Advertisement

ಅಭ್ಯಾಸ ಆರಂಭಿಸಿದ ದಕ್ಷಿಣ ಆಫ್ರಿಕಾ ಆಟಗಾರರು

11:14 PM Jun 03, 2022 | Team Udayavani |

ಹೊಸದಿಲ್ಲಿ: ಟಿ20 ಸರಣಿ ಯನ್ನಾಡಲು ಭಾರತಕ್ಕೆ ಆಗಮಿಸಿರುವ ದಕ್ಷಿಣ ಆಫ್ರಿಕಾ ತಂಡದ ಸದಸ್ಯರು ಶುಕ್ರವಾರ “ಫಿರೋಜ್‌ ಷಾ ಕೋಟ್ಲಾ’ ದಲ್ಲಿ ಮೊದಲ ಸುತ್ತಿನ ಅಭ್ಯಾಸ ನಡೆಸಿದರು. ಇದಕ್ಕೂ ಮುನ್ನ ಜಿಮ್‌ನಲ್ಲಿ ವ್ಯಾಯಾಮ ಮಾಡಿದರು.

Advertisement

ಸ್ಪಿನ್‌ದ್ವಯರಾದ ತಬ್ರೇಜ್‌ ,ಕೇಶವ್‌ ಮಹಾರಾಜ್‌ ಮತ್ತು ಬ್ಯಾಟರ್‌ ಐಡನ್‌ ಮಾರ್ಕ್‌ರಮ್‌ ಹೆಚ್ಚಿನ ಅವಧಿಯ ಅಭ್ಯಾಸ ನಡೆಸಿದರು. ಈ ಮೂವರು 5 ಪಂದ್ಯಗಳ ಸರಣಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸುವ ಎಲ್ಲ ಸಾಧ್ಯತೆ ಇದೆ.

5 ವರ್ಷಗಳ ಬಳಿಕ ತಂಡಕ್ಕೆ ಮರಳಿದ ವೇಯ್ನ ಪಾರ್ನೆಲ್‌, ವೇಗಿ ಡ್ವೇನ್‌ ಪ್ರಿಟೋರಿಯಸ್‌, ರಸ್ಸಿ ವಾನ್‌ ಡರ್‌ ಡುಸೆನ್‌ ಕೂಡ ಕಠಿನ ಅಭ್ಯಾಸ ನಡೆಸಿದರು. ಪ್ರಧಾನ ಕೋಚ್‌ ಮಾರ್ಕ್‌ ಬೌಷರ್‌ ಅಭ್ಯಾಸದ ಉಸ್ತುವಾರಿ ವಹಿಸಿದ್ದರು. ಇವರು ವೇಗಿ ಮಾರ್ಕೊ ಜಾನ್ಸೆನ್‌ಗೆ ಕೆಲವು ಬೌಲಿಂಗ್‌ ಟಿಪ್ಸ್‌ ಹೇಳಿಕೊಟ್ಟರು.

ಐಪಿಎಲ್‌ನಲ್ಲಿ ಮಿಂಚಿದ ಡೇವಿಡ್‌ ಮಿಲ್ಲರ್‌ ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದು, ಸದ್ಯವೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ನೆಗೆಟಿವ್‌ ಫ‌ಲಿತಾಂಶ: ದ. ಆಫ್ರಿಕಾ ಸದಸ್ಯರೆಲ್ಲರ ಆರ್‌ಟಿ ಪಿಸಿಆರ್‌ ಫ‌ಲಿತಾಂಶ ನೆಗೆಟಿವ್‌ ಬಂದಿದ್ದು, ಅನಂತರವೇ ಎಲ್ಲರೂ ಅಭ್ಯಾಸಕ್ಕೆ ಇಳಿದಿದ್ದರು. ಮೊದಲ ಪಂದ್ಯ ಹೊಸ ದಿಲ್ಲಿಯಲ್ಲಿ ಗುರುವಾರ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next