Advertisement

ಅಸಂಖ್ಯಾತ ಜೀವರಾಶಿಗಳ ಆಗರ “ಅಮೆಜಾನ್‌”

09:36 AM Aug 25, 2019 | mahesh |

ಮಣಿಪಾಲ: ದಕ್ಷಿಣ ಅಮೆರಿಕದ ಅಮೆಜಾನ್‌ ಕಾಡು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ದಗದಗನೆ ಉರಿಯುತ್ತಿದೆ. ಅಮೆಜಾನ್‌ ಕಾಡುಗಳನ್ನು ಮಳೆಗಳ ಕಾಡು ಎಂದೂ ಕರೆಯಲಾಗುತ್ತದೆ. ಇಂದು ಇದು ಅಪಾಯದಲ್ಲಿ ಇದೆ. ಇದು ದಕ್ಷಿಣ ಅಮೆರಿಕಕ್ಕೆ ಮಾತ್ರ ಸೀಮಿತವಾಗದೇ ವಿಶ್ವಕ್ಕೆ ಹಲವು ರೀತಿಯಲ್ಲಿ ಪ್ರಯೋಜನವಾಗಿದೆ.

Advertisement

40 % ಜಗತ್ತಿನಲ್ಲಿ ಲಭ್ಯವಿರುವ ಶೇ. 40ರಷ್ಟು ಅರಣ್ಯವನ್ನು ಅಮೆಜಾನ್‌ ಮಳೆಯ ಕಾಡುಗಳು ಒಂದೇ ಹೊಂದಿದೆ.
20% ಜಗತ್ತಿನಲ್ಲಿ ಉಸಿರಾಟಕ್ಕೆ ಬೇಕಾಗಿರುವ ಆಮ್ಲಜನಕ (ಆಕ್ಸಿಜನ್‌)ಗಳಲ್ಲಿ ಶೆ. 20ರಷ್ಟು ಆಮ್ಲ ಜನಕವನ್ನು ಅಮೆಜಾನ್‌ ಒಂದೇ ಉತ್ಪಾದಿಸಿ, ಪೂರೈಸುತ್ತದೆ.

8 ರಾಷ್ಟ್ರಗಳು
ಈ ಪ್ರದೇಶದಲ್ಲಿ ಹುಟ್ಟುವ ಅಮೆಜಾನ್‌ ನದಿ ವಿಶ್ವದ 8 ರಾಷ್ಟ್ರಗಳಲ್ಲಿ ಹರಿಯುತ್ತದೆ. 1,600 ಕಿ.ಮೀ. ಸಾಗಿದ ಬಳಿಕ ಆಟ್ಲಾಂಟಿಕ್‌ ಮಹಾಸಾಗರವನ್ನು ಸೇರುತ್ತದೆ. ವಿಶೇಷ ಎಂದರೆ ಈ ನದಿ ಯಾವತ್ತೂ ಕೆಂಪಾಗಿಯೇ ಇರುತ್ತದೆ.

5.5 ಮಿಲಿಯನ್‌
ದಕ್ಷಿಣ ಅಮೆರಿಕದ ಶೇ. 40 ಭೂ ಭಾಗ ಇಲ್ಲಿ ಇದೆ. ಅಂದರೆ ಇದು ಸುಮಾರು 5.5 ಮಿಲಿಯನ್‌ ಚದರ ಕಿ.ಮೀ. ವಿಸ್ತ್ರೀರ್ಣದಲ್ಲಿ ಚಾಚಿಕೊಂಡಿದೆ.

79 ಡಿಗ್ರಿ
ವ್ಯತಿರಿಕ್ತವಾದ ಹವಾಮಾನ ಇಲ್ಲಿದೆ. ಯಾವುದೇ ಸಂದರ್ಭ ಬಿಸಿಯಾಗಲೂ ಬಹುದು, ತಣಿಯಲೂಬಹುದು.

Advertisement

2.5 ಕೋಟಿ
ಇಲ್ಲಿರುವ ಜೀವ ಸಂಕುಲದ ಪ್ರಮಾಣ 4.30 ಲಕ್ಷ. ಇದು ಜಗತ್ತಿನ 1/5ರಷ್ಟು ಜೀವ ಸಂಕುಲವನ್ನು ಹೊಂದಿದೆ.

