ಚಿತ್ರದುರ್ಗ: ಕಳೆದ ವರ್ಷ ಹಿಂಗಾರಿ ಮಳೆ ಕೈ ಹಿಡಿದರೆ ಈ ವರ್ಷ ಮುಂಗಾರು ಉತ್ತಮವಾಗಿ ಸುರಿದ ಪರಿಣಾಮ ಕೋಟೆನಾಡಿನ ಜನತೆ ಸಂತಸಗೊಂಡಿದ್ದಾರೆ. ಹೊಲಗಳಲ್ಲಿರುವ ಫಸಲು ನಳನಳಿಸುತ್ತಿವೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 3,58,340 ಹೆಕ್ಟೇರ್ ಬಿತ್ತನೆ ಗುರಿ ಇತ್ತು. ಆ.10ರವರೆಗೆ ಒಟ್ಟು 3,21,519 ಹೆಕ್ಟೇರ್ ಬಿತ್ತನೆಯಾಗುವ ಮೂಲಕ ಶೇ. 89.7 ಪ್ರಗತಿ ಸಾಧಿ ಸಲಾಗಿದೆ. ಕಳೆದ ವರ್ಷ ಆ. 10 ರವರೆಗೆ ಶೇ. 38.2 ರಷ್ಟು ಪ್ರಗತಿ ಸಾಧಿ ಸಲಾಗಿತ್ತು. ಈ ಬಾರಿ ಉತ್ತಮ ಮಳೆಯಾಗಿದ್ದು, ಕಳೆದ ಸಾಲಿಗಿಂತ ಹೆಚ್ಚು ಬಿತ್ತನೆಯಾಗಿದೆ.
ಹಿರಿಯೂರು-39689 ಹೆ., ಹೊಸದುರ್ಗ- 45070 ಹೆ., ಮೊಳಕಾಲ್ಮೂರು- 31293 ಹೆ, ಚಳ್ಳಕೆರೆ-96662 ಹೆ, ಚಿತ್ರದುರ್ಗ-57608, ಹೊಳಲ್ಕೆರೆ-51197 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಏಕದಳ ಬೆಳೆಗಳಾದ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ ಮತ್ತು ಸಿರಿಧಾನ್ಯಗಳ ಬಿತ್ತನೆ 1,46,365 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ದ್ವಿದಳ ಬೆಳೆಗಳಾದ ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದಿ, ಅವರೆ ಬೆಳೆಗಳಿಗಾಗಿ 34,460 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ನಿಗದಿಯಾಗಿದ್ದು, ಇಲ್ಲಿಯವರೆಗೆ 18392 ಹೆಕ್ಟೇರ್ ದ್ವಿದಳ ಧಾನ್ಯ ಬಿತ್ತನೆ ನಡೆದಿದೆ. ಎಣ್ಣೆಕಾಳು ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಎಳ್ಳು, ಹರಳು, ಹುಚ್ಚೆಳ್ಳು, ಸಾಸಿವೆ, ಸೋಯಾಬಿನ್ ಬಿತ್ತನೆ 1,47,096 ಹೆಕ್ಟೇರ್ ಬಿತ್ತನೆಯಾಗಿದೆ. ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ತಂಬಾಕು ಬೆಳೆಗಳ ಬಿತ್ತನೆ 9666 ಹೆಕ್ಟೇರ್‌ನಲ್ಲಿ ಆಗಿದೆ.
