Advertisement

ದಕ್ಷಿಣ ಕೊರಿಯಾ ಮಾರಕ ವೈರಸ್ ಗೆದ್ದಿದ್ದು ಈ ನಾಲ್ಕು ವಿಧಾನಗಳಿಂದ

09:14 AM Mar 30, 2020 | Hari Prasad |

ಇಲ್ಲಿ ಯಾವ ನಗರವನ್ನೂ ಲಾಕ್‌ ಡೌನ್‌ ಮಾಡಲಿಲ್ಲ. ಯಾವ ಸಾರಿಗೆ ಸಂಪರ್ಕವೂ ಸ್ಥಗಿತಗೊಳ್ಳಲಿಲ್ಲ, ಅಂತಾರಾಷ್ಟ್ರೀಯ ವಿಮಾನಗಳ ಪ್ರವೇಶವನ್ನೂ ತಡೆದಿಲ್ಲ… ಆದರೂ, 9,137 ಕೋವಿಡ್ 19 ವೈರಸ್ ಸೋಂಕಿತರ ಪೈಕಿ 3,730 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಈ ಅಚ್ಚರಿ ಸಂಭವಿಸಿದ್ದು ದಕ್ಷಿಣ ಕೊರಿಯಾದಲ್ಲಿ

Advertisement

ದಕ್ಷಿಣ ಕೊರಿಯಾದ ನಾಲ್ಕು ಕ್ರಮಗಳು
1. ಮಾಹಿತಿಯಲ್ಲಿ ಪಾರದರ್ಶಕತೆ
ಹೊಸದಾಗಿ ಪತ್ತೆಯಾದ ಸೋಂಕುಗಳ ಮಾಹಿತಿ ನೀಡುವಲ್ಲಿ ಪಾರದರ್ಶಕತೆ. ಎಲ್ಲಿ, ಯಾವಾಗ ಮತ್ತು ಹೇಗೆ ಸೋಂಕು ಪತ್ತೆಯಾಯಿತು ಎಂಬ ನಿಖರ ಮಾಹಿತಿ ಒದಗಿಸಿದ್ದು.

2. ನಿಯಂತ್ರಣ, ತಗ್ಗಿಸುವಿಕೆ
ಚೀನದಲ್ಲಿ ಮೊದಲ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಅಂದರೆ ಸೋಂಕು ಹರಡದಂತೆ ನಿಯಂತ್ರಣ ಕ್ರಮ. ಸೋಂಕಿತರನ್ನು ಗುರುತಿಸಿ, ಪ್ರತ್ಯೇಕಿಸುವ ಪ್ರಕ್ರಿಯೆಗೆ ವೇಗ.

3. ಕಿಟ್‌, ಸ್ಕ್ರೀನಿಂಗ್‌
ಪ್ರಮುಖ ಅಸ್ತ್ರವಾಗಿ ರೋಗಪತ್ತೆ ಕಿಟ್‌ ಗಳ ಬಳಕೆ ಹಾಗೂ ಭಾರೀ ಪ್ರಮಾಣದ ಸ್ಕ್ರೀನಿಂಗ್‌ ಪ್ರಕ್ರಿಯೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸಿದ 100ರಷ್ಟು ಪ್ರಯೋಗಾಲಯಗಳು. ವಾರಕ್ಕೆ 4.3 ಲಕ್ಷ ಮಂದಿಯ ತಪಾಸಣೆ ಮತ್ತು ರೋಗ ಪತ್ತೆ ಕಾರ್ಯ.

4. ಚಿಕಿತ್ಸೆಯ ಸರದಿ ನಿರ್ಧಾರ
2015ರಲ್ಲಿ ಮರ್ಸ್‌ ಸೋಂಕು ಆವರಿಸಿದ ವೇಳೆ ಬಳಸಲಾದ ಚಿಕಿತ್ಸೆಯ ಸರದಿ ನಿರ್ಧಾರ, ಚಿಕಿತ್ಸೆ ನೀಡುವ ವ್ಯವಸ್ಥೆಯ ಅನುಷ್ಠಾನ. ಗಂಭೀರ ಸ್ಥಿತಿಯಲ್ಲಿರುವವರಿಗೆಂದೇ 5 ಐಸೋಲೇಷನ್‌ ಆಸ್ಪತ್ರೆಗಳ ಸ್ಥಾಪನೆ ಮತ್ತು ಉಳಿದವರನ್ನು ಸಮುದಾಯ ಆಸ್ಪತ್ರೆಗಳಿಗೆ ರವಾನೆ. ಹೋಟೆಲ್, ಜಿಮ್, ವಸತಿ ಕೇಂದ್ರಗಳನ್ನು ಕೂಡ ಹೊಸ ಆಸ್ಪತ್ರೆಗಳಾಗಿ ಬಳಕೆ.

Advertisement

ಸ್ವಯಂಪ್ರೇರಿತ ಸಾಮಾಜಿಕ ಅಂತರ
ಸ್ವಯಂಪ್ರೇರಿತವಾಗಿ ಜನ ಅಂತರ ಕಾಯ್ದು ಕೊಂಡರು. 2015ರ ಮರ್ಸ್‌ ಸೋಂಕಿನ ವೇಳೆ ಆ ದೇಶ ಕಲಿತ ಪಾಠ ಕೂಡ ನೆರವಿಗೆ ಬಂದಿತ್ತು. ಹೀಗಾಗಿ ಸೋಂಕು ತಡೆವ ಕ್ರಮಗಳ ಬಗ್ಗೆ ಜನರಿಗೆ ಗೊಂದಲ ಇರಲಿಲ್ಲ.

ಸೋಂಕಿತರನ್ನು ಮತ್ತು ಶಂಕಿತರನ್ನೂ ಕ್ಷಿಪ್ರಗತಿಯಲ್ಲಿ ಟ್ರ್ಯಾಕ್‌ ಮಾಡಿದ್ದೂ, ಗೆಲುವಿಗೆ ಕಾರಣವಾಯಿತು. ಫೆಬ್ರವರಿಯಲ್ಲಿ ಡೈಗುವಿನಲ್ಲಿ ಮೊದಲ ಪ್ರಕರಣ ಪತ್ತೆಯಾದ ಮರುಕ್ಷಣವೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಅಭಿಯಾನ ಆರಂಭಿಸಲಾಯಿತು.

ಆರಂಭ ಹೇಗೆ?
– ನಾಲ್ಕು ಹೆಜ್ಜೆಗಳ ಕ್ರಮ
– ಪ್ರತಿಯೊಬ್ಬ ಸೋಂಕಿತನ ಕುರಿತ ಪಾರದರ್ಶಕ ಮಾಹಿತಿ
– ಎಲ್ಲರೂ ಎಚ್ಚೆತ್ತುಕೊಂಡು ಮುಚ್ಚಿಡದೆ ಮುನ್ನೆಚ್ಚರಿಕೆ ವಹಿಸಿದ್ದು ಕಾರಣ

ಶುರುವಲ್ಲೇ ಜಾಗೃತಿ
– ರೋಗ ತಪಾಸಣೆ ಕಿಟ್‌ ಉತ್ಪಾದನೆ ಬಿರುಸು
– ವಾರಕ್ಕೆ 4.30 ಲಕ್ಷ ಮಂದಿಯ ರೋಗ ಪತ್ತೆಗೆ ಕ್ರಮ
– ಹೀಗಾಗಿ ಕೋವಿಡ್ 19 ವೈರಸ್ ಹಬ್ಬುವಿಕೆಗೆ ತಡೆ

Advertisement

Udayavani is now on Telegram. Click here to join our channel and stay updated with the latest news.

Next