Advertisement

ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಾಪಾರಿ ಹತ್ಯೆ

03:45 AM Mar 05, 2017 | Team Udayavani |

ನ್ಯೂಯಾರ್ಕ್‌: ಅಮೆರಿಕದ ದಕ್ಷಿಣ ಕ್ಯಾರೊಲಿನಾದಲ್ಲಿ ಭಾರತೀಯ ಮೂಲದ ಉದ್ಯಮಿ ಹರ್ನಿಷ್‌ ಪಟೇಲ್‌ (43) ಎಂಬುವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಅವರ ಮನೆ ಮುಂಭಾಗದಲ್ಲಿಯೇ ಗುರುವಾರ ಈ ಕೃತ್ಯವೆಸಗಲಾಗಿದೆ.

Advertisement

ಕಳೆದ ವಾರವಷ್ಟೇ ಕನ್ಸಾಸ್‌ ಸಿಟಿಯಲ್ಲಿ ಆಂಧ್ರಪ್ರದೇಶ ಮೂಲದ ಎಂಜಿನಿಯರ್‌ ಶ್ರೀನಿವಾಸ ಕುಚಿಭೋಟ್ಲಾರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಮತ್ತೂಂದು ಪ್ರಕರಣ ನಡೆದಿದೆ. ಶುಕ್ರವಾರ ನ್ಯೂಯಾರ್ಕ್‌ ಭಾರತೀಯ ಮೂಲದ ಮಹಿಳೆಗೆ ಆಫ್ರಿಕನ್‌-ಅಮೆರಿಕನ್‌ ಸಮುದಾಯದ ವ್ಯಕ್ತಿ ಆಕ್ಷೇಪಾರ್ಹ  ರೀತಿಯಲ್ಲಿ ಮಾತುಗಳನ್ನಾಡಿದ್ದ.

ದಕ್ಷಿಣ ಕ್ಯಾರೊಲಿನಾದಲ್ಲಿನ ಲ್ಯಾಂಕಾಸ್ಟರ್‌ ಕೌಂಟಿಯಲ್ಲಿರುವ ತಮ್ಮ ಮಳಿಗೆಯನ್ನು ಮುಚ್ಚಿ ಸನಿಹದಲ್ಲಿಯೇ ಇರುವ ಮನೆಗೆ ಬರುತ್ತಿದ್ದಂತೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲರೊಂದಿಗೆ ಸ್ನೇಹದೊಂದಿಗೆ ವರ್ತನೆ ಮಾಡುತ್ತಿದ್ದ ಮತ್ತು ಕಷ್ಟದಲ್ಲಿ ಇದ್ದವರಿಗೆ ಕೈಲಾದ ಸಹಾಯ ಮಾಡುತ್ತಿದ್ದ ಪಟೇಲ್‌ರನ್ನು ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬ ವಿಚಾರ ಗೊತ್ತಾಗುತ್ತಿಲ್ಲವೆಂದು ಕುಟುಂಬ ಸದಸ್ಯರು, ಸ್ನೇಹಿತರು ಹೇಳಿದ್ದಾರೆ. ಲಾಂಕಾಸ್ಟರ್‌ ಕೌಂಟಿ ಠಾಣೆಗೆ ಗುರುವಾರ ರಾತ್ರಿ 11.33ರ ಸುಮಾರಿಗೆ ಕರೆ ಬಂದಿತ್ತು. ಈ ಘಟನೆಗೆ ಯಾವುದೇ ರೀತಿಯಲ್ಲಿ ಜನಾಂಗೀಯ ನಿಂದನೆ ಪ್ರಕರಣದ ನಂಟು ಕಾಣುತ್ತಿಲ್ಲ ಎಂದು ಹಿರಿಯ ಅಧಿಕಾರಿ ಶೆರಿಫ್ ಬಾರಿ ಫಾಲಿ ತಿಳಿಸಿದ್ದಾರೆ. ಹಣವಿಲ್ಲ ಎಂದು ಬಂದವರಿಗೆ ಪಟೇಲ್‌ ನೆರವಾಗುತ್ತಿದ್ದರೆಂದು ಅವರದ್ದೇ ಮಳಿಗೆಯ ಗ್ರಾಹಕರೊಬ್ಬರು ನೆನಪಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next