Advertisement
ಧಾರಾಕಾರ ಮಳೆ ತಮಿಳುನಾಡಿನಾದ್ಯಂತ ಜನ ಜೀವನವನ್ನು ತತ್ತರಿಸುವಂತೆ ಮಾಡಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇನ್ನೂ 2 ದಿನಗಳ ಕಾಲ ವರುಣನ ಆರ್ಭಟ ಮುಂದುವರಿಯಲಿದ್ದು, ತಿರುವಳ್ಳೂರು, ವೆಲ್ಲೂರು, ತಿರುವಣ್ಣಾಮಲೈ, ತೂತುಕುಡಿ, ರಾಮನಾಥಪುರಂ ಮತ್ತು ತಿರುನಲ್ವೇಲಿ ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಚೆನ್ನೈ ಪ್ರಾದೇಶಿಕ ಕೇಂದ್ರ ಎಚ್ಚರಿಕೆ ನೀಡಿದೆ.
ಬೆಂಗಳೂರು: ಚಂಡಮಾರುತದ ಪರಿಚಲನೆಯಿಂದ ರಾಜ್ಯ ದಲ್ಲಿ ಮುಂದಿನ ಎರಡು-ಮೂರು ದಿನ ಸಾಧಾ ರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. 2 ದಿನಗಳಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ವಿದ್ದು, ರವಿವಾರ ಬೆಂಗಳೂರು ಸಹಿತ ಹಲವೆಡೆ ತುಂತುರು ಮಳೆ ಯಾಗಿದೆ. ಮುಂದಿನ 2-3 ದಿನ ಕರಾ ವಳಿ, ದ.ಒಳನಾಡು ಮತ್ತು ಉ. ಒಳನಾಡಿ ನಲ್ಲಿ ಮೋಡದ ವಾತಾ ವರಣ, ಚಳಿಗಾಳಿ ಜತೆಗೆ ಅಲ್ಲಲ್ಲಿ ಮಳೆಯಾಗಲಿದೆ.
Related Articles
ಮಣಿಪಾಲ: ಕರಾವಳಿಯ ಹೆಚ್ಚಿನ ಕಡೆಗಳಲ್ಲಿ ರವಿವಾರ ಮಧ್ಯಾಹ್ನದ ಬಳಿಕ ಏಕಾಏಕಿ ಸುರಿದ ಮಳೆ ಸಮಸ್ಯೆ ಉಂಟುಮಾಡಿದೆ. ಅಕಾಲಿಕ ಮಳೆಯಿಂದ ಒಣಗಲು ಹಾಕಿದ್ದ ಅಡಿಕೆ ಫಸಲು ಒದ್ದೆಯಾ ಗಿದೆ. ಕೊಡಗಿನಲ್ಲಿ ಕಾಫಿ ಕೊಯ್ಲು ನಡೆಯು ತ್ತಿದ್ದು ಬೆಳೆಗಾರರು ಕೊಯ್ದ ಕಾಫಿ ಬೀಜ ವನ್ನು ಒಣಗಿಸಲು ಪರದಾಡುವಂತಾಗಿದೆ.
Advertisement
ಕೇರಳದ 3 ಜಿಲ್ಲೆಗಳಿಗೆ ಎಚ್ಚರಿಕೆರವಿವಾರದಿಂದ 48 ಗಂಟೆಗಳ ಕಾಲ ಕೇರಳದಲ್ಲೂ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಎರ್ನಾಕುಳಂ, ಇಡುಕ್ಕಿ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅರಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದ ಉತ್ತರ ಭಾಗವು ಪ್ರಸಕ್ತ ವರ್ಷ ಅತ್ಯಧಿಕ ಚಂಡಮಾರುತ ಪರಿಚಲನೆಗೆ ಸಾಕ್ಷಿಯಾಗಿದೆ.