Advertisement

ಧರ್ಮಶಾಲಾ ತಲುಪಿದ ದಕ್ಷಿಣ ಆಫ್ರಿಕಾ ತಂಡ

09:18 AM Mar 11, 2020 | Team Udayavani |

ಧರ್ಮಶಾಲಾ: ಭಾರತದೆದುರಿನ 3 ಪಂದ್ಯಗಳ ಏಕದಿನ ಸರಣಿಗಾಗಿ ಕ್ವಿಂಟನ್‌ ಡಿ ಕಾಕ್‌ ನೇತೃತ್ವದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ ಸೋಮವಾರ ಹೊಸದಿಲ್ಲಿಗೆ ಆಗಮಿಸಿತು. ಬಳಿಕ ಧರ್ಮಶಾಲಾಕ್ಕೆ ತೆರಳಿತು. ಸರಣಿಯ ಮೊದಲ ಮುಖಾಮುಖೀ ಗುರುವಾರ ಇಲ್ಲಿ ನಡೆಯಲಿದೆ.

Advertisement

ಆತಿಥೇಯ ಭಾರತ ತಂಡ ಮಂಗಳವಾರ ಧರ್ಮಶಾಲಾ ತಲುಪಲಿದೆ. ಬಿಸಿಸಿಐ ಗುತ್ತಿಗೆ ವ್ಯಾಪ್ತಿಗೆ ಒಳಪಡುವ ಭಾರತದ ಆಟಗಾರರು ಬೆಂಗಳೂರಿನ ನ್ಯಾಶನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕಾದ ಕಾರಣ ಪ್ರಯಾಣದಲ್ಲಿ ವಿಳಂಬವಾಗುತ್ತಿದೆ ಎಂದು ಬಿಸಿಸಿಐ ತಿಳಿಸಿದೆ.

ಹಸ್ತಲಾಘವ ಇಲ್ಲ
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ದಕ್ಷಿಣ ಆಫ್ರಿಕಾ ತಂಡದ ಕೋಚ್‌ಮಾರ್ಕ್‌ ಬೌಷರ್‌, “ಭಾರತ ಪ್ರವಾಸದ ವೇಳೆ ಎದುರಾಳಿ ಆಟಗಾರರಿಗೆ ಹಸ್ತಲಾಘವ ಮಾಡದಿರಲು ನಿರ್ಧರಿಸಿಲಾಗಿದೆ’ ಎಂದಿದ್ದಾರೆ.

“ಕೊರೊನಾ ವೈರಸ್‌ ಭೀತಿಯಿಂದ ನಮ್ಮ ಕ್ರಿಕೆಟಿಗರು ಎದುರಾಳಿ ಆಟಗಾರರೊಂದಿಗೆ ಸಾಂಪ್ರದಾಯಿಕ ಹಸ್ತಲಾಘವ ಮಾಡುವುದನ್ನು ನಿಲ್ಲಿಸುವ ಸಾಧ್ಯತೆ ಇದೆ. ಇದು ಅಗೌರವವಲ್ಲ, ಆರೋಗ್ಯದ ದೃಷ್ಟಿಯಿಂದ ಇಂತಹ ಕ್ರಮಕ್ಕೆ ಆಟಗಾರರು ಮುಂದಾಗಬೇಕಿದೆ’ ಎಂದು ಬೌಷರ್‌ ತಿಳಿಸಿದರು.

“ಕೊರೊನಾ ವೈರಸ್‌ ಬಗ್ಗೆ ಹಾಗೂ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಲಾಗಿದೆ. ವೈದ್ಯಕೀಯ ತಂಡ ಕೂಡ ನಮ್ಮೊಂದಿಗೆ ಆಗಮಿಸಿದೆ. ಡಾ| ಶುಯೆಬ್‌ ಮಾಂಜ್ರಾ ಈ ತಂಡದ ಮುಖ್ಯಸ್ಥರಾಗಿದ್ದಾರೆ’ ಎಂದು ಬೌಷರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next