Advertisement

Yash: ʼರಾಮಯಾಣʼದಲ್ಲಿ ʼರಾವಣʼನಾಗಲು 150 ಕೋಟಿ ಸಂಭಾವನೆ ಕೇಳಿದ್ರಾ ಯಶ್?‌ ವರದಿ

03:34 PM Oct 24, 2023 | Team Udayavani |

ಮುಂಬಯಿ: ಬಹು ತಾರಾಂಗಣವುಳ್ಳ, ಬಿಗ್‌ ಬಜೆಟ್‌ ʼರಾಮಾಯಣʼ ಸಿನಿಮಾ ಸಟ್ಟೇರುವ ಮುನ್ನವೇ ಒಂದಲ್ಲ ಒಂದು ವಿಚಾರದಿಂದ ಗಮನ ಸೆಳೆಯುತ್ತಿದೆ. ನಿತೇಶ್‌ ತಿವಾರಿ ನಿರ್ದೇಶನದ ಸಿನಿಮಾದಲ್ಲಿ ಬಾಲಿವುಡ್ ಹಾಗೂ ದಕ್ಷಿಣದ ಖ್ಯಾತ ಕಲಾವಿದರು ಇರಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುವ ಕಲಾವಿದರೊಬ್ಬರು ತನ್ನ ಪಾತ್ರಕ್ಕಾಗಿ ದುಬಾರಿ ಸಂಭಾವನೆಯನ್ನು ಕೇಳಿದ್ದಾರೆ ಎನ್ನುವ ಸುದ್ದಿಯೊಂದು ಸದ್ದು ಮಾಡುತ್ತಿದೆ.

Advertisement

ರಣ್ಬೀರ್‌ ಕಪೂರ್‌, ಸಾಯಿ ಪಲ್ಲವಿ ಹಾಗೂ ಕನ್ನಡದ ಯಶ್‌ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಸಾಯಿಪಲ್ಲವಿ ಹಾಗೂ ರಣ್ಬೀರ್‌ ಅವರು ರಾಮ ಹಾಗೂ ಸೀತೆಯಾಗಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದ್ದು, ರಾವಣನಾಗಿ ʼಕೆಜಿಎಫ್‌ʼ ನಟ ಯಶ್‌ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಯಶ್‌ ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ಯಶ್‌ 15 ದಿನದ ಕಾಲ್‌ ಶೀಟ್‌ ನೀಡಿದ್ದಾರೆ ಎಂದು ವರದಿಯೊಂದು ತಿಳಿಸಿತ್ತು. ʼರಾಮಾಯಣʼ ದಲ್ಲಿ ರಾವಣನ ಪಾತ್ರಕ್ಕಾಗಿ ಯಶ್‌ 150 ಕೋಟಿ ರೂ. ಕೇಳಿದ್ದಾರೆ ಎಂದು ಕೆಲ ಸಿನಿ ವೆಬ್‌ ಸೈಟ್‌ ಗಳು ವರದಿ ಮಾಡಿದೆ. ಆದರೆ ಇದು ಅಧಿಕೃತವಾಗಿಲ್ಲ. 150 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನುವ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸದ್ಯ ಯಶ್‌ ಅವರು ʼಯಶ್‌ 19ʼ ಸಿನಿಮಾವನ್ನು ಅಧಿಕೃತವಾಗಿ ಅನೌನ್ಸ್‌ ಮಾಡುವುದು ಯಾವಾಗ ಎನ್ನುವುದನ್ನು ಅವರ ಅಭಿಮಾನಿಗಳು ಮುಂದೆ ನೋಡುತ್ತಿದ್ದಾರೆ. ಯಶ್ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರೊಂದಿಗೆ ಮುಂದಿನ ಸಿನಿಮಾವನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ವರ್ಷದ ಅಂತ್ಯಕ್ಕೆ ಈ ಸಿನಿಮಾ ಅನೌನ್ಸ್‌ ಆಗುವ ಸಾಧ್ಯತೆಯಿದೆ.

ಇನ್ನು ʼರಾಮಾಯಣʼ ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿ ಸಟ್ಟೇರುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next