Advertisement

ದಕ್ಷಿಣ ಆಫ್ರಿಕಾ ಮತ್ತೆ ಚೋಕರ್ ; ಟೈ ಆಯಿತು ಸೆಮಿಫೈನಲ್‌!

12:27 AM May 23, 2019 | Team Udayavani |

ಹಿಂದಿನ ವಿಶ್ವಕಪ್‌(1992)ನಲ್ಲಿ ಮಳೆ ಹೊಡೆತಕ್ಕೆ ಸಿಲುಕಿ ಸೆಮಿಫೈನಲ್‌ ಹಂತದಲ್ಲಿ ಬೆನ್ನು ಹತ್ತಿದ ದುರದೃಷ್ಟ 1999ರಲ್ಲೂ ದಕ್ಷಿಣ ಆಫ್ರಿಕಾವನ್ನು ಕಾಡಿದ್ದೊಂದು ದುರಂತ. ಅದೂ ಸೆಮಿಫೈನಲ್‌ನಲ್ಲೇ! ಆಸ್ಟ್ರೇಲಿಯ ವಿರುದ್ಧದ ಈ ಪಂದ್ಯ ಟೈ ಆಗುವುದ ರೊಂದಿಗೆ ಹರಿಣಗಳ ಓಟಕ್ಕೆ ತೆರೆ ಬಿತ್ತು.

Advertisement

1992ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮಳೆ ನಿಯಮದಿಂದಾಗಿ ದಕ್ಷಿಣ ಆಫ್ರಿಕಾ ಒಂದು ಎಸೆತಕ್ಕೆ 22 ರನ್‌ ಗಳಿಸುವ ಗುರಿ ಪಡೆದಿತ್ತು !

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆದ 1999ರ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ 49.2 ಓವರ್‌ಗಳಲ್ಲಿ 213ಕ್ಕೆ ಕುಸಿಯಿತು. ದಕ್ಷಿಣ ಆಫ್ರಿಕಾ 49.4 ಓವರ್‌ಗಳಲ್ಲಿ ಇಷ್ಟೇ ಮೊತ್ತಕ್ಕೆ ಆಲೌಟ್‌ ಆಯಿತು. ಸೂಪರ್‌ ಸಿಕ್ಸ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕಿಂತ ಉತ್ತಮ ರನ್‌ರೇಟ್‌ ಹೊಂದಿದ್ದ ಆಸ್ಟ್ರೇಲಿಯವನ್ನು ಫೈನಲ್‌ಗೆ ಕಳುಹಿಸಲಾಯಿತು.

ಆಲ್‌ರೌಂಡರ್‌ ಕ್ಲೂಸ್ನರ್‌ ಅವರ ದಿಟ್ಟ ಬ್ಯಾಟಿಂಗ್‌ ಸಾಹಸದಿಂದ ಹರಿಣಗಳ ಪಡೆ ಗೆಲುವಿನ ಬಾಗಿಲಿಗೆ ಬಂದಿತ್ತು. ಆದರೆ ಜಯದ ರನ್‌ ತೆಗೆಯುವ ವೇಳೆ ಅಲನ್‌ ಡೊನಾಲ್ಡ್‌ ಬ್ಯಾಟ್‌ ಬಿಟ್ಟು ಓಡಿ ರನೌಟಾಗುವುದರೊಂದಿಗೆ ದಕ್ಷಿಣ ಆಫ್ರಿಕಾದ ಕನಸು ಛಿದ್ರ ಗೊಂಡಿತು!

Advertisement

Udayavani is now on Telegram. Click here to join our channel and stay updated with the latest news.

Next