2,180
ಜಾತಿಯ ಮೀನುಗಳು

1.4 ಮಿಲಿಯನ್‌
ಇದರ 2.6 ಮಿಲಿಯನ್‌ ಚದರ ಕಿ.ಮೀ. ವಿಸ್ತೀರ್ಣ
ದಲ್ಲಿ 1.4 ಮಿಲಿಯನ್‌ ಚದರ ಕಿ.ಮೀ.ನಲ್ಲಿ ಅತೀ ದಟ್ಟವಾದ ಅರಣ್ಯವಿದೆ.

9,500
ಕಳೆದ ಒಂದು ವಾರದಲ್ಲಿ 9,500 ಬೆಂಕಿಗಳು ಈ ಅರಣ್ಯವನ್ನು ಸುಡಲಾ ರಂಭಿಸಿದೆ. ಆದರೆ ನಿಯಂತ್ರಣಕ್ಕೆ ಬಂದಿಲ್ಲ.

73 ಸಾವಿರ
ಈ ಅರಣ್ಯ ಬೆಂಕಿಗೆ ತುತ್ತಾಗುವುದು ಇದೇನು ಮೊದಲ ಬಾರಿಯಲ್ಲ. 2019ರ ಜನವರಿ ತಿಂಗಳ ಬಳಿಕ ಬರೋಬ್ಬರಿ 73 ಸಾವಿರ ಬಾರಿ ಬೆಂಕಿಯನ್ನು ಎದುರಿಸಿದ್ದು, ಇನ್ನೂ ಆರಿಲ್ಲ.

140 ಬಿಲಿಯನ್‌
ಈ ಮಳೆಗಳ ಅರಣ್ಯ 140 ಬಿಲಿಯನ್‌ ಟನ್‌ ಕಾರ್ಬನ್‌ಗಳನ್ನು ಹೊಂದಿದೆ.

4,100 ಮೈಲು
ಈ ದಟ್ಟಾರಣ್ಯದಲ್ಲಿ ಹರಿಯುವ ನದಿಗಳ ಒಟ್ಟು ದೂರ 4,100 ಮೈಲು.

1 ಲಕ್ಷ ಜನರು
ಈ ಮಳೆಗಳ ಕಾಡಿನಲ್ಲಿ ಸುಮಾರು 1 ಲಕ್ಷ ಜನರು ವಾಸಿಸುತ್ತಿದ್ದಾರೆ. ಇವರು ಇಲ್ಲಿನ ಮೂಲ ನಿವಾಸಿಗಳಾಗಿದ್ದಾರೆ.

60 %
ಬ್ರೆಜಿಲ್‌ ರಾಷ್ಟ್ರದ ಶೇ. 60ರಷ್ಟು ಭೂ ಭಾಗವನ್ನು ಆವರಿಸಿಕೊಂಡಿದೆ. ಬೆಂಕಿಗೆ ಆವೃತ್ತಿಯಾದ ಭಾಗವೂ ಅಲ್ಲೇ ಇದೆ.

ಬ್ರೆಜಿಲ್‌, ಪೆರು, ಕೊಲಂಬಿಯಾ, ವೆನೆ‌ಜುವೆಲಾ, ಈಕ್ವೆಡಾರ್‌, ಬೊಲಿವಿಯಾ, ಗಯಾನ, ಸುರಿನಾಮ್‌ ಮತ್ತು ಫ್ರೆಂಚ್‌ ಗಯಾನ ಮೊದಲಾದ 9 ರಾಷ್ಟ್ರಗಳಲ್ಲಿ ಅಮೆಜಾನ್‌ ಕಾಡು ಸವಿಸ್ತಾರವಾಗಿ ಹಬ್ಬಿದೆ.

ಈ ಮಳೆಗಳ ಕಾಡಿನಲ್ಲಿ ಸುಮಾರು 1 ಲಕ್ಷ ಜನರು ವಾಸಿಸುತ್ತಿದ್ದಾರೆ. ಇವರು ಇಲ್ಲಿನ ಮೂಲ ನಿವಾಸಿಗಳಾಗಿದ್ದಾರೆ.

1,294 ಜಾತಿಯ ಪಕ್ಷಿಗಳು
427 ಬಗೆಯ ಸಸ್ತನಿಗಳು
428 ಉಭಯ ವಾಸಿಗಳು
378 ಜಾತಿಯ ಸರೀಸೃಪ

Advertisement

Udayavani is now on Telegram. Click here to join our channel and stay updated with the latest news.

Next