Advertisement

ಮ.ಪ್ರ, ಉತ್ತರಾಖಂಡಕ್ಕೂ ಎಸ್‌ಪಿ-ಬಿಎಸ್‌ಪಿ ಮೈತ್ರಿ ಲಗ್ಗೆ

12:30 AM Feb 26, 2019 | |

ಲಕ್ನೋ/ಕೋಲ್ಕತ್ತಾ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಸೋಲಿಸಲೇಬೇಕು ಎಂಬ ವಿಪಕ್ಷಗಳ ಒಕ್ಕೂಟಕ್ಕೆ ಮತ್ತೂಂದು ಹಿನ್ನಡೆಯಾಗಿದೆ. ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಬಹುದು ಎಂದು ನಿರೀಕ್ಷಿ ಸಲಾಗಿದ್ದ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ ಮಧ್ಯಪ್ರದೇಶ, ಉತ್ತರಾ ಖಂಡಕ್ಕೂ ವಿಸ್ತರಣೆಯಾಗಿದೆ. ಮಧ್ಯ ಪ್ರದೇಶದಲ್ಲಿ ಸಮಾಜವಾದಿ ಪಕ್ಷ 3, ಬಿಎಸ್‌ಪಿ 26, ಉತ್ತರಾಖಂಡದಲ್ಲಿ ಎಸ್‌ಪಿ 1, ಬಿಎಸ್‌ಪಿ 4 ಕ್ಷೇತ್ರಗಳಲ್ಲಿ ಹುರಿಯಾಳುಗಳನ್ನು ಕಣಕ್ಕೆ ಇಳಿಸಲಿದೆ. 

Advertisement

ಇನ್ನು ಬಿಹಾರದಲ್ಲೂ ಮಹಾಮೈತ್ರಿಯ ಭಾಗವಾಗಿರುವುದಿಲ್ಲ ಎಂದು ಎಸ್‌ಪಿ-ಬಿಎಸ್ಪಿ ಘೋಷಿಸಿದ್ದು, ಈ ಮೂಲಕ ವಿಪಕ್ಷಗಳಿಗೆ ಮತ್ತೂಂದು ಆಘಾತ ನೀಡಿದೆ. ಪಾಟ್ನಾದಲ್ಲಿ ಮಾತನಾಡಿದ ಬಿಎಸ್‌ಪಿ ಬಿಹಾರ ಉಸ್ತುವಾರಿ ಲಾಲ್‌ ಮೇಧ್‌ಕರ್‌, ಬಿಹಾರದ ಎಲ್ಲ 40 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಲಿದೆ ಎಂದಿದ್ದಾರೆ. ಕಳೆದ ವಾರ ಹೊಸದಿಲ್ಲಿಯಲ್ಲಿ ನಡೆದಿದ್ದ ಪಕ್ಷದ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಯಾದಿ ಸಿದ್ಧಪಡಿಸಲೂ ಮಾಯಾವತಿ ಸೂಚಿಸಿದ್ದಾರೆ ಎಂದಿದ್ದಾರೆ.

ವಾಗ್ಧಾಳಿ: ಪುಲ್ವಾಮಾ ದುರಂತದಲ್ಲಿ ಹುತಾತ್ಮರಾಗಿರುವ ಯೋಧರ ಶವಗಳ ಮೇಲೆ ಮೋದಿ ಸರಕಾರ ರಾಜಕೀಯ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next