Advertisement

ಟಾರ್ಗೆಟ್‌ ಈಗಲ್ಟನ್‌ ರೆಸಾರ್ಟ್‌? ರಾಮನಗರ ಎಸ್ಪಿಯಾಗಿ ಅಣ್ಣಾಮಲೈ ವರ್ಗ

07:18 PM May 17, 2018 | udayavani editorial |

ಬೆಂಗಳೂರು : ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೇ ಒಂದು ಲಕ್ಷ ವರೆಗಿನ ರೈತರ ಬೆಳೆ ಸಾಲವನ್ನು ಮನ್ನಾ ಮಾಡುವ ನಿರ್ಧಾರವನ್ನು ತಮ್ಮ ಸರಕಾರ ಇನ್ನೆರಡು ದಿನಗಳ ಒಳಗೆ ಕೈಗೊಳ್ಳುವುದಾಗಿ ಹೇಳಿ ರಾಜ್ಯದ ರೈತಾಪಿ ವರ್ಗದಲ್ಲಿ ಸಂಚಲನ ಉಂಟುಮಾಡಿದ್ದ ಬಿ ಎಸ್‌ ಯಡಿಯೂರಪ್ಪ ಅವರು ತಮಗೆ ಬೇಕಾದ ಆಯಕಟ್ಟಿನ ಸ್ಥಳಗಳಿಗೆ ದಕ್ಷ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಆದೇಶ ಹೊರಡಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 

Advertisement

ಆ ಪ್ರಕಾರ ನಡೆದಿರುವ ವರ್ಗಾವಣೆಯಲ್ಲಿ  ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರನ್ನು ರಾಮನಗರಕ್ಕೆ ವರ್ಗಾಯಿಸಿರುವುದು ಬಹು ಮುಖ್ಯವಾಗಿದೆ. ಈಗಲ್ಟನ್‌ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಶಾಸಕರು ತಂಗಿರುವುದರಿಂದ ಕೂಡ ಈ ವರ್ಗಾವಣೆಗೆ ಮಹತ್ವ ಲಭಿಸಿದೆ. ಅಣ್ಣಾ ಮಲೈ ಅವರು ಈ ಹಿಂದೆ ಉಡುಪಿ ಎಸ್‌ಪಿಯಾಗಿಯೂ ದಕ್ಷತೆಯನ್ನು ಮರೆದು ಜನಪ್ರಿಯರಾಗಿದ್ದರು. 

ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಅವರು SP ಅಣ್ಣಾ ಮಲೈ ವರ್ಗಾವಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಕೀಯ ಕಾರಣಕ್ಕಾಗಿಯೇ ಅಣ್ಣಾಮಲೈ ವರ್ಗಾವಣೆ ಆಗಿದೆ ಎಂದವರು ಟೀಕಿಸಿದ್ದಾರೆ. 

ಅಣ್ಣಾಮಲೈ ರಾಮನಗರ ಎಸ್ಪಿಯಾಗಿ ವರ್ಗವಾಗುತ್ತಲೇ ಇತ್ತ ಈಗಲ್ಟನ್‌ ರೆಸಾರ್ಟ್‌ನಲ್ಲಿ ತಂಗಿರುವ 70ಕ್ಕೂ ಅಧಿಕ ಕಾಂಗ್ರೆಸ್‌ ಶಾಸಕರನ್ನು ಇಂದೇ ರಾತ್ರಿ 10 ಗಂಟೆ ಸುಮಾರಿಗೆ ಕೊಚ್ಚಿಗೆ ಶಿಫ್ಟ್ ಮಾಡುವ ಕಾರ್ಯಾಚರಣೆಗೆ ಸಿದ್ಧತೆ ನಡೆದಿದೆ. ಡಿ ಕೆ ಶಿವಕುಮಾರ್‌ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಸಿದ್ಧಗಂಗಾ ಶ್ರೀ ಭೇಟಿ ಮಾಡಿದ ಯಡಿಯೂರಪ್ಪ

Advertisement

ಈ ನಡುವೆ ಸಿಎಂ ಯಡಿಯೂರಪ್ಪ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶತೋತ್ತರ ಡಾ. ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಮಾಜಿ ಸಂಸದ ಜಿ ಎಸ್‌ ಬಸವರಾಜು ಸೇರಿದಂತೆ ಹಲವು ಬಿಜೆಪಿ ಮುಖಂಡರು ಯಡಿಯೂರಪ್ಪ ಜತೆಗೆ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next