Advertisement

ಕೊನೆಗೂ ಗೆದ್ದ ದಕ್ಷಿಣ ಆಫ್ರಿಕಾ

11:47 AM Jun 16, 2019 | keerthan |

ಕಾರ್ಡಿಫ್: ಸಾಲು ಸಾಲು ಪಂದ್ಯಗಳನ್ನು ಪಂದ್ಯಗಳನ್ನು ಸೋತ ನಂತರ ದಕ್ಷಿಣ ಆಫ್ರಿಕಾ ತಂಡ ಈ ವಿಶ್ವಕಪ್ ನಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಶನಿವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ ಒಂಬತ್ತು ವಿಕೆಟ್ ಗಳ ಜಯ ಸಾಧಿಸಿತು.

Advertisement

ಆಫ್ರಿಕಾ ನಾಯಕ ಡು ಫ್ಲೆಸಿಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅಫ್ಘಾನ್ ಆರಂಭಿಕರಿಬ್ಬರು ತಕ್ಕ ಮಟ್ಟಿನ ಆರಂಭ ಪಡೆದರು. ಜಜಾಯ್ 22 ರನ್ ಮತ್ತು ನೂರ್ ಅಲಿ 32 ರನ್ ಗಳಿಸಿದರು. ಆದರೆ ಈ ವೇಳೆ ಸ್ವಲ್ಪ ಮಳೆ ಸುರಿದು ಪಂದ್ಯಕ್ಕೆ ಅಡ್ಡಿಯಾಯಿತು. ಮಳೆ ಬಿಟ್ಟ ನಂತರ ಅಫ್ಘಾನ್ ಪೆವಿಲಿಯನ್ ಪರೇಡ್ ನಡೆಸಿತು. 77 ರನ್ ಗೆ ಏಳು ವಿಕೆಟ್ ಕಳೆದುಕೊಂಡಿದ್ದ ಅಫ್ಘಾನ್ ನೆರವಾದವರು ರಶೀದ್ ಖಾನ್. ರಶೀದ್ 35 ರನ್ ಬಾರಿಸಿ ತಂಡದ ಮೊತ್ತ ನೂರರ ಗಡಿ ದಾಟುವಂತೆ ಮಾಡಿದರು. ಅಂತಿಮವಾಗಿ 34.1 ಓವರ್ ನಲ್ಲಿ 125 ರನ್ ಗಳಿಸಲಷ್ಟೆ ಶಕ್ತವಾಯಿತು.

ಸುಲಭ ಮೊತ್ತವನ್ನು ಬೆನ್ನತ್ತಿದ ಆಫ್ರಿಕಾಗೆ ಆರಂಭಿಕರಿಬ್ಬರು ಶತಕದ ಜೊತೆಯಾಟ ನಡೆಸಿದರು. ಡಿ ಕಾಕ್ 68 ರನ್ ಗಳಿಸಿ ಔಟಾದರು. ಹಾಶಿಮ್ ಆಮ್ಲ 41 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ 28 ಓವರ್ ನಲ್ಲಿ ಒಂದು ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next