Advertisement

Noida; ದಕ್ಷಿಣ ಭಾರತದವರಿಗೆ ಅವಕಾಶ ಇಲ್ಲ: ಜಾಹೀರಾತು ವಿವಾದ

01:10 AM Dec 18, 2024 | Team Udayavani |

ಹೊಸದಿಲ್ಲಿ: ದಕ್ಷಿಣ ಭಾರತದವರಿಗೆ ಅವಕಾಶ ವಿಲ್ಲ ಎಂದು ನೋಯ್ಡಾ ಮೂಲದ ಸಂಸ್ಥೆಯೊಂದು ಜಾಹೀರಾತು ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಲಿಂಕ್ಡ್ಇನ್‌ನಲ್ಲಿ ಈ ಜಾಹೀರಾತು ಪ್ರಕಟವಾಗಿದ್ದು ಸಾಕಷ್ಟು ವಿರೋಧ ವ್ಯಕ್ತವಾಗಿದೆ.

Advertisement

ನೋಯ್ಡಾದಲ್ಲಿರುವ ಡೇಟಾ ವಿಶ್ಲೇ ಷಕ ಹುದ್ದೆಗಾಗಿ ಈ ಜಾಹೀರಾತು ಪ್ರಕಟಿ ಸಿದ್ದು, 4+ ಸೇವಾನುಭವ ಹೊಂದಿರುವ ಅಭ್ಯರ್ಥಿಗಳ ಅಗತ್ಯವಿದೆ. ತಾಂತ್ರಿಕ ಪರಿಣತಿಗಳಿದ್ದರೂ ದಕ್ಷಿಣ ಭಾರತದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಲ್ಲ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.

ಜಾಹೀರಾತು ಪ್ರಕಟವಾಗುತ್ತಿದ್ದಂತೆ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ದಕ್ಷಿಣದ ಅಭ್ಯರ್ಥಿಗಳು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ತಾರತಮ್ಯ ನೀತಿಯನ್ನು ಹೊಂದಿದ್ದು, ಇಂತಹ ವುಗಳಿಗೆ ಅವಕಾಶ ಇರಬಾರದು ಎಂದಿದ್ದಾರೆ.

ಉತ್ತಮವಾಗಿ ಹಿಂದಿ ಬಲ್ಲ ಅನೇಕ ಕೇರಳಿ ಗರನ್ನು ನಾನು ನೋಡಿದ್ದೇನೆ. ಕೇವಲ ಹಿಂದಿ ಬರಬೇಕು ಎಂಬ ಕಾರಣಕ್ಕೆ ನೀವು ದಕ್ಷಿಣ ಭಾರತದವರನ್ನು ವಿರೋಧಿಸುತ್ತಿದ್ದೀರಿ ಎಂದಾದರೆ, ಅದು ತಾರತಮ್ಯ. ಕೆಲಸ ಮಾಡಲು ಹಿಂದಿ ಏಕೆ ಅಷ್ಟೊಂದು ಆವಶ್ಯಕ ಎಂದು ದಕ್ಷಿಣ ಭಾರತದವರೊಬ್ಬರು ಪ್ರಶ್ನಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next