Advertisement

ದಕ್ಷಿಣ ಚೀನ ಸಮುದ್ರದ ಸಮೀಪವೇ ಅಮೆರಿಕ ಯುದ್ಧ ವಿಮಾನ ಹಾರಾಟ

01:05 AM Feb 27, 2023 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ಅಮೆರಿಕದಲ್ಲಿ ಚೀನದ ಬೇಹು ಬಲೂನ್‌ಗಳನ್ನು ಹೊಡೆದುರುಳಿಸಲಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಸಂಘರ್ಷದ ಘಟನೆ ಎರಡೂ ದೇಶಗಳ ನಡುವೆ ಉದ್ಭವಿಸಿದೆ.

Advertisement

ಅಮೆರಿಕ ನೌಕಾಪಡೆಯ ಯುದ್ಧ ವಿಮಾನವೊಂದು ಶುಕ್ರವಾರ ದಕ್ಷಿಣ ಚೀನ ಸಮುದ್ರದ ಬಳಿ ಹಾರಾಡಿದೆ. ಚೀನ ಯುದ್ಧನೆಲೆಯಾಗಿರುವ ಪ್ಯಾರಾಸೆಲ್‌ ದ್ವೀಪದಿಂದ ಕೇವಲ 30 ಮೈಲು ಅಂತರದಲ್ಲಿ ಹಾರಾಟ ನಡೆಸಿದೆ. ಇದರಿಂದ ಒಮ್ಮೆಲೇ ಕೆರಳಿದ ಚೀನ ಸೇನೆ, ಕ್ಷಿಪಣಿಸಜ್ಜಿತ ಯುದ್ಧ ವಿಮಾನದೊಂದಿಗೆ ಆಗಸಕ್ಕೆ ಚಿಮ್ಮಿದೆ.

ಅಲ್ಲದೇ ಅಮೆರಿಕ ವಿಮಾನಕ್ಕೆ ಸಂದೇಶವನ್ನು ಕಳಿಸಿ, ನೀವೀಗ ಚೀನ ವಾಯು ಸರಹದ್ದಿಗೆ ಕೇವಲ 12 ನಾಟಿಕಲ್‌ ಮೈಲುಗಳು ಹತ್ತಿರದಲ್ಲಿದ್ದೀರಿ. ಇನ್ನೂ ಮುಂದುವರಿದರೆ ಎಲ್ಲ ಅಪಾಯಗಳ ಹೊಣೆಯನ್ನು ನೀವೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ. ತತ್‌ಕ್ಷಣ ಅಮೆರಿಕ ವಿಮಾನ, ನಾನು ಪಶ್ಚಿಮದ ಕಡೆಗೆ ಹೋಗುತ್ತಿದ್ದೇನೆ ಎಂದು ಸಂದೇಶ ಕಳಿಸಿತು. ಮುಂದಿನ 15 ನಿಮಿಷ ಚೀನ ವಿಮಾನ ಅಮೆರಿಕ ವಿಮಾವನ್ನು ಹಿಂಬಾಲಿಸಿ, ಅನಂತರ ಸ್ವಸ್ಥಾನಕ್ಕೆ ಮರಳಿತು.

ಕೆಲವೇ ನಿಮಿಷಗಳಲ್ಲಿ ಚೀನದ ಯುದ್ಧನೌಕೆ ಯೊಂದಿಗೂ ಇಂತಹದ್ದೇ ಪರಿಸ್ಥಿತಿ ಎದುರಾ ಯಿತು. ವಸ್ತುಸ್ಥಿತಿಯಲ್ಲಿ ಅಮೆರಿಕದ ಯುದ್ಧ ವಿಮಾ ನಗಳು ಅಂತಾರಾಷ್ಟ್ರೀಯ ಕಾನೂನಿಗೆ ಪೂರಕವಾಗಿ ಹೀಗೆ ಸಂಚಾರ ನಡೆಸುತ್ತವೆ. ಆದರೆ ಚೀನ ಮಾತ್ರ ದ.ಚೀನ ಸಮುದ್ರ ಪ್ರದೇಶವನ್ನು ಅಮೆರಿಕ ಪ್ರವೇಶಿಸಿದ್ದು ಅಪಾಯ, ಸಂಘರ್ಷದ ಸಂಕೇತ ಎಂದೇ ಭಾವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next