Advertisement

ಜನರಲ್ಲಿ ಧರ್ಮದ ಬೀಜ ಬಿತ್ತಿದ ಕುಮಾರ ಶ್ರೀ

02:57 PM Mar 27, 2017 | |

ಹುಬ್ಬಳ್ಳಿ: ಹಾನಗಲ್ಲ ಕುಮಾರ ಸ್ವಾಮಿಗಳು ಜಂಗಮ ಮೂರ್ತಿಗಳನ್ನು ನಿರ್ಮಿಸಿದರು. ನಿರಂತರವಾಗಿ ಆ ಮೂರ್ತಿಗಳು ನಿರ್ಮಾಣ ವಾಗುವಂತೆ ವ್ಯವಸ್ಥೆ ಮಾಡುವ ಮೂಲಕ ದೊಡ್ಡ ಕಾರ್ಯ ಮಾಡಿದರು. ಜನರ ಹೃದಯದಲ್ಲಿ ಧರ್ಮ ಬೀಜ ಬಿತ್ತಿ, ಧರ್ಮದ ಫಲ ಬೆಳೆಯುವಂತೆ ಮಾಡಿದರು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ನುಡಿದರು. 

Advertisement

ಇಲ್ಲಿನ ಸಿದ್ಧಾರೂಢಸ್ವಾಮಿಮಠದ ಆವರಣದಲ್ಲಿ ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳ 150ನೇ ಜಯಂತಿ ಮಹೋತ್ಸವದ ಉದ್ಘಾಟನಾ ಸಮಾರಂಭಕ್ಕೆ ರವಿವಾರ ಚಾಲನೆ ನೀಡಿ ಶ್ರೀಗಳು ಮಾತನಾಡಿದರು. ಕುಮಾರ ಸ್ವಾಮಿಗಳು ನಾಡಿನ ತುಂಬೆಲ್ಲ ಸಂಚರಿಸಿ, ಶರಣರ ತತ್ವಗಳನ್ನು ಎಲ್ಲೆಡೆ ಪಸರಿಸಿದರು.

ನಾಡಿನ ತುಂಬೆಲ್ಲ ಧರ್ಮದ ಮಾತು ಹೇಳಿದರು. ಅವರ ಸ್ಮರಣೋತ್ಸವ ಆಚರಿಸುವುದು ಮಹತ್ವದ್ದಾಗಿದೆ ಎಂದರು. ಬಲ್ಲವರ ಮಾತು ಕೇಳಬೇಕು. ಅವರು ಮಾಡಿದ ಕಾರ್ಯ ಮತ್ತು ಸಾಧನೆಯನ್ನು ನಾಡಿಗೆ ಪರಿಚಯಿಸುವ ಕಾರ್ಯ ಆಗಬೇಕು. ಸಿದ್ಧಾರೂಢರು ಹಾಗೂ ಕುಮಾರ ಸ್ವಾಮಿಗಳು ಶ್ರೇಷ್ಠ ಶಿವಯೋಗಿಗಳಾದರು. 

ಕುಮಾರ ಸ್ವಾಮಿಗಳು ಜಯಂತಿಯನ್ನು ವರ್ಷಪೂರ್ತಿ ನಾಡಿನ ತುಂಬೆಲ್ಲ ಆಚರಿಸಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಹಾನಗಲ್ಲ ಶ್ರೀಗಳು ತಂದೆ-ತಾಯಿ, ಸಹೋದರ-ಸಹೋದರಿ, ಬಂಧು-ಬಳಗ ಬಿಟ್ಟು ಸಿದ್ಧಾರೂಢಮಠಕ್ಕೆ ಆಗಮಿಸಿ ಅಲ್ಲಿ ಅದ್ವೆ„ತ ಅಧ್ಯಯನ ಮಾಡಿ ಮಹಾನ್‌ ಚೇತನರಾದರು.

ತ್ಯಾಗದ ದೊಡ್ಡ ಮೂರ್ತಿಯಾದರು. ಅವರು ಬಟ್ಟೆಯಲ್ಲೂ ತ್ಯಾಗ ತೋರಿದ್ದರು. ಅದೇ ರೀತಿ ಸಿದ್ಧೇಶ್ವರ ಸ್ವಾಮಿಗಳು ಬಿಳಿ ಬಟ್ಟೆಯ ಮಹಾತ್ಯಾಗಿಗಳಾಗಿದ್ದಾರೆ. ಜ್ಞಾನದ ಪೇಟಾ ತಲೆಗೆ ಸುತ್ತಿಕೊಂಡಿದ್ದಾರೆ. ಇಂದು ಬಹುತೇಕ ಸ್ವಾಮಿಗಳು ಧರಿಸುವ ಖಾವಿ ಬಟ್ಟೆಗಳಲ್ಲಿ ಕಿಸೆಗಳೇ ತುಂಬಿಕೊಂಡಿರುತ್ತವೆ. ಆದರೆ ಸಿದ್ದೇಶ್ವರ ಶ್ರೀ ನಿರಂಜನ-ನಿರಾಭಾರಿ ಆಗಿದ್ದಾರೆ ಎಂದರು. 

Advertisement

ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕುಮಾರ ಸ್ವಾಮಿಗಳು ಸ್ವಾರ್ಥರಹಿತ ಸಮಾಜ ಸೇವೆ ಮಾಡಿದರ ಫಲವಾಗಿ ನಾವೆಲ್ಲ ಅವರನ್ನು ಸ್ಮರಿಸುತ್ತಿದ್ದೇವೆ. ಯಾರಲ್ಲಿ ತ್ಯಾಗದ ಮನೋಭಾವ ಇರುತ್ತದೋ ಅಂಥವರನ್ನು ಜಗತ್ತೇ ಆರಾಸುತ್ತದೆ ಎಂದರು.

ಹುಬ್ಬಳ್ಳಿ-ವಿಜಯಪುರ ಶಾಂತಾಶ್ರಮದ ಶಿವಪುತ್ರ ಸ್ವಾಮೀಜಿ ಮಾತನಾಡಿ, ಜೀವನ ಸುಂದರವಾಗಿರಬೇಕಾದರೆ ದೇವರು ನಮ್ಮ ಕೈ ಹಿಡಿಯಬೇಕು. ಲಾಂಛನ ಶಾಶ್ವತವಲ್ಲ. ಆದರೆ ನಮ್ಮೊಳಗಿರುವ ಪ್ರೀತಿ ನಶಿಸಲಾರದಂತಹುದು. ಆದ್ದರಿಂದ ಪ್ರೀತಿ ಹಂಚಬೇಕು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next