Advertisement

ಇಂಗ್ಲೆಂಡನ್ನು ಮಣಿಸಿದ ದಕ್ಷಿಣ ಆಫ್ರಿಕಾ

11:20 PM Dec 29, 2019 | Team Udayavani |

ಸೆಂಚುರಿಯನ್‌: ಇಂಗ್ಲೆಂಡ್‌ ಎದುರಿನ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವನ್ನು 107 ರನ್ನುಗಳಿಂದ ಗೆದ್ದ ದಕ್ಷಿಣ ಆಫ್ರಿಕಾ, ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಂಕದ ಖಾತೆ ತೆರೆದಿದೆ. ಸೆಂಚುರಿಯನ್‌ನಲ್ಲಿ 376 ರನ್ನುಗಳ ಗುರಿ ಪಡೆದ ಇಂಗ್ಲೆಂಡ್‌, ರವಿವಾರ 4ನೇ ದಿನದಾಟ ಮುಂದುವರಿಸಿ 268ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ವೇಗಿಗಳಾದ ಕಾಗಿಸೊ ರಬಾಡ (103ಕ್ಕೆ 4), ಅನ್ರಿಚ್‌ ನೋರ್ಜೆ (56ಕ್ಕೆ 3) ಮತ್ತು ಸ್ಪಿನ್ನರ್‌ ಕೇಶವ್‌ ಮಹಾರಾಜ್‌ (37ಕ್ಕೆ 2) ಸೇರಿಕೊಂಡು ಆಂಗ್ಲರ ಹಾರಾಟವನ್ನು ಕೊನೆಗೊಳಿಸಿದರು.

Advertisement

3ನೇ ದಿನದಾಟದಲ್ಲಿ ಒಂದಕ್ಕೆ 121 ರನ್‌ ಗಳಿಸಿ ಹೋರಾಟದ ಸೂಚನೆ ನೀಡಿದ್ದ ಇಂಗ್ಲೆಂಡ್‌, ರವಿವಾರ ಇದೇ ಲಯವನ್ನು ಕಾಯ್ದುಕೊಳ್ಳಲು ವಿಫ‌ಲವಾಯಿತು. ಸ್ಕೋರ್‌ 139ಕ್ಕೆ ಏರಿದಾಗ 84 ರನ್‌ ಮಾಡಿದ ರೋರಿ ಬರ್ನ್ಸ್ ವಿಕೆಟ್‌ ಬಿತ್ತು. ಇಂಗ್ಲೆಂಡ್‌ ಕುಸಿತವೂ ಮೊದಲ್ಗೊಂಡಿತು. ಆಫ್ರಿಕಾ ದಾಳಿಗೆ ತುಸು ಪ್ರತಿರೋಧ ತೋರಿದವರೆಂದರೆ ಜೋ ರೂಟ್‌ ಮಾತ್ರ (48). ಡೆನ್ಲಿ 31, ಜಾಸ್‌ ಬಟ್ಲರ್‌ 22 ರನ್‌ ಮಾಡಿದರು. 129 ರನ್‌ ಅಂತರದಲ್ಲಿ ಇಂಗ್ಲೆಂಡಿನ 9 ವಿಕೆಟ್‌ಗಳು ಹಾರಿಹೋದವು. 4 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಈಗ 1-0 ಮುನ್ನಡೆಯಲ್ಲಿದೆ. ದ್ವಿತೀಯ ಟೆಸ್ಟ್‌ ಜ. 3ರಿಂದ ಕೇಪ್‌ಟೌನ್‌ನಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌
ದಕ್ಷಿಣ ಆಫ್ರಿಕಾ-284 ಮತ್ತು 272. ಇಂಗ್ಲೆಂಡ್‌-181 ಮತ್ತು 268 (ಬರ್ನ್ಸ್84, ರೂಟ್‌ 48, ಡೆನ್ಲಿ 31, ಸಿಬ್ಲಿ 29, ಬಟ್ಲರ್‌ 22, ರಬಾಡ 103ಕ್ಕೆ 4, ನೋರ್ಜೆ 56ಕ್ಕೆ 3, ಮಹಾರಾಜ್‌ 37ಕ್ಕೆ 2). ಪಂದ್ಯಶ್ರೇಷ್ಠ: ಕ್ವಿಂಟನ್‌ ಡಿ ಕಾಕ್‌.

Advertisement

Udayavani is now on Telegram. Click here to join our channel and stay updated with the latest news.

Next