Advertisement

ಕೋಲ್ಕತಾದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು

02:39 AM Mar 17, 2020 | sudhir |

ಕೋಲ್ಕತಾ: ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತಕ್ಕೆ ಆಗಮಿಸಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ ಇನ್ನೂ ಇಲ್ಲೇ ಉಳಿದಿದೆ. ಧರ್ಮಶಾಲಾ ಪಂದ್ಯ ರದ್ದುಗೊಂಡ ಬಳಿಕ ಲಕ್ನೋ ಹಾಗೂ ಕೋಲ್ಕತಾದಲ್ಲಿ ಉಳಿದೆರಡು ಪಂದ್ಯಗಳು ನಡೆಯಬೇಕಿತ್ತು. ಕೊರೊನಾ ಭೀತಿಯಿಂದ ಇವನ್ನೂ ರದ್ದುಗೊಳಿಸಲಾಗಿದೆ.

Advertisement

ಹೀಗಾಗಿ ದಕ್ಷಿಣ ಆಫ್ರಿಕಾ ತಂಡದ ಆಟಗಾರರೆಲ್ಲ ಇಲ್ಲಿಯ ತನಕ ಲಕ್ನೋದಲ್ಲೇ ಉಳಿದಿದ್ದರು. ಸೋಮ ವಾರ ಕೋಲ್ಕತಾಕ್ಕೆ ಬಂದಿಳಿದಿದ್ದಾರೆ. ಇಲ್ಲಿಂದ ದುಬಾೖಗೆ ಪ್ರಯಣಿಸಿ ಅಲ್ಲಿಂದ ದಕ್ಷಿಣ ಆಫ್ರಿಕಾ ತಲುಪಲಿದ್ದಾರೆ.
ಕೇಪ್‌ಟೌನ್‌ಗೆ ತೆರಳುವ ಆಟಗಾ ರರು ದುಬಾೖಯಿಂದ ನೇರವಾಗಿ ಪಯಣಿಸಲಿದ್ದಾರೆ. ಉಳಿದವರು ಜೊಹಾನ್ಸ್‌ಬರ್ಗ್‌ಗೆ ತೆರಳಿ ಅಲ್ಲಿಂದ ತಮ್ಮ ಊರನ್ನು ಸೇರಲಿದ್ದಾರೆ ಎಂದು ತಂಡದ ಮಾಧ್ಯಮ ವ್ಯವಸ್ಥಾಪಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next