Advertisement

Soya Crop: ಸೋಯಾ ಅವರೆ ಹೊಸ ತಳಿ ಅಭಿವೃದ್ಧಿ

03:58 PM Aug 07, 2023 | Team Udayavani |

ದೊಡ್ಡಬಳ್ಳಾಪುರ: ಕೃಷಿ ವಿಶ್ವವಿದ್ಯಾನಿಲಯ ವಿಜ್ಞಾ ನಿಗಳ ತಂಡ ಅಭಿವೃದ್ಧಿಪಡಿಸಿರುವ ಸೋಯಾ ಅವರೆ ಯಲ್ಲಿ ಪೌಷ್ಟಿಕಾಂಶ ಸಮೃದ್ಧವಾಗಿದ್ದು, ಸಾಂಬಾರ್‌ಗೆ ಉಪಯೋಗಿಸುವ ಬೀನ್ಸ್‌, ಅವರೇಕಾಯಿ, ಸಿಕ್ಕಡಿ ಕಾಯಿ ಸಾಲಿಗೆ ಈಗ, ಹೊಸ ತಳಿಯಾದ ಸೋಯಾ ಅವರೆಯೂ ಸೇರಿಕೊಂಡಿದೆ.

Advertisement

ಕೆಬಿವಿಎಸ್‌-1(ಕರುಣೆ)ತಳಿ: ತರಕಾರಿ ಸೋಯಾ ಅವರೆ ತಳಿ ಕೆಬಿವಿಎಸ್‌-1 (ಕರುಣೆ) ಎಂಬ ತಳಿ ದ್ವಿದಳ ಧಾನ್ಯವಾಗಿದ್ದು ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ. ಇದು ಶೇ. 40 ಪ್ರೋಟಿನ್‌ ಮತ್ತು ಶೇ.20 ತೈಲವನ್ನು ಹೊಂದಿದ್ದು “ಅದ್ಭುತ ಬೆಳೆ’ ಎಂದೂ ಕರೆಯಲಾಗುತ್ತದೆ.

ಪಶುಗಳ ಆಹಾರ ತಯಾರಿಕೆಯಲ್ಲಿ 2/3 ಪಾಲು: ಚೀನಾ ಇದರ ಮೂಲದ ಪ್ರಾಥಮಿಕ ಕೇಂದ್ರವಾಗಿದ್ದು ಜಪಾನ್‌, ಆಗ್ನೇಯಾ ಏಷ್ಯಾ ಮತ್ತು ದಕ್ಷಿಣ ಮಧ್ಯ ಏಷ್ಯಾ ದ್ವಿತೀಯ ಮೂಲದ ಕೇಂದ್ರಗಳಾಗಿವೆ. ಇದನ್ನು ಮುಖ್ಯವಾಗಿ ಬ್ರೆಜಿಲ್‌, ಅಮೆರಿಕ, ಚೀನಾ ಹಾಗೂ ಭಾರತದಲ್ಲಿ ಬೆಳೆಯಲಾಗುತ್ತಿದೆ. ಪ್ರಪಂಚದ ಖಾದ್ಯ ತೈಲದ ಉತ್ಪಾದನೆಯಲ್ಲಿ ಇದರ ಪಾಲು ಶೇ.25 ಇದ್ದು ಮೀನು, ಕುಕ್ಕುಟ ಹಾಗೂ ಪಶುಗಳ ಆಹಾರ ತಯಾರಿಕೆಯಲ್ಲಿ ಇದರ ಪಾಲು 2/3 ರಷ್ಟು ಇದೆ. ಭಾರತದಲ್ಲಿ ಸೋಯಾ ಅವರೆಯನ್ನು 10.96 ದಶಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯ ಲಾಗುತ್ತಿದ್ದು ಉತ್ಪಾದಕತೆ 13.46 ದಶ‌ಲಕ್ಷ ಟನ್‌ಗಳಷ್ಟಿದೆ. ಇದನ್ನು ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ಕರ್ನಾಟಕ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಮುಖ್ಯವಾಗಿ ಬೆಳೆಯ ಲಾಗುತ್ತಿದ್ದು, ತರಕಾರಿ ಸೋಯಾ ವರೆ ಯನ್ನು ಅಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಭಾರತೀಯ ಮಾರುಕಟ್ಟೆ ಸಂಶೋಧನಾ ಬ್ಯೂರೊ àದ ವರದಿ ಪ್ರಕಾರ, ಭಾರತೀಯರಲ್ಲಿ ಪ್ರೋ ಟಿನ್‌ ಕೊರತೆ  ಶೇ.80ಕ್ಕಿಂತ ಹೆಚ್ಚು ಶಿಫಾರಸ್ಸು ಮಾಡಲಾದ ದೈನಂದಿನ ಪ್ರೋಟಿನ್‌ ಸೇವನೆ 60-90 ಗ್ರಾಂ ಆಗಿದ್ದರೆ, ಭಾರತೀಯರು ಸಾಮಾನ್ಯವಾಗಿ 10-30 ಗ್ರಾಂ ಮಾತ್ರ ಸೇವಿಸುತ್ತಾರೆ.

