Advertisement
ಪ್ರಸ್ತುತ ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ರೈಲುಗಳ ವೇಗ ಗಂಟೆಗೆ 80- 90ಕಿ.ಮೀ. ಇದೆ. ಮುಂಬ ರುವ ದಿನಗಳಲ್ಲಿ ಗಂಟೆಗೆ 100- 110 ಕಿ.ಮೀ.ಗೆ ಹೆಚ್ಚಿಸಲಾಗುವುದು. ಇದರಿಂದ ನಿಗದಿತ ತಾಣವನ್ನುತುಸು ಬೇಗ ತಲುಪಲು ಅನುಕೂಲ ಆಗಲಿದೆ.ಈ ಮೂಲಕ ಪ್ರಯಾಣಿಕ ರಿಗೆ ನಿಖರ ಹಾಗೂ ಮತ್ತಷ್ಟು ಉತ್ತಮ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ.
Related Articles
Advertisement
ಕೆಐಎಡಿ ಹಾಲ್ಟ್ ಸ್ಟೇಷನ್‌ನಲ್ಲಿ ರೈಲುಗಳ ನಿರ್ವಹಣೆ, ಟಿಕೆಟ್ ವಿತರಣೆ, ಬಂದು-ಹೋಗುವ ರೈಲುಗಳ ಸಮಯ ದಾಖಲು ಮತ್ತಿತರ ಸೇವೆಗಳಿಗಾಗಿಯೇ ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬರನ್ನು ನೈಋತ್ಯ ರೈಲ್ವೆ ನಿಯೋಜಿಸಿದೆ. ನಿತ್ಯ ಸುಮಾರು ಹತ್ತು ತಾಸು ಕಾರ್ಯನಿರ್ವಹಿಸುವ ಅವರಿಗೆ ಮಾಸಿಕ ಬರೀ 1,000ರಿಂದ 1,500 ರೂ. ಸಂಭಾವನೆ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಬೆಳಿಗ್ಗೆ 6ರಿಂದ ರಾತ್ರಿ ಸುಮಾರು 8ರವರೆಗೆ ಕಾರ್ಯನಿರ್ವಹಿಸುವ ಅಲ್ಲಿನ ನೌಕರ, ದೇವನಹಳ್ಳಿ ನಿಲ್ದಾಣದಿಂದ ಟಿಕೆಟ್ ತಂದು ವಿತರಿಸುತ್ತಾರೆ. ಪ್ರತಿ ರೈಲು ಎಷ್ಟು ಗಂಟೆಗೆ ಬಂತು ಮತ್ತು ಹೋಯಿತು ಎಂಬುದರ ದಾಖಲು ಮಾಡುವುದು ಒಳಗೊಂಡಂತೆ ಅಲ್ಲಿನ ಸಂಪೂರ್ಣ ನಿರ್ವಹಣೆ ಹೊಣೆ ಆ ನೌಕರದ್ದಾಗಿದೆ. ಆದರೆ, ಈ ಕೆಲಸಕ್ಕೆ ನೀಡುತ್ತಿರುವ ಸಂಭಾವನೆ ತುಂಬಾ ಕಡಿಮೆ.
“ಹಾಲ್ಟ್ ಸ್ಟೇಷನ್ ಸೌಂದರೀಕರಣಕ್ಕೇ ರೈಲ್ವೆ ಇಲಾಖೆಯು ಕೋಟ್ಯಂತರ ರೂಪಾಯಿ ಸುರಿಯುತ್ತದೆ. ಅದನ್ನು ಕಾಯಲು ಇರುವ ಒಬ್ಬ ನೌಕರನಿಗೆಮಾಸಿಕ ಬರೀ 1,000- 1,500 ರೂ. ನೀಡುತ್ತಿದೆ. ಇದಕ್ಕಾಗಿ ಹತ್ತು ತಾಸು ಕೆಲಸಮಾಡಬೇಕು. ಆ ಹಣದಲ್ಲಿ ಕುಟುಂಬ ನಿರ್ವಹಣೆ ಸಾಧ್ಯವಿಲ್ಲ. ಆದ್ದರಿಂದ ಸಂಭಾವನೆ ಹೆಚ್ಚಿಸಬೇಕು’ ಎಂದು ಸಿಟಿಜನ್ ಫಾರ್ ಸಿಟಿಜಿನ್ (ಸಿ4ಸಿ) ಸಂಸ್ಥಾಪಕಮತ್ತು ಸಂಚಾಲಕ ರಾಜಕುಮಾರ್ ದುಗರ್ ಒತ್ತಾಯಿಸುತ್ತಾರೆ.
8 ಜೋಡಿ ರೈಲು ಸೇವೆ:
ಪ್ರಸ್ತುತ ಕೆಐಎಡಿ ಹಾಲ್ಟ್ ಸ್ಟೇಷನ್‌ಗೆ ನಿತ್ಯ ಎಂಟು ಜೋಡಿ ಮೆಮು/ ಡೆಮು ರೈಲುಗಳು ನಿಲುಗಡೆ ಆಗುತ್ತವೆ. ದೇವನಹಳ್ಳಿ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ (ಕೆಎಸ್‌ಆರ್), ದೇವನಹಳ್ಳಿ- ಯಲಹಂಕ, ಯಲಹಂಕ- ಕೆಐಎಡಿ, ದೇವನಹಳ್ಳಿ- ಕಂಟೋನ್ಮೆಂಟ್, ಕೆಎಸ್‌ಆರ್- ಕೋಲಾರ ನಡುವಿನ ರೈಲುಗಳು ಇವಾಗಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.