Advertisement

ಲಾರ್ಡ್ಸ್‌ ಟೆಸ್ಟ್‌ ಪಂದ್ಯ: ಇಂಗ್ಲೆಂಡ್‌ ಬ್ಯಾಟಿಂಗ್‌ ಕುಸಿತ

10:32 PM Aug 17, 2022 | Team Udayavani |

ಲಂಡನ್‌: ಬುಧವಾರ ಮೊದಲ್ಗೊಂಡ ದಕ್ಷಿಣ ಆಫ್ರಿಕಾ ಎದುರಿನ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಬ್ಯಾಟಿಂಗ್‌ ಕುಸಿತ ಅನುಭವಿಸಿದೆ. ಮಳೆಯಿಂದಾಗಿ ದಿನದಾಟ ಕೇವಲ 32 ಓವರ್‌ಗಳಿಗೆ ಕೊನೆಗೊಂಡಾಗ ಆಂಗ್ಲರ ಪಡೆ 6 ವಿಕೆಟ್‌ ನಷ್ಟಕ್ಕೆ ಕೇವಲ 116 ರನ್‌ ಮಾಡಿತ್ತು.

Advertisement

61 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿರುವ ಓಲೀ ಪೋಪ್‌ ತಂಡದ ರಕ್ಷಣೆಗೆ ನಿಂತಿದ್ದಾರೆ.

ಎರಡಂಕೆಯ ಮೊತ್ತ ದಾಖಲಿಸಿದ ಮತ್ತೋರ್ವ ಆಟಗಾರನೆಂದರೆ ನಾಯಕ ಬೆನ್‌ ಸ್ಟೋಕ್ಸ್‌ (20).ಆ್ಯನ್ರಿಚ್‌ ನೋರ್ಜೆ 3, ಕಾಗಿಸೊ ರಬಾಡ 2 ವಿಕೆಟ್‌ ಉರುಳಿಸಿದರು.

ಬೆಲ್‌ ಹೊಡೆದ ಬೆಲ್‌!
ಗಂಟೆ ಬಾರಿಸುವ ಮೂಲಕ ಟೆಸ್ಟ್‌ ಪಂದ್ಯದ ದಿನದಾಟದ ಆರಂಭವನ್ನು ಸಾರುವುದು ಲಾರ್ಡ್ಸ್‌ ಸಂಪ್ರದಾಯ. ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ ನಡುವೆ ಬುಧವಾರದ ಮೊದಲ ದಿನದಾಟಕ್ಕೂ ಮುನ್ನ ಇಂಗ್ಲೆಂಡ್‌ನ‌ ಮಾಜಿ ಆಟಗಾರ ಇಯಾನ್‌ ಬೆಲ್‌, ಬೆಲ್‌ ಬಾರಿಸುವ ಅವಕಾಶ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next