Advertisement

4ನೇ ಟೆಸ್ಟ್‌: ಆಸ್ಟ್ರೇಲಿಯಾ ವಿರುದ್ಧ ಆಫ್ರಿಕಾಕ್ಕೆ ಭಾರೀ ಮುನ್ನಡೆ

07:15 AM Apr 02, 2018 | |

ಜೊಹಾನ್ಸ್‌ಬರ್ಗ್‌: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸಂಕಟ ಮುಂದುವರಿದಿದೆ. 3ನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ 3 ವಿಕೆಟ್‌ ನಷ್ಟಕ್ಕೆ 134 ರನ್‌ ಮಾಡಿದ್ದು, ಒಟ್ಟು 401 ರನ್ನುಗಳ ಬೃಹತ್‌ ಮುನ್ನಡೆ ಸಾಧಿಸಿದೆ.

Advertisement

ಹರಿಣಗಳ 488 ರನ್ನುಗಳ ಬೃಹತ್‌ ಮೊತ್ತಕ್ಕೆ ಜವಾಬು ನೀಡಿದ ಆಸ್ಟ್ರೇಲಿಯಾ 221 ರನ್ನುಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆಸೀಸ್‌ 6ಕ್ಕೆ 110 ರನ್‌ ಮಾಡಿದಲ್ಲಿಂದ ಭಾನುವಾರದ ಬ್ಯಾಟಿಂಗ್‌ ಮುಂದುವರಿಸಿತ್ತು. ಮೊದಲ ಸಲ ಟೆಸ್ಟ್‌ ನಾಯಕತ್ವ ವಹಿಸಿದ ಟಿಮ್‌ ಪೇನ್‌ ಕೈಬೆರಳಿನ ಮುರಿತದ ನಡುವೆಯೂ 62 ರನ್‌ ಹೊಡೆದರು. ಪ್ಯಾಟ್‌ ಕಮಿನ್ಸ್‌ 50 ರನ್ನುಗಳ ಕೊಡುಗೆ ಸಲ್ಲಿಸಿದರು. ದಕ್ಷಿಣ ಆಫ್ರಿಕಾ ಪರ ವೆರ್ನನ್‌ ಫಿಲಾಂಡರ್‌, ಕ್ಯಾಗಿಸೊ ರಬಾಡ ಮತ್ತು ಕೇಶವ್‌ ಮಹಾರಾಜ್‌ ತಲಾ 3 ವಿಕೆಟ್‌ ಉರುಳಿಸಿದರು. 267 ರನ್ನುಗಳ ಹಿನ್ನಡೆಗೆ ಸಿಲುಕಿದರೂ ಆಸ್ಟ್ರೇಲಿಯಾಕ್ಕೆ ಫಾಲೋಆನ್‌ ರಿಯಾಯಿತಿ ನೀಡಲಾಯಿತು. ದಕ್ಷಿಣ ಆಫ್ರಿಕಾ ತನ್ನ ದ್ವಿತೀಯ ಸರದಿಯಲ್ಲಿ ಐಡನ್‌ ಮಾಕ್ರìಮ್‌ (37), ಹಾಶಿಮ್‌ ಆಮ್ಲ (16) ಮತ್ತು ಎಬಿ ಡಿ ವಿಲಿಯರ್ (6) ವಿಕೆಟ್‌ ಕಳೆದುಕೊಂಡಿದೆ. ಡೀನ್‌ ಎಲ್ಗರ್‌ (39) ಮತ್ತು ನಾಯಕ ಫಾ ಡು ಪ್ಲೆಸಿಸ್‌ (34) ಕ್ರೀಸಿನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next