Advertisement

ಸೌತೇಕಾಯಿಗೆ ಮನಸೋತು ಬಯಲಲಿ ಕುಳಿತು…

10:22 AM Sep 15, 2019 | mahesh |

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸಮೀಪವಿರುವ ಪ್ರಸಿದ್ಧ ಪುಣ್ಯಕ್ಷೇತ್ರ. ಒಮ್ಮೆ ದನ ಕಾಯುವ ಹುಡುಗರಿಗೆ, ಸಹಸ್ರಾರು ವರ್ಷಗಳ ಹಿಂದಿನ ಗಣಪತಿ ದೇಗುಲದ ಮೂರ್ತಿಯು ಸಿಕ್ಕಿತು. ಆ ಹುಡುಗರು ವಿಗ್ರಹವನ್ನು ಮಣ್ಣಿಂದ ತೆಗೆದು, ಅದನ್ನು ಹೊತ್ತುಕೊಂಡು, ದಾರಿಯುದ್ದಕ್ಕೂ ಗಣಪನನ್ನು ಹೊಗಳುತ್ತಾ, ಒಂದು ಮರದ ಬುಡದಲ್ಲಿ ಇಟ್ಟರಂತೆ. ಅಲ್ಲಿಯೇ ಸಿಕ್ಕ ಕಲ್ಲುಗಳಿಂದ ಅದಕ್ಕೆ ಕಟ್ಟೆಯನ್ನು ನಿರ್ಮಿಸಿ, ತಾವು ಸೇವಿಸಲು ತಂದಿದ್ದ ಸೌತೇಕಾಯಿಯ ಮಿಡಿಗಳನ್ನು ನೈವೇದ್ಯಕ್ಕೆ ಇಟ್ಟರಂತೆ. ಕ್ರಮೇಣ ಈ ಗಣಪನಿಗೆ ಸೌತೇಕಾಯಿ ಸಮರ್ಪಿಸಿ, ಪೂಜಿಸುವುದು ವಾಡಿಕೆ ಆಯಿತು. ಅಂದಿನಿಂದ ಈ ಕ್ಷೇತ್ರಕ್ಕೆ “ಸೌತಡ್ಕ’ (“ಅಡ್ಕ’ ಎಂದರೆ, “ಬಯಲು’) ಎಂಬ ಹೆಸರು ಬಂತು. ಈಗಲೂ ಇಲ್ಲಿನ ಗಣಪ, ಬಯಲು ನಿವಾಸಿ.

Advertisement

– ಚಂದನ್‌ ಸುಬ್ರಹ್ಮಣ್ಯ

Advertisement

Udayavani is now on Telegram. Click here to join our channel and stay updated with the latest news.

Next