Advertisement

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

02:38 PM Apr 30, 2024 | Team Udayavani |

ನವದೆಹಲಿ: ಟಿ-20 ವಿಶ್ವಕಪ್‌ ಆರಂಭಕ್ಕೆ ದಿನಗಣನೆ ಬಾಕಿಯಿದೆ. ಮಂಗಳವಾರ(ಏ.30 ರಂದು) ದಕ್ಷಿಣ ಆಫ್ರಿಕಾ ತನ್ನ 15 ಮಂದಿಯ ಆಟಗಾರರ ಹೆಸರನ್ನು ಘೋಷಿಸಿದೆ.

Advertisement

ಐಡಿನ್ ಮಾರ್ಕ್ರಾಮ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿ ಆಟಗಾರರ ಜೊತೆ ಹೊಸಮುಖಗಳಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಮಾರ್ಕ್ರಾಮ್, ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಅನುಭವಿ ಡಿಕಾಕ್‌ ನಂತಹ ಬಲಿಷ್ಠ ಆಟಗಾರರು ಬ್ಯಾಟಿಂಗ್‌ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎಸ್‌ ಎ ಟಿ-20 ಲೀಗ್‌ ನಲ್ಲಿ ಸ್ಫೋಟಕ ಬ್ಯಾಟಿಂಗ್‌ ನಿಂದ ಗಮನ ಸೆಳೆದ ರಯಾನ್ ರಿಕೆಲ್ಟನ್ ಮತ್ತು ಒಟ್ನಿಯೆಲ್ ಬಾರ್ಟ್ಮನ್ ಗೆ ರಾಷ್ಟೀಯ ತಂಡದಲ್ಲಿ ವಿಶ್ವಕಪ್‌ ಟೂರ್ನಿಗೆ ಆಯ್ಕೆ ಮಾಡಲಾಗಿದೆ.

ಇನ್ನು ವೇಗಿಗಳ ವಿಭಾಗದಲ್ಲಿ ಕಗಿಸೊ ರಬಾಡ ಮತ್ತು ನಾರ್ಟ್ಜೆ ,ಮಾರ್ಕೊ ಜಾನ್ಸೆನ್ ,ಜೆರಾಲ್ಡ್ ಕೊಯೆಟ್ಜಿ ಸ್ಥಾನ ಪಡೆದಿದ್ದಾರೆ. ಜಾರ್ನ್ ಫೋರ್ಚುಯಿನ್, ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ ಪ್ರಮುಖ ಸ್ಪಿನ್ನರ್‌ಗಳಾಗಿದ್ದಾರೆ.

Advertisement

ಕೈಬಿಟ್ಟ ಪ್ರಮುಖ ಆಟಗಾರರು: ದಕ್ಷಿಣ ಆಫ್ರಿಕಾದ ಮಾಜಿ ಟಿ20 ನಾಯಕ ಟೆಂಬಾ ಬವುಮಾ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇದರೊಂದಿಗೆ ಅಗ್ರ ಕ್ರಮಾಂಕದ ಬ್ಯಾಟರ್ ರಿಲೀ ರೊಸೊವ್ ಈ ಅಬರಿಯ ವಿಶ್ವಕಪ್‌ ತಂಡದಲಿಲ್ಲ.

ದಕ್ಷಿಣ ಆಫ್ರಿಕಾ ತನ್ನ T20 ವಿಶ್ವಕಪ್ ಅಭಿಯಾನವನ್ನು ಜೂನ್ 3 ರಂದು ನ್ಯೂಯಾರ್ಕ್‌ನಲ್ಲಿ ಶ್ರೀಲಂಕಾ ವಿರುದ್ಧ ಪ್ರಾರಂಭಿಸಲಿದೆ. ಸೌತ್‌ ಆಫ್ರಿಕಾ ಡಿ ಗ್ರೂಪ್‌ ನಲ್ಲಿದ್ದು, ಈ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ನೇಪಾಳ ತಂಡಗಳಿವೆ.

ದಕ್ಷಿಣ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಾಮ್ (ಸಿ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ಜಾರ್ನ್ ಫಾರ್ಟುಯಿನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಆನ್ರಿಚ್ ನಾರ್ಟ್ಜೆ, ಕಗಿಸೊ ರಬಾಡಾ, ರಿಯಾನ್ ರಿಕೆಲ್ಟನ್, ಟ್ರಿಸ್ಟಾನ್ ಸ್ಟಬ್ಸ್, ತಬ್ರೈಜ್ ಶಮ್ಸಿ

ಮೀಸಲು ಆಟಗಾರರು: ನಾಂದ್ರೆ ಬರ್ಗರ್ ಮತ್ತು ಲುಂಗಿ ಎನ್ಗಿಡಿ.

Advertisement

Udayavani is now on Telegram. Click here to join our channel and stay updated with the latest news.

Next