Advertisement

ದಕ್ಷಿಣ ಪದವೀಧರ ಕ್ಷೇತ್ರ: ಬಿಜೆಪಿ ಗೆಲುವು ಖಚಿತ; ಎಸ್‌.ಟಿ.ಸೋಮಶೇಖರ್‌

05:40 PM May 30, 2022 | Team Udayavani |

ಕೆ.ಆರ್‌.ನಗರ: ಶಿಕ್ಷಕರು, ಪದವೀಧರರ ಸಮಸ್ಯೆಗಳ ಬಗ್ಗೆ ನಿಜವಾದ ಕಾಳಜಿ ಇರುವ ಬಿಜೆಪಿ ಕಟ್ಟಾಳು ಮೈ.ವಿ.ರವಿಶಂಕರ್‌ ದಕ್ಷಿಣ ಪದವೀಧರರ ಕ್ಷೇತ್ರದಿಂದ ಆಯ್ಕೆ ಆಗುವುದು ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ತಿಪ್ಪೂರು ಮಹಾಶಕ್ತಿ ಕೇಂದ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷದ ಒಮ್ಮತದ ಅಭ್ಯರ್ಥಿ ಆಗಿರುವ ರವಿಶಂಕರ್‌ ಪರ ಅಲೆ ಕ್ಷೇತ್ರದಲ್ಲಿ ಕಂಡು ಬರುತ್ತಿದೆ ಎಂದು ವಿವರಿಸಿದರು.

ಸಿದ್ದು ಹತಾಶ ಹೇಳಿಕೆ: ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಕೇಳಲು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒಂದೇ ವೇದಿಕೆಯಲ್ಲಿ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಇದು ಅವರ ಸ್ಥಿತಿ ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ಸಿದ್ದರಾಮಯ್ಯ ಹತಾಶ ಹೇಳಿಕೆ ಅವರಿಗೆ ಮುಳುವಾಗಲಿದೆ ಎಂದು ಎಚ್ಚರಿಸಿದರು.

ಕೊಡುಗೆ ನೋಡಿ ಮತ ನೀಡಿ: ಮೈಸೂರು ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹತ್ತು ಹಲವು ಕೊಡುಗೆ ನೀಡಿದ್ದು, 9.50 ಸಾವಿರ ಕೋಟಿಯ ಮೈಸೂರು-ಬೆಂಗಳೂರು ದಶಪಥ ರಸ್ತೆ, ಮೈಸೂರು ವಿಮಾನ ನಿಲ್ದಾಣಕ್ಕೆ 500 ಕೋಟಿ ರೂ. ಅನುದಾನ ನೀಡಿದ್ದು, ಇದರ ಜತೆಗೆ ರಾಜ್ಯ ಸರ್ಕಾರ ಇಲ್ಲಿಯೇ ಚಿತ್ರನಗರಿ ಆರಂಭಿಸಲು ನಿರ್ಧರಿಸಿದೆ. ಇವುಗಳನ್ನು ಪ್ರಜ್ಞಾವಂತ ಪದವೀಧರ ಮತದಾರರು ಅರಿತು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಶೀಘ್ರ ಕಬ್ಬು ಅರಿಯುವ ಕಾರ್ಯ ಆರಂಭ: ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯ ಆರಂಭಕ್ಕೆ ಸರ್ಕಾರ ಕಟಿಬದ್ಧವಾಗಿದ್ದು, ಈಗಾಗಲೇ ಈ ಸಂಬಂಧ ಪ್ರಕ್ರಿಯೆಗಳು ಮುಗಿದಿದೆ. ಶೀಘ್ರ ಕಬ್ಬು ಅರೆಯುವ ಕಾರ್ಯ ಆರಂಭಿಸಲಾಗುತ್ತದೆ ಎಂದು ಪ್ರಕಟಿಸಿದರು.

Advertisement

ಜಾತಿ, ಕುಟುಂಬಕ್ಕೆ ತಗಲಾಕಿಕೊಂಡಿವೆ: ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ.ಮಹೇಶ್‌ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಜಾತಿಗೆ ಮತ್ತು ಜೆಡಿಎಸ್‌ ಕುಟುಂಬಕ್ಕೆ ತಗಲಾಕಿಕೊಂಡಿ ವೆ. ಆದರೆ, ಬಿಜೆಪಿ ಸದಾ ರಾಷ್ಟ್ರ ಮತ್ತು ಜನಸೇವೆಗೆ ಮೀಸಲಾಗಿದ್ದು, ಜನತೆ ಇದನ್ನು ಅರಿಯಬೇಕು ಎಂದರು.

ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷ ಹೊಸಹಳ್ಳಿವೆಂಕಟೇಶ್‌ ಮಾತನಾಡಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಸಿದ್ದರಾಜು, ಜಿಲ್ಲಾ ಗ್ರಾಮಾಂತರ ಬಿಜೆಪಿ ಆಧ್ಯಕ್ಷೆ ಮಂಗಳಾ ಸೋಮಶೇಖರ್‌, ಖಾದಿ ನಿಗಮ ಮಂಡಳಿ ಅಧ್ಯಕ್ಷ ಕೃಷ್ಣಪ್ಪಗೌಡ, ಜಿಲ್ಲಾ ಬಿಜೆಪಿ ಮಾಜಿ ವಕ್ತಾರ ಎಚ್‌ .ಪಿ.ಗೋಪಾಲ್‌, ಸಹ ವಕ್ತಾರ ಡಾ.ವಸಂತಕುಮಾರ್‌, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವೈ.ಮಂಜು, ಮಾಜಿ ಅಧ್ಯಕ್ಷ ಕೆ.ಆರ್‌.ಮಲ್ಲಿಕಾರ್ಜುನಪ್ಪ, ಮಹಿಳಾ ಘಟಕದ ಅಧ್ಯಕ್ಷೆ ದ್ರಾಕ್ಷಾಯಿಣಿ, ಯುವ ಘಟಕದ ಅಧ್ಯಕ್ಷ ಹೊಸೂರು ಧರ್ಮ, ಪ್ರಧಾನ ಕಾರ್ಯದರ್ಶಿ ಮಾರ್ಕಡೇಯಸ್ವಾಮಿ, ಖಜಾಂಚಿ ಎ.ಜಿ.ನಂಜೇಶ್‌, ಜಿಲ್ಲಾ ಗ್ರಾಮಾಂತರ ಬಿಜೆಪಿ
ಯುವ ಮೋರ್ಚಾ ಉಪಾಧ್ಯಕ್ಷ ಮೇಲೂರು ಮಂಜುನಾಥ್‌, ಜಿಪಂ ಮಾಜಿ ಸದಸ್ಯೆ ನಳಿನಾಕ್ಷಿ ವೆಂಕಟೇಶ್‌, ಬಿಜೆಪಿ ಮುಖಂಡರಾದ ಉಮಾಶಂಕರ್‌, ಗೋಪಾಲರಾಜು, ಅರಕೆರೆ ಮಧುಚಂದ್ರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next