Advertisement
3 ಏಕದಿನ ಪಂದ್ಯಗಳಿಗೆ ಭಾರತ ತಂಡದ ನಾಯಕತ್ವವನ್ನು ಕೆಎಲ್ ರಾಹುಲ್ ವಹಿಸಲಿದ್ದಾರೆ. ತಂಡದಲ್ಲಿ ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, (ಉಪನಾಯಕ ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್ , ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ದೀಪಕ್ ಚಾಹರ್ ಅವರಿಗೆ ಸ್ಥಾನ ನೀಡಲಾಗಿದೆ.
Related Articles
Advertisement
2 ಟೆಸ್ಟ್ ಪಂದ್ಯಗಳಿಗೆ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್‌ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಮೊಹಮದ್ ಶಮಿ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿಧ್ ಕೃಷ್ಣ.
ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರಿಗೆ ಟೆಸ್ಟ್ ತಂಡದಲ್ಲಿ ಅವಕಾಶ ನೀಡಲಾಗಿಲ್ಲ.
ಪಂದ್ಯಗಳ ವೇಳಾಪಟ್ಟಿಡಿಸೆಂಬರ್ 10 ರಂದು ಡರ್ಬನ್ ನಲ್ಲಿ ಭಾರತ ಮೊದಲ ಟಿ 20 ಪಂದ್ಯದೊಂದಿಗೆ ಸರಣಿ ಆರಂಭವಾಗಲಿದೆ.
ಡಿ. 12 ರಂದು 2ನೇ ಟಿ 20 ಗ್ಕೆಬರ್ಹಾ ಸೇಂಟ್ ಜಾರ್ಜ್ ಪಾರ್ಕ್ ನಲ್ಲಿ, ಡಿ. 14 ರಂದು 3ನೇ ಟಿ20 ನ್ಯೂ ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್‌ಬರ್ಗ್ ನಲ್ಲಿ ನಡೆಯಲಿದೆ. ಡಿಸೆಂಬರ್ 17 ರಂದು ಜೋಹಾನ್ಸ್‌ಬರ್ಗ್ ನಲ್ಲಿ ಮೊದಲ ಏಕದಿನ ಪಂದ್ಯ ,19 ರಂದು ಸೇಂಟ್ ಜಾರ್ಜ್ ಪಾರ್ಕ್ ನಲ್ಲಿ ಎರಡನೇ ಏಕದಿನ ಪಂದ್ಯ , 21 ರಂದು 3ನೇ ಏಕದಿನ ಪಂದ್ಯ ಬೋಲ್ಯಾಂಡ್ ಪಾರ್ಕ್, ಪರ್ಲ್ ನಲ್ಲಿ ನಡೆಯಲಿದೆ. ಡಿಸೆಂಬರ್ 26 ರಂದು ಮೊದಲ ಟೆಸ್ಟ್ ಆರಂಭವಾಗಲಿದೆ. 2ನೇ ಟೆಸ್ಟ್ ಜನವರಿ 3 ರಂದು ಆರಂಭವಾಗಲಿದೆ.