ಸಮತೋಲಿತ ಆಹಾರ: ಗ್ರಾಮೀಣ ಭಾಗದಲ್ಲಿ ಅಪೌಷ್ಟಿಕತೆ ಗಂಭೀರ ಸಮಸ್ಯೆಯಾಗಿದ್ದು ಮುಖ್ಯವಾಗಿ ಮಧ್ಯಪ್ರದೇಶ, ಜಾರ್ಖಂಡ್‌ ಮತ್ತು ಬಿಹಾರ ರಾಜ್ಯಗಳಲ್ಲಿ ಪೌಷ್ಟಿಕಾಂಶದ ಕೊರತೆ ಹೆಚ್ಚಾಗಿ ಕಂಡು ಬಂದಿದೆ. ಹೀಗಾಗಿ ಆರೋಗ್ಯ ಕರ ಮತ್ತು ಹೆಚ್ಚು ಸಮತೋಲಿತ ಆಹಾರ ಕ್ರಮಕ್ಕೆ ಅನುಕೂಲ ವಾಗು ವಂತೆ ವೈವಿಧ್ಯಮಯ ಹೆಚ್ಚು ಪೌಷ್ಟಿ ಕಾಂಶದ ಬೆಳೆಗಳನ್ನು ಹೆಚ್ಚಿನ ಭಾರತೀಯ ಜನಸಂಖ್ಯೆಗೆ ಉತ್ತೇಜಿಸುವುದು ಒಂದು ವಿಧಾನವಾಗಿದೆ. ತರಕಾರಿ ಸೋಯಾ ಅವರೆ ಭಾರತದಲ್ಲಿ ಪೌಷ್ಟಿಕಾಂಶವನ್ನು ಸುಧಾರಿಸಲು ಕಾರ್ಯ ಸಾಧ್ಯವಾದ ಮತ್ತು ಭರವ ಸೆಯ ಆಯ್ಕೆಯಾಗಿದೆ. ಇದು ಪ್ರೋಟೀನ್‌ ಮತ್ತು ಇತರೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ತರಕಾರಿ ಸೋಯಾ ಅವರೆಯನ್ನು ಎಲ್ಲಾ ತರಹದ ಅಂದರೆ ಕಪ್ಪು, ಕೆಂಪು ಮತ್ತು ಮರಳು ಮಿಶ್ರಿತ ಮಣ್ಣಿನಲ್ಲಿ ನೀರಾವರಿ ಅನುಕೂಲ ದಲ್ಲಿ ವರ್ಷದ ಎಲ್ಲಾ ಕಾಲಗಳಲ್ಲಿಯೂ ಬೆಳೆಯಬ ಹುದಾಗಿದೆ. ನಗರ ಪ್ರದೇಶ ಹಾಗೂ ಪಟ್ಟಣಗಳಲ್ಲಿ ಮನೆಯ ಕೈತೋಟ ಮತ್ತು ಮೇಲ್ಚಾವಣಿ ಕೈ ತೋಟ ಹಾಗೂ ಕುಂಡಗಳಲ್ಲಿ ತಾಜಾ ತರಕಾರಿಯಾಗಿ ಉಪಯೋಗಿಸಲು ಸೂಕ್ತವಾಗಿದೆ.

