ಮೂಡನಿಡಂಬೂರು ಜಲಾವೃತ
ಮೂಡನಿಡಂಬೂರು-ನಿಟ್ಟೂರು ಸಂಪರ್ಕ ರಸ್ತೆ ಜಲಾವೃತಗೊಂಡಿತು. ಶುಕ್ರವಾರ ಸಂಜೆಯವರೆಗೂ ಕೆಲವು ದ್ವಿಚಕ್ರ ವಾಹನಗಳು ನೀರಿನಲ್ಲೇ ಸಾಗಿದವು. ಇಲ್ಲಿನ ಕೆಲವು ಮನೆಗಳ ಅಂಗಳಕ್ಕೆ ನೀರು ನುಗ್ಗಿತು. ಮೂಡನಿಡಂಬೂರು ಗರೋಡಿ ಆವರಣಕ್ಕೂ ನೀರು ಆವರಿಸಿತು. ಇಲ್ಲಿನ ಸೇತುವೆ (ಕಲ್ಸಂಕ ತೋಡು) ಅಡಿಭಾಗದಲ್ಲಿ ಕೊಳಚೆ ನೀರಿನ ಪೈಪ್ ಅಡ್ಡವಾಗಿದ್ದು ಕಸಗಳು ತಡೆಹಿಡಿಯಲ್ಪಡುತ್ತವೆ. ಇದು ಕೂಡ ನೀರು ಮೇಲೇರಲು ಕಾರಣವಾಗಿದೆ. ಇಲ್ಲಿ ಮಳೆನೀರು ಮತ್ತು ಕೊಳಚೆ ನೀರಿನ ಸಮಸ್ಯೆ ಎರಡೂ ಇದೆ. ಇದರೊಂದಿಗೆ ಇಲ್ಲಿನ ನಾಗಬನ ಪರಿಸರವೂ ಜಲಾವೃತವಾಗಿದೆ. ಇಲ್ಲಿನ ತೋಡಿನಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲಿ ಮತ್ತಿತರ ತ್ಯಾಜ್ಯಗಳು ಸಂಗ್ರಹವಾಗಿವೆ.
ಮನೆಗಳಿಗೆ ಹಾನಿ
ಉಡುಪಿ ತಾಲೂಕಿನ ಕಡೆಕಾರು ಗ್ರಾಮದ ಶೀಲಾ ಕುಂದರ್ ಅವರ ಮನೆಗೆ ಮರ ಬಿದ್ದು ಸುಮಾರು 20,000 ರೂ., ಉಡುಪಿ ತಾಲೂಕಿನ ಬಿಟ್ಟು ಪೂಜಾರಿ ಅವರ ಮನೆಗೆ ಮರ ಬಿದ್ದು 60,000 ರೂ. ಹಾಗೂ ಕುತ್ಪಾಡಿ ಗ್ರಾಮದ ರಾಜು ಅವರ ಮನೆಗೆ ಮರಬಿದ್ದು 45,000 ರೂ. ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಗರಿಗೆದರಿದ ಕೃಷಿ ಚಟುವಟಿಕೆ
ಮುಂಗಾರುಪೂರ್ವ ಮಳೆಯ ಅನಂತರ ಸಿದ್ಧವಾಗಿದ್ದ ರೈತರು ಇದೀಗ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸಂತೃಪ್ತರಾಗಿದ್ದು ಕೃಷಿ ಚಟುವಟಿಕೆಯನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಿದ್ದಾರೆ. ಹಲವೆಡೆ ಗದ್ದೆಗೆ ಗೊಬ್ಬರ ಹಾಕುವ, ಉಳುಮೆಗೆ ತಯಾರಾಗುತ್ತಿರುವ ದೃಶ್ಯ ಕಂಡುಬಂತು.
