Advertisement

ಕೋವಿಡ್‌ ನಡುವೆಯೇ ನಡೆಯಿತು ಚುನಾವಣೆ

11:22 AM Apr 11, 2020 | sudhir |

ಸಿಯೋಲ್‌: ಕೋವಿಡ್‌ ಪಿಡುಗಿನ ನಡುವೆಯೇ ದಕ್ಷಿಣ ಕೊರಿಯಾ ಸಂಸದೀಯ ಚುನಾವಣೆ ನಡೆಸಿ ಅಚ್ಚರಿಯುಂಟು ಮಾಡಿದೆ. ಮುಂದಿನ ವಾರ ಇಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮತದಾನ ಪ್ರಕ್ರಿಯೆ ಶುಕ್ರವಾರ ಶುರುವಾಗಿದೆ.

Advertisement

ಜನರು ಸಾಮಾಜಿಕ ಅಂತರ ಪಾಲಿಸಿಕೊಂಡು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದರು. ದೇಶದ ಎಂಟು ಕ್ವಾರಂಟೈನ್‌ ಕೇಂದ್ರಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಹೀಗಾಗಿ ಕೋವಿಡ್‌ ಸೋಂಕಿತರು ಮತ ಹಾಕಲು ಹೊರಗೆ ಹೋಗುವ ಅಗತ್ಯವಿರಲಿಲ್ಲ. ಜನರು ಕನಿಷ್ಠ ಒಂದು ಮೀಟರ್‌ ಅಂತರದ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮಾಸ್ಕ್ ಮತ್ತು ಬಳಸಿ ಎಸೆಯುವ ಪ್ಲಾಸ್ಟಿಕ್‌ ಕೋಟ್‌ಗಳನ್ನು ಧರಿಸುವುದನ್ನು ಕಡ್ಡಾಯ ಮಾಡಲಾಗಿತ್ತು. ಸ್ಯಾನಿಟೈಸರ್‌ನಲ್ಲಿ ಕೈ ತೊಳೆದ ಬಳಿಕ ಪ್ಲಾಸ್ಟಿಕ್‌ ಗ್ಲೌಸ್‌ಗಳನ್ನು ಧರಿಸಿ ಮತದಾನ ಮಾಡಬೇಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next