Advertisement

ಇಮಾಮ್‌, ಹಫೀಜ್‌ ಸಾಹಸದಲ್ಲಿ ಗೆದ್ದ ಪಾಕ್‌

12:30 AM Jan 21, 2019 | Team Udayavani |

ಪೋರ್ಟ್‌ ಎಲಿಜಬೆತ್‌: ದಕ್ಷಿಣ ಆಫ್ರಿಕಾ ವಿರುದ್ಧದ ಮೂರೂ ಟೆಸ್ಟ್‌ ಪಂದ್ಯಗಳನ್ನು ಸೋತ ನಿರಾಶೆಯಲ್ಲಿದ್ದ ಪ್ರವಾಸಿ ಪಾಕಿಸ್ಥಾನ, ಏಕದಿನ ಸರಣಿಯಲ್ಲಿ ಗೆಲುವಿನ ಆರಂಭ ಪಡೆದಿದೆ. ಶನಿವಾರ ರಾತ್ರಿ ಇಲ್ಲಿನ “ಸೇಂಟ್‌ ಜಾರ್ಜಸ್‌ ಪಾರ್ಕ್‌’ನಲ್ಲಿ ನಡೆದ ಮುಖಾಮುಖೀಯಲ್ಲಿ 5 ವಿಕೆಟ್‌ ಜಯ ಸಾಧಿಸಿದೆ.

Advertisement

ಹಾಶಿಮ್‌ ಆಮ್ಲ ಅವರ ಶತಕ (108), ರಸ್ಸಿ ವಾನ್‌ ಡರ್‌ ಡ್ಯುಸೆನ್‌ ಅವರ ನೈಂಟಿ ಪ್ಲಸ್‌ ನೆರವಿನಿಂದ (93) ದಕ್ಷಿಣ ಆಫ್ರಿಕಾ 2 ವಿಕೆಟಿಗೆ 266 ರನ್‌ ಬಾರಿಸಿ ಸವಾಲೊಡ್ಡಿತು. ಜವಾಬಿತ್ತ ಪಾಕಿಸ್ಥಾನ 49.1 ಓವರ್‌ಗಳಲ್ಲಿ 5 ವಿಕೆಟಿಗೆ 267 ರನ್‌ ಬಾರಿಸಿ ಜಯ ಸಾಧಿಸಿತು.

ಆರಂಭಕಾರ ಇಮಾಮ್‌ ಉಲ್‌ ಹಕ್‌ ಮತ್ತು ಅನುಭವಿ ಆಲ್‌ರೌಂಡರ್‌ ಮೊಹಮ್ಮದ್‌ ಹಫೀಜ್‌ ಅವರ ಬ್ಯಾಟಿಂಗ್‌ ಸಾಹಸ ಪಾಕ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಇಮಾಮ್‌ 101 ಎಸೆತಗಳಿಂದ 86 ರನ್‌ ಬಾರಿಸಿದರೆ (5 ಬೌಂಡರಿ, 2 ಸಿಕ್ಸರ್‌), ಹಫೀಜ್‌ 63 ಎಸೆತ ನಿಭಾಯಿಸಿ ಅಜೇಯ 71 ರನ್‌ ಸಿಡಿಸಿದರು (8 ಬೌಂಡರಿ, 2 ಸಿಕ್ಸರ್‌). ತಂಡವನ್ನು ಸುರಕ್ಷಿತವಾಗಿ ದಡ ಮುಟ್ಟಿಸಿದ ಹಫೀಜ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಪಾಕ್‌ ಸರದಿಯ ಇತರ ಪ್ರಮುಖ ಸ್ಕೋರರ್‌ಗಳೆಂದರೆ ಬಾಬರ್‌ ಆಜಂ (49) ಮತ್ತು ಫ‌ಕಾರ್‌ ಜಮಾನ್‌ (25). ಶೋಯಿಬ್‌ ಮಲಿಕ್‌ 12 ರನ್‌ ಮಾಡಿ ನಿರ್ಗಮಿಸಿದರು. ಆಫ್ರಿಕಾ ಪರ ಡ್ನೂನ್‌ ಒಲಿವರ್‌ 2 ವಿಕೆಟ್‌ ಉರುಳಿಸಿದರೂ ಇದಕ್ಕೆ 73 ರನ್‌ ಬಿಟ್ಟುಕೊಟ್ಟರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-50 ಓವರ್‌ಗಳಲ್ಲಿ 2 ವಿಕೆಟಿಗೆ 266 (ಆಮ್ಲ 108, ಡ್ಯುಸೆನ್‌ 93, ಹೆಂಡ್ರಿಕ್ಸ್‌ 45, ಶಾಬಾದ್‌ 41ಕ್ಕೆ 1, ಹಸನ್‌ ಅಲಿ 42ಕ್ಕೆ 1). ಪಾಕಿಸ್ಥಾನ-49.1 ಓವರ್‌ಗಳಲ್ಲಿ 5 ವಿಕೆಟಿಗೆ 267 (ಇಮಾಮ್‌ 86, ಹಫೀಜ್‌ ಔಟಾಗದೆ 71, ಬಾಬರ್‌ 49, ಒಲಿವರ್‌ 73ಕ್ಕೆ 2).

Advertisement

ಪಂದ್ಯಶ್ರೇಷ್ಠ: ಮೊಹಮ್ಮದ್‌ ಹಫೀಜ್‌.

Advertisement

Udayavani is now on Telegram. Click here to join our channel and stay updated with the latest news.

Next