ಶಾಲೆಗಳಿಗೆ ರಜೆ: ಚರ್ಚೆ
ಭಾರೀ ಮಳೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ಜಿಲ್ಲಾಡಳಿತ ಶುಕ್ರವಾರದಂದು ಬೆಳಗ್ಗೆ 8 ಗಂಟೆಗೆ ರಜೆ ಘೋಷಿಸಿತ್ತು. ಈ ಸುದ್ದಿ ತಿಳಿಯುವಷ್ಟರಲ್ಲಿ ಅದಾಗಲೇ ವಿದ್ಯಾರ್ಥಿ ಗಳು ಶಾಲೆಗೆ ತೆರಳಿದ್ದರು. ಕೆಲವರು ಶಾಲಾ ಹಾದಿಯಲ್ಲಿದ್ದರು. ಸಮೀಪದ ನಿವಾಸಿ ಗಳು ಮಾತ್ರ ಶಾಲೆಗೆ ಹೊರಡಲಿಲ್ಲ. ರಜೆ ಘೋಷಣೆ ಮಳೆ ವರದಿಯನ್ನಾಧರಿಸಿ ಮಾಡ ಬೇಕಿತ್ತು, ಬೆಳಗ್ಗೆ ಮಾಡಿದ್ದು ಒಳ್ಳೆಯದಾಯ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಶಿಕ್ಷಕರ ಜವಾಬ್ದಾರಿ
ಒಂದು ವೇಳೆ ಶಾಲೆ ಆರಂಭವಾದ ಅನಂತರ ಅಥವಾ ಮಕ್ಕಳು ಶಾಲೆಗೆ ಬಂದ ಅನಂತರ ರಜೆ ಘೋಷಣೆಯಾದರೆ ಮಳೆಗೆ ಮಕ್ಕಳನ್ನು ಮನೆಗೆ ವಾಪಸು ಕಳುಹಿಸುವ ಸಂದರ್ಭದಲ್ಲಿ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸುವುದು ಅಗತ್ಯ ಎಂದು ಅನೇಕ ಮಂದಿ ಹೆತ್ತವರು ಅಭಿಪ್ರಾಯಪಟ್ಟಿದ್ದಾರೆ. ಯಾವ ಮಕ್ಕಳು ತಗ್ಗುಪ್ರದೇಶ ಅಥವಾ ಮಳೆನೀರು ಹರಿಯುವ ಅಪಾಯಕಾರಿ ಪ್ರದೇಶಗಳಿಂದ ಬರುತ್ತಾರೆ ಎಂಬ ನಿಖರ ಮಾಹಿತಿಯನ್ನು ಶಿಕ್ಷಕರು ಹೊಂದಿರಬೇಕು. ಅಂತಹ ಮಕ್ಕಳ ಹೆತ್ತವರನ್ನು ಸಂಪರ್ಕಿಸಿ ಅನಂತರವೇ ಮಕ್ಕಳನ್ನು ಶಾಲೆಯಿಂದ ಮನೆಗೆ ಕಳುಹಿಸಬೇಕು ಎಂಬ ಅಭಿಪ್ರಾಯವನ್ನು ಹೆತ್ತವರು ವ್ಯಕ್ತಪಡಿಸಿದ್ದಾರೆ.

Advertisement
ನಿರಂತರ ಕಸ ಎಸೆತಕಲ್ಸಂಕ ತೋಡು ಸೇರಿದಂತೆ ನಗರದ ತೋಡು ಗಳಿಗೆ ಪ್ಲಾಸ್ಟಿಕ್ ಬಾಟಲಿ, ಬಳಕೆ ಯಾದ ಇತರ ವಸ್ತುಗಳನ್ನು ನಿರಂತರವಾಗಿ ಎಸೆಯಲಾಗುತ್ತಿದೆ. ಇದರ ಪರಿಣಾಮ ಮಳೆಗಾಲದಲ್ಲಿ ಅನುಭವಕ್ಕೆ ಬರುತ್ತಿದೆ. ನಗರಸಭೆಯ ಕಾರ್ಮಿಕರು ಇಂತಹ ತ್ಯಾಜ್ಯಗಳನ್ನು ತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಮತ್ತೆ ಮತ್ತೆ ಇಂತಹ ತ್ಯಾಜ್ಯ ರಾಶಿಗಳು ಬಂದು ಸೇರುತ್ತಿವೆ. ಬೇಜವಾಬ್ದಾರಿಯಿಂದ ವರ್ತಿಸುವ ಜನರಿಂದಾಗಿ ಸಮಸ್ಯೆ ಹೆಚ್ಚಿದೆ.