Advertisement

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಸೋವಿ ಆಹಾರ

03:45 AM Apr 05, 2017 | Harsha Rao |

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ರಿಯಾಯಿತಿ ದರದ ಕ್ಯಾಂಟೀನ್‌ ಸ್ಥಾಪಿಸಲು ಸರ್ಕಾರ ಆದೇಶ ಹೊರಡಿಸಿದೆ. 21 ಜಿಲ್ಲಾ ಆಸ್ಪತ್ರೆ ಹಾಗೂ 146 ತಾಲೂಕು ಆಸ್ಪತ್ರೆಗಳಲ್ಲಿ 4.50 ರೂ.ಗೆ ಇಡ್ಲಿ ಸಾಂಬಾರ್‌, 9 ರೂ.ಗೆ ರೈಸ್‌ಬಾತ್‌ ಅಥವಾ ಅನ್ನಧಿಸಾಂಬಾರ್‌, 8 ರೂ.ಗೆ 2 ಚಪಾಟಿ ಪಲ್ಯ ಒದಗಿಸಲಿದೆ.

Advertisement

ರಿಯಾಯಿತಿ ದರದ ಕ್ಯಾಂಟೀನ್‌ ತೆರೆಯಲು ಸ್ತ್ರೀ ಶಕ್ತಿ ಗುಂಪುಗಳು, ಸ್ವಸಹಾಯ ಸಂಘಗಳು, ವಿಧವೆಯರಿಗೆ ಮೊದಲ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಆಹಾರ ಸಿದ್ಧಪಡಿಸಲು ಅಗತ್ಯವಾದ ಆಹಾರ ಧಾನ್ಯ, ಬೇಳೆ-ಕಾಳು ಸರ್ಕಾರದ ವತಿಯಿಂದ ರಿಯಾಯಿತಿ ದರದಲ್ಲಿ ಪೂರೈಕೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಎಲ್ಲ ಜಿಲ್ಲಾ, ತಾಲೂಕು ಆರೋಗ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕ್ಯಾಂಟೀನ್‌ ತೆರೆಯಲು ನಿಯಮಾನುಸಾರ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಎಂದು ಸೂಚಿಸಲಾಗಿದೆ.

ಆಸ್ಪತೆಗಳಿಗೆ ಬರುವ ಬಡ ರೋಗಿಗಳು, ಅವರ ಸಹಾಯಕರು ಮತ್ತು ಆಸ್ಪತ್ರೆಗಳ ಡಿ ದರ್ಜೆಯ ಸಿಬ್ಬಂದಿಗೆ ಕಡಿಮೆ ದರದಲ್ಲಿ ಊಟ ಮತ್ತು ಉಪಾಹಾರ ಒದಗಿಸಬೇಕು. ಕ್ಯಾಂಟೀನ್‌ ತೆರೆಯಲು ಸರ್ಕಾರವೇ ಮೂಲ ಸೌಕರ್ಯ ಒದಗಿಸಲಿದ್ದು, ಉಚಿತ ಸ್ಥಳಾವಕಾಶ, ವಿದ್ಯುತ್‌ ಮತ್ತು ನೀರಿನ ಸೌಲಭ್ಯ ಒದಗಿಸಲಿದೆ. ಕ್ರೆಡೆಲ್‌ ಮೂಲಕ ಶುದ್ಧ ಕುಡಿಯುವ ನೀರಿನ ಘಟಕ, ಪಾತ್ರೆ ತೊಳೆಯುವ ಯಂತ್ರವನ್ನು ಸರ್ಕಾರವೇ ಹಾಕಿ ಕೊಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next