಲ್ಲಿ ಭಾಗವಹಿಸಿದ್ದರು. ಅದು ದಾವಣಗೆರೆಯ ಕೊನೆಯ ಭೇಟಿ. ದೂರದ ಮದ್ರಾಸ್ ನವರಾದರೂ ದಾವಣಗೆರೆ ಜೊತೆಗೆ ಬಹಳ ಒಡನಾಟ ಹೊಂದಿದ್ದರು.

ಸ್ವರ ಮಾಣಿಕ್ಯ ಗಾನ ಲೀನ : ಇನ್ನಷ್ಟು ಸುದ್ದಿಗಳು:

ಫಲಿಸದ ಅಭಿಮಾನಿಗಳ ಹಾರೈಕೆ ; ಗಾನ ನಿಧಿ ಎಸ್.ಪಿ. ಬಾಲಸುಬ್ರಮಣ್ಯಂ ಸ್ವರ ಲೀನ

ಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ

‘ಪ್ರೇಮದ ಹೂಗಾರ ಈ ಹಾಡುಗಾರ… ಹೂ ನೀಡುತಾನೆ.. ಮುಳು ಬೇಡುತಾನೆ..’: ಹೋಗಿ ಬನ್ನಿ SPB

ಸರಳತೆಯಲ್ಲಿ ಇಂದಿನ ಕಲಾವಿದರಿಗೆ ಎಸ್ ಪಿಬಿ ಮಾದರಿ: ಗುರುಕಿರಣ್ ನೆನಪಿಸಿಕೊಂಡಂತೆ…

 ಕನ್ನಡ ಹಾಡುಗಳು ಅಂದರೆ ಎಸ್‌ಪಿಬಿ ಎನ್ನುವಷ್ಟು ಹುಚ್ಚು ಹಿಡಿಸಿದ್ದ ಅವರೂಪದ ಗಾಯಕ: ಕವಿರಾಜ್

Advertisement

Udayavani is now on Telegram. Click here to join our channel and stay updated with the latest news.

Next