ದ್ವಿದಳ ಧಾನ್ಯ: ಹೊಸದುರ್ಗ ತಾಲೂಕಿನಲ್ಲಿ ಒಟ್ಟು 3871 ಹೆಕ್ಟೇರ್ ಭೂ ಪ್ರದೇಶದಲ್ಲಿ ದ್ವಿದಳ ಬಿತ್ತನೆ ಮಾಡಲಾಗಿದೆ. 310 ಹೆಕ್ಟೇರ್ ತೊಗರಿ, 3392 ಹೆಕ್ಟೇರ್ ಹೆಸರು, ಅಲಸಂದಿ-24, ಅವರೆ-145 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ ಒಟ್ಟು 6948 ಹೆಕ್ಟೇರ್ ಭೂ ಪ್ರದೇಶದಲ್ಲಿ ದ್ವಿದಳ ಬಿತ್ತನೆ ಮಾಡಲಾಗಿದೆ. 6756 ಹೆಕ್ಟೇರ್ ತೊಗರಿ, ಉರುಳಿ-111, ಹೆಸರು-31, ಅಲಸಂದಿ-44, ಅವರೆ-06 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ ಒಟ್ಟು 1881 ಹೆಕ್ಟೇರ್ ಭೂ ಪ್ರದೇಶದಲ್ಲಿ ದ್ವಿದಳ ಬಿತ್ತನೆ ಮಾಡಲಾಗಿದೆ. 1071 ಹೆಕ್ಟೇರ್ ತೊಗರಿ, ಹುರುಳಿ-65, ಹೆಸರು-15, ಅಲಸಂದಿ-30, ಅವರೆ-699, ಸೋಯಾಬಿನ್-1 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಹಿರಿಯೂರು ತಾಲೂಕಿನಲ್ಲಿ ಒಟ್ಟು 4074 ಹೆಕ್ಟೇರ್ ಭೂ ಪ್ರದೇಶದಲ್ಲಿ ದ್ವಿದಳ ಧಾನ್ಯ ಬಿತ್ತನೆ ಮಾಡಲಾಗಿದೆ. 3713 ಹೆಕ್ಟೇರ್ ತೊಗರಿ, ಉರುಳಿ-310 ಹೆ, ಅಲಸಂದಿ-25, ಅವರೆ-23 ಬಿತ್ತನೆ ಮಾಡಲಾಗಿದೆ. ಹೊಳಲ್ಕೆರೆ ತಾಲೂಕಿನಲ್ಲಿ ಒಟ್ಟು 870 ಹೆಕ್ಟೇರ್ ಭೂ ಪ್ರದೇಶದಲ್ಲಿ ದ್ವಿದಳ ಬಿತ್ತನೆ ಮಾಡಲಾಗಿದೆ. 760 ಹೆಕ್ಟೇರ್ ತೊಗರಿ, ಹೆಸರು-30, ಅಲಸಂದಿ-15, ಅವರೆ-65 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಮೊಳಕಾಲ್ಮುರು ತಾಲೂಕಿನಲ್ಲಿ ಒಟ್ಟು 748 ಹೆಕ್ಟೇರ್ ಭೂ ಪ್ರದೇಶದಲ್ಲಿ ದ್ವಿದಳ ಬಿತ್ತನೆ ಮಾಡಲಾಗಿದೆ. 708 ಹೆಕ್ಟೇರ್ ತೊಗರಿ, ಹುರುಳಿ-15, ಹೆಸರು-14, ಅಲಸಂದಿ-11 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ.
ಅಧಿಕ ಮಳೆ: ಜಿಲ್ಲೆಯಲ್ಲಿ ಈವರೆಗೆ 370 ಮಿಮೀ ಸರಾಸರಿ ಮಳೆಯಾಗಿದ್ದು, ವಾಡಿಕೆಗಿಂತ ಅ ಧಿಕ ಮಳೆಯಾಗಿದೆ. ಆ.10ರವರೆಗೆ 33 ಮಿಮೀ ಮಳೆಯಾಗಿದೆ. 2014ರಲ್ಲಿ 161.4 ಮಿಮೀ, 2015ರಲ್ಲಿ 81.4 ಮಿಮೀ, 2016ರಲ್ಲಿ 18.1 ಮಿಮೀ, 2017ರಲ್ಲಿ 67 ಮಿಮೀ, , 2018ರಲ್ಲಿ 63 ಮಿಮೀ, 2019ರಲ್ಲಿ 98 ಮಿಮೀ ಮಳೆಯಾಗಿದ್ದು, 2020ರಲ್ಲಿ ಸರಾಸರಿಗಿಂತ ಅಧಿಕ ಮಳೆ ಸುರಿದಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.