Advertisement
ವಾಂಡರರ್ ಟ್ರ್ಯಾಕ್ ಬೌಲರ್‌ಗಳಿಗೆ ನೆರವು ನೀಡುತ್ತಿರುವುದರಿಂದ ಹಾಗೂ ಅಂತಿಮ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಕಠಿನವಾಗಿ ಪರಿಣಮಿಸುವುದರಿಂದ ಭಾರತವಿಲ್ಲಿ ಮೇಲುಗೈ ಸಾಧಿಸಬೇಕಿತ್ತು. ಆದರೆ ಪರಿಸ್ಥಿತಿ ಭಿನ್ನವಾಗಿ ಗೋಚರಿಸುತ್ತಿದೆ. ನಾಯಕ ಎಲ್ಗರ್ 121 ಎಸೆತಗಳಿಂದ 46 ರನ್ ಹಾಗೂ ಡುಸೆನ್ 11 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಐಡನ್ ಮಾರ್ಕ್‌ಮ್ (31) ಮತ್ತು ಕೀಗನ್ ಪೀಟರ್‌ಸನ್ (28) ಪೆವಿಲಿಯನ್ ಸೇರಿಕೊಂಡಿದ್ದಾರೆ.
2ಕ್ಕೆ 85 ರನ್ ಮಾಡಿದ್ದ ಭಾರತಕ್ಕೆ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಆಧಾರವಾದರು. “ಇದೇ ಕೊನೆಯ ಇನ್ನಿಂಗ್ಸ್’ ಎಂಬ ಒತ್ತಡವನ್ನು ಎಲ್ಲೂ ತೋರ್ಪಡಿಸಿಕೊಳ್ಳದ ರೀತಿಯಲ್ಲಿ ಇವರ ಆಟ ಸಾಗಿತು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. 3ನೇ ವಿಕೆಟಿಗೆ 144 ಎಸೆತಗಳಿಂದ 111 ರನ್ ಪೇರಿಸಿದರು. ಇದು ಏಶ್ಯದ ಆಚೆ ಪೂಜಾರ-ರಹಾನೆ ಜೋಡಿ ದಾಖಲಿಸಿದ ಅತ್ಯುತ್ತಮ ಜತೆಯಾಟವಾಗಿದೆ. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ 100 ರನ್ ಪೇರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಸ್ಕೋರ್ ಎರಡೇ ವಿಕೆಟಿಗೆ 155ರ ತನಕ ಏರಿತು. ಭಾರತ ಬೃಹತ್ ಮುನ್ನಡೆ ಸಾಧಿಸುವ ಸಾಧ್ಯತೆ ದಟ್ಟವಾಗಿತ್ತು. ಆದರೆ 10 ರನ್ ಅಂತರದಲ್ಲಿ ಇವರಿಬ್ಬರೂ ಬೇರ್ಪಡುವುದರೊಂದಿಗೆ ದಕ್ಷಿಣ ಆಫ್ರಿಕಾ ತಿರುಗಿ ಬಿತ್ತು. ಭಾರತದ ಕೊನೆಯ 8 ವಿಕೆಟ್ 111 ರನ್ ಅಂತರದಲ್ಲಿ ಉರುಳಿತು.
Related Articles
Advertisement
ಪೂಜಾರ ಗಳಿಕೆ 86 ಎಸೆತಗಳಿಂದ 53 ರನ್ (10 ಬೌಂಡರಿ). 62 ಎಸೆತಗಳಿಂದ 50 ರನ್ ಪೂರೈಸುವ ಮೂಲಕ ತಮ್ಮ ಅತೀ ವೇಗದ ಅರ್ಧ ಶತಕ ದಾಖಲಿಸಿದರು. ಫಿಫ್ಟಿ ಬಳಿಕ ಮತ್ತೆ ನಿಧಾನ ಗತಿಯ ಆಟಕ್ಕೆ ಮುಂದಾದ ಪೂಜಾರ, ರಬಾಡ ಎಸೆತದಲ್ಲಿ ಲೆಗ್ ಬಿಫೋರ್ ಆಗಿ ವಾಪಸಾದರು. ರಹಾನೆ ವಿಕೆಟ್ ಕೂಡ ರಬಾಡ ಪಾಲಾಗಿತ್ತು. ಈ ಆಫ್ರಿಕನ್ ವೇಗಿಯ ಇನ್ನೊಂದು ದೊಡ್ಡ ಬೇಟೆ ರಿಷಭ್ ಪಂತ್ ವಿಕೆಟ್. ಭಾರತದ ಕೀಪರ್ ಖಾತೆ ತೆರೆಯದೆ ಎದುರಾಳಿ ಕೀಪರ್‌ಗೆ ಕ್ಯಾಚ್ ನೀಡಿ ಹೊರನಡೆದರು. ಹೀಗೆ ರಬಾಡ ಕೇವಲ 12 ರನ್ ಅಂತರದಲ್ಲಿ ಈ 3 ವಿಕೆಟ್ ಉಡಾಯಿಸಿ ದಕ್ಷಿಣ ಆಫ್ರಿಕಾಕ್ಕೆ ಮೇಲುಗೈ ಒದಗಿಸಿದರು.
