ದಕ್ಷಿಣ ಕೊರಿಯಾ: ದಕ್ಷಿಣ ಕೊರಿಯಾದಲ್ಲಿ 116 ಜನರಲ್ಲಿ ಹೊಸ ಸೋಂಕಿನ ಸಾಧ್ಯತೆಯನ್ನು ಪರೀಕ್ಷಿಸಲಾಗಿದೆ ಎಂದು ವರದಿ ಮಾಡಿದ್ದು, ಅಧಿಕಾರಿಗಳು ಹೊಸ ಸೋಕು ತಗಲುವಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ದಕ್ಷಿಣ ಕೊರಿಯಾವು ಸೋಮವಾರ ಒಟ್ಟು 25 ಹೊಸ ಪ್ರಕರಣಗಳನ್ನು ಪತ್ತೆ ಹಚ್ಚಿದ್ದು,. ಆದರೂ ರೋಗಿಗಳ ಹೆಚ್ಚಳವು ದೇಶದಲ್ಲಿ ಆತಂಕವನ್ನುಂಟು ಮಾಡಿದೆ.
ಈ ರೋಗ ಮರುಕಳಿಸಿದ್ದಕ್ಕೆ ಕಾರಣಗಳ ಬಗ್ಗೆ ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿ¨ªಾರೆ. ಆದರೆ ರೋಗಿಗಳಿಗೆ ಮರು ಸೋಂಕು ತಗುಲಿಸುವ ಬದಲು ವೈರಸ್ ಪುನಃ ಸಕ್ರಿಯಗೊಂಡಿರಬಹುದು ಎಂದು ಕೊರಿಯಾ ಸೆಂಟರ್ಸ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನÒನ್ (ಕೆಸಿಡಿಸಿ) ನಿರ್ದೇಶಕ ಜಿಯಾಂಗ್ ಯುನ್ -ಕಿಯೊಂಗ್ ಹೇಳಿ¨ªಾರೆ.
ಈ ಕುರಿತು ಇತರ ತಜ್ಞರು ದೋಷಪೂರಿತ ಪರೀಕ್ಷೆಗಳು ಕಾರಣವಾಗಿರಬಹುದು ಹಾಗೂ ವೈರಸ್ ಅವಶೇಷಗಳು ಇನ್ನೂ ರೋಗಿಗಳ ವ್ಯವಸ್ಥೆಯಲ್ಲಿರಬಹುದು. ಆದರೆ ಆತಿಥೇಯ ಅಥವಾ ಇತರರಿಗೆ ಅಪಾಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ… ಟ್ರಂಪ್ ಅವರ ಕೋರಿಕೆಯ ಮೇರೆಗೆ ಮಂಗಳವಾರ 6,00,000 ಪರೀûಾ ಕಿಟ್‌ಗಳನ್ನು ಅಮೆರಿಕಕ್ಕೆ ಕಳುಹಿಸಲು ದಕ್ಷಿಣ ಕೊರಿಯಾ ಯೋಜಿಸಿದೆ. ಈ ಮಧ್ಯೆ ನಾಗರಿಕರಿಗೆ ಸಾಮಾಜಿಕ ಕೂಟಗಳ ಮೇಲಿನ ಮಾರ್ಗಸೂಚಿಗಳು ಮತ್ತು ನಿರ್ಬಂಧಗಳನ್ನು ಅನುಸರಿಸಬೇಕೆಂದು ಸೂಚಿಸಲಾಗಿದೆ. ದಕ್ಷಿಣ ಕೊರಿಯಾ ನಿವಾಸಿಗಳಿಗೆ ಕನಿಷ್ಠ ಏಪ್ರಿಲ್ 19 ರವರೆಗೆ ಕಟ್ಟುನಿಟ್ಟಾದ ಸಾಮಾಜಿಕ ಅಂತರವನ್ನು ಅನುಸರಿಸಬೇಕೆಂದು ಕರೆ ನೀಡಿದೆ. ಆದರೆ ಪ್ರಕರಣಗಳು ಕಡಿಮೆಯಾಗಿ ಹವಾಮಾನ ಸುಧಾರಿಸಿದಂತೆ, ಹೆಚ್ಚುತ್ತಿರುವ ಜನರು ಮಾರ್ಗಸೂಚಿಗಳನ್ನು ಉಲ್ಲಂ ಸುತ್ತಿರುವ ದೂರು ಕೇಳಿಬರುತ್ತಿದೆ.
ಸೋಮವಾರ ವಿಪತ್ತು ನಿರ್ವಹಣೆ ಕುರಿತ ಸಭೆಯಲ್ಲೂ ಸದ್ಯ ಜನರು ಮನೆಯಲ್ಲಿಯೇ ಇರಬೇಕು. ಯಾವುದೇ ರೀತಿಯ ಸಾಮಾಜಿಕ ಕೂಟಗಳನ್ನು ಮಾಡಬಾರದು ಮತ್ತು ಅಗತ್ಯ ಕಾರಣಗಳಿಗಾಗಿ ಮಾತ್ರ ಹೊರಹೋಗಲು ಆನುಮತಿಸುವ ಅಭಿಪ್ರಾಯ ವ್ಯಕ್ತವಾಗಿದೆ.