Advertisement

Snake on plane:ಆಕಾಶದಲ್ಲಿ ಹಾರಾಡುತ್ತಿದ್ದ ಹೆಲಿಕ್ಯಾಪ್ಟರ್ ನೊಳಗೆ ಕಾಳಿಂಗ ಸರ್ಪ ದರ್ಶನ!

01:14 AM Apr 07, 2023 | Team Udayavani |

ಜೋಹಾನ್ಸ್‌ಬರ್ಗ್‌: ರಸ್ತೆಯಲ್ಲಿ ನಡೆಯುವಾಗ ದಿಢೀರನೆ ಘಟಸರ್ಪವೊಂದು ಅಡ್ಡಬಂದರೆ ಸಾಕು ಮೈಚಳಿ ಬಂದಂತಾಗುತ್ತದೆ. ಹೀಗಿರುವಾಗ ಹೆಲಿಕಾಪ್ಟರ್‌ ಓಡಿಸುವ ಪೈಲಟ್‌ ತನ್ನ ಬೆನ್ನ ಹಿಂದೆಯೇ ಕಾಳಿಂಗಸರ್ಪ ತಲೆ ಹಾಕಿದ್ದನ್ನು ಕಂಡರೆ ಏನಾಗಬಹುದು? ಏನೂ ಅನಾಹುತವಾಗದಂತೆ ಪೈಲಟ್‌ ರುಡಾಲ್ಫ್ ಎರಾಸ್ಮಸ್‌ ಪರಿಸ್ಥಿತಿಯನ್ನು ನಿಭಾಯಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

Advertisement

ದ.ಆಫ್ರಿಕಾದ ವೂರ್ಸೆಸ್ಟರ್‌ನಿಂದ ನೆಲ್ಸ್‌ ಪ್ರುಟ್‌ಗೆ 4 ಮಂದಿಯಿದ್ದ ಸಣ್ಣ ವಿಮಾನ ವನ್ನು ರುಡಾಲ್ಫ್ ಚಾಲನೆ ಮಾಡುತ್ತಿದ್ದರು. ಅವರಿಗೆ ತಾವು ಆಸನದೊಳಗೇ ಕೂತು ಸ್ವಲ್ಪ ಹೊತ್ತು ಆದಾಗ ಬೆನ್ನಹಿಂದೆ ತಣ್ಣಗಾಗಲು ಆರಂಭವಾಗಿ, ಏನೋ ಹರಿದಾಡಿ ದಂತಾದಾಗ, ತಿರುಗಿ ನೋಡುತ್ತಾರೆ… ಕಾಳಿಂಗ ಸರ್ಪದ ದರ್ಶನ! ಕೂಡಲೇ ಕಾಪ್ಟರ್‌ನೊಳಕ್ಕೆ ಹಾವಿದೆ, ಸದ್ಯದಲ್ಲೇ ಭೂಸ್ಪರ್ಶ ಮಾಡಲಾಗುತ್ತದೆ. ಧೈರ್ಯವಾಗಿ ಕುಳಿತುಕೊಳ್ಳಿ ಎಂದು ಪ್ರಯಾಣಿಕರಿಗೆ ತಿಳಿಸಿದರು.

ಅಲ್ಲೇ ಸನಿಹದಲ್ಲಿದ್ದ ವೆಲ್ಕಾಮ್‌ ವಿಮಾನ ನಿಲ್ದಾಣದಲ್ಲಿ ಇಳಿಸಿಯೇಬಿಟ್ಟರು. ಎಲ್ಲರು ಇಳಿದ‌ ಬಳಿಕ ಕಡೆಯದಾಗಿ ರುಡಾಲ್ಫ್ ಇಳಿದುಕೊಂಡು ಆಸನದ ಕೆಳಗೆ ನೋಡಿದಾಗ ಕಾಳಿಂಗ ಸರ್ಪ ಸುರುಳಿ ಸುತ್ತಿಕೊಂಡು ಮಲಗಿತ್ತು.

ಮುಂಚೆಯೇ ಸುಳಿವು ಸಿಕ್ಕಿತ್ತು!: ವಸ್ತುಸ್ಥಿತಿಯಲ್ಲಿ ರವಿವಾರ ಕಾಪ್ಟರ್‌ನೊಳಕ್ಕೆ ಹಾವಿರುವುದು ಸ್ವಚ್ಛತಾ ಸಿಬಂದಿಗೆ ಗೊತ್ತಾಗಿತ್ತು. ಹಿಡಿಯಲು ಹೋದಾಗ ಎಂಜಿನ್‌ನ ರಕ್ಷಣ ಕವಚದೊಳಕ್ಕೆ ನುಸುಳಿಹೋಯಿತು. ಅಲ್ಲಿ ಪರಿಶೀಲಿಸಿದಾಗ ಹಾವಿನ ಸುಳಿವೇ ಸಿಕ್ಕಲಿಲ್ಲ. ಕಡೆಗೆ ಹೊರಗೆ ಹೋಗಿರಬಹುದು ಎಂದು ಸಿಬಂದಿ ಸುಮ್ಮನಾದರು. ಸೋಮವಾರ ಘಟನೆ ನಡೆದ ಬಳಿಕ ಮತ್ತೆ ಇಡೀ ಕಾಪ್ಟರ್‌ ಬಿಚ್ಚಿ ಹುಡುಕಿದ್ದಾರೆ. ಆಗಲೂ ಹಾವು ಪತ್ತೆಯಾಗಿಲ್ಲ, ಈಗ ಹಾವೊಂದು ರಹಸ್ಯವಾಗಿ ಸಿಬಂದಿಯನ್ನು ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next