 ಹೆಚ್ಚಿನ ಪೋಷಕಾಂಶ ಹೊಂದಿರುವ ಸೋಯಾ ಅವರೆ:

Advertisement

ಬೆಂ.ಕೃಷಿ ವಿಶ್ವ ವಿದ್ಯಾಲಯ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತರಕಾರಿ ಸೋಯಾ ಅವರೆ ತಳಿ ಕೆಬಿವಿ ಎಸ್‌-1 (ಕರುಣೆ)ಯನ್ನು ಅಭಿವೃದ್ಧಿಪಡಿಸಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಗೊಳಿಸಿದೆ. ಇದು ಸಾಮಾನ್ಯ ಕಾಳು ಸೋಯಾ ಅವರೆಗಿಂತ ಸ್ವಲ್ಪ ಭಿನ್ನ. ಇದರ ಎಲೆಗಳ ಮೇಲ್ಮೆ„ ಮುರುಟಿಕೊಂಡಿದ್ದು ಕಡು ಹಸಿರು ಬಣ್ಣದಿಂದ ಕೂಡಿರುತ್ತದೆ. ಹೂಗಳು ಬಿಳಿ ಬಣ್ಣವಾಗಿದ್ದು ಕಾಯಿಗಳಲ್ಲಿ 2-3 ದಪ್ಪ ಕಾಳುಗಳಿರುತ್ತವೆ. ಇದರ ಕಾಳು ಹಸಿರು ಬಣ್ಣದಿಂದ ಕೂಡಿದೆ. ಇದರ ಕಾಳುಗಳು ಸಿಹಿಯಾಗಿದ್ದು, ಹಸಿರುಕಾಳಿನಲ್ಲಿ ಶೇ.14ರಷ್ಟು ಪ್ರೋಟೀನ್‌ ಅಂಶವಿದ್ದು ಇತರೆ ದ್ವಿದಳ ಧಾನ್ಯಗಳ ಹಸಿ ಕಾಳಿಗೆ ಹೋಲಿಸಿದ್ದಲ್ಲಿ ಹೆಚ್ಚಿನ ಪೋಷಕಾಂಶ ಗಳನ್ನು ಹೊಂದಿದೆ. ಈ ಮೂಲಕ ಭಾರತೀಯರ ಅಪೌಷ್ಟಿಕತೆ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವಲ್ಲಿ ಯಾವುದೇ ಸಂಶಯವಿಲ್ಲ. ಬೇರೆ ದ್ವಿದಳ ಧಾನ್ಯಗಳಾದ ಅವರೆ, ತೊಗರಿ, ಅಲಸಂದೆಯ ಹಸಿ ಕಾಳುಗಳಂತೆ ಸೋಯಾ ಅವರೆ ಹಸಿಕಾಳುಗಳನ್ನು ಸಾಂಬಾರ್‌, ಪಲ್ಯ, ಪಲಾವ್‌, ಉಪ್ಪಿಟ್ಟು, ಚಕ್ಕುಲಿ, ಕುರುಕಲು ತಿಂಡಿಗಳು ಹಾಗೂ ಸಿಹಿ ತಿನಿಸುಗಳು ಮುಂತಾದ ದಿನನಿತ್ಯದ ಆಹಾರ ತಯಾರಿಕೆಯಲ್ಲಿ ಉಪಯೋಗಿಸಬಹುದು.

ಬಿತ್ತಿದ 65-70 ದಿನಗಳಲ್ಲಿ ಹಸಿಕಾಯಿ ಕೊಯ್ಲಿಗೆ ಸಿದ್ಧವಾಗುತ್ತದೆ. ಒಂದು ಹೆಕ್ಟೇರ್‌ಗೆ 8-10 ಟನ್‌ ಹಸಿಕಾಯಿ ಇಳುವರಿ ಕೊಡುವ ಸಾಮರ್ಥ್ಯ ಹೊಂದಿದ್ದು, ರೈತರಿಗೆ ಒಳ್ಳೆಯ ಲಾಭ ತಂದು ಕೊಡಲಿದೆ. ಇದಕ್ಕೆ ಉತ್ತರ ಭಾರತಲ್ಲಿ ತುಂಬಾ ಬೇಡಿಕೆ ಇದ್ದು ನಮ್ಮ ರೈತರೂ ಸದ್ಬಳಕೆ ಮಾಡಿಕೊಳ್ಳಬೇಕಿದೆ.- ಡಾ.ಟಿ.ಓಂಕಾರಪ್ಪ, ಜಿಕೆವಿಕೆಯ ಸಸಿ ತಳಿ ಪ್ರಧಾನ ವಿಜ್ಞಾನಿ

 

Advertisement

Udayavani is now on Telegram. Click here to join our channel and stay updated with the latest news.

Next