ಕಡೆಯ ಹಂತದಲ್ಲಿ ಹನುಮ ವಿಹಾರಿ, ಆರ್. ಅಶ್ವಿನ್, ಶಾರ್ದೂಲ್ ಠಾಕೂರ್ ಸೇರಿಕೊಂಡು ಭಾರತದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ತೀರಾ ನಿಧಾನಿಯಾಗಿದ್ದ ವಿಹಾರಿ, ಕೇವಲ 2 ವಿಕೆಟ್ ಉಳಿದಿರುವಾಗ ಬಿರುಸಿನ ಆಟಕ್ಕಿಳಿದರು. ಅವರ ಗಳಿಕೆ 84 ಎಸೆತಗಳಿಂದ ಅಜೇಯ 40 ರನ್ (6 ಬೌಂಡರಿ). ಅಶ್ವಿನ್ 16 ರನ್ ಮಾಡಿದರು. ಬ್ಯಾಟಿಂಗ್‌ನಲ್ಲೂ ಮಿಂಚಿದ ಠಾಕೂರ್ 24 ಎಸೆತ ಎದುರಿಸಿ 28 ರನ್ ಕೊಡುಗೆ ಸಲ್ಲಿಸಿದರು (5 ಬೌಂಡರಿ, 1 ಸಿಕ್ಸರ್). ಬುಮ್ರಾ ಈ ಇನ್ನಿಂಗ್ಸ್‌ನಲ್ಲೂ ಒಂದು ಸಿಕ್ಸರ್ ಸಿಡಿಸಿದರು.
ಇದನ್ನೂ ಓದಿ:ಪ್ರೊ ಕಬಡ್ಡಿ: ದಬಾಂಗ್ ದಿಲ್ಲಿ ಜಯ; ಮತ್ತೆ ಮುಳುಗಿದ ಟೈಟಾನ್
ಸ್ಕೋರ್ ಪಟ್ಟಿಭಾರತ ಪ್ರಥಮ ಇನ್ನಿಂಗ್ಸ್ 202
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್ 229
ಭಾರತ ದ್ವಿತೀಯ ಇನ್ನಿಂಗ್ಸ್
ಕೆ.ಎಲ್. ರಾಹುಲ್ ಸಿ ಮಾರ್ಕ್‌ರಮ್ ಬಿ ಜಾನ್ಸೆನ್ 8
ಅಗರ್ವಾಲ್ ಎಲ್‌ಬಿಡಬ್ಲ್ಯು ಒಲಿವರ್ 23
ಪೂಜಾರ ಎಲ್‌ಬಿಡಬ್ಲ್ಯು ರಬಾಡ 53
ಅಜಿಂಕ್ಯ ರಹಾನೆ ಸಿ ವೆರೇಯ್ನ ಬಿ ರಬಾಡ 58
ಹನುಮ ವಿಹಾರಿ ಔಟಾಗದೆ 40
ರಿಷಭ್ ಪಂತ್ ಸಿ ವೆರೇಯ್ನ ಬಿ ರಬಾಡ 0
ಆರ್. ಅಶ್ವಿನ್ ಸಿ ವೆರೇಯ್ನ ಬಿ ಎನ್‌ಗಿಡಿ 16
ಶಾರ್ದೂಲ್ ಠಾಕೂರ್ ಸಿ ಮಹಾರಾಜ್ ಬಿ ಜಾನ್ಸೆನ್ 28
ಮೊಹಮ್ಮದ್ ಶಮಿ ಸಿ ವೆರೇಯ್ನ ಬಿ ಜಾನ್ಸೆನ್ 0
ಜಸ್‌ಪ್ರೀತ್ ಬುಮ್ರಾ ಸಿ ಜಾನ್ಸೆನ್ ಬಿ ಎನ್‌ಗಿಡಿ 7
ಮೊಹಮ್ಮದ್ ಸಿರಾಜ್ ಬಿ ಎನ್‌ಗಿಡಿ 0
ಇತರ 33
ಒಟ್ಟು (ಆಲೌಟ್) 266
ವಿಕೆಟ್ ಪತನ: 1-24, 2 -44, 3-155, 4-163, 5-167, 6-184, 7-225, 8-228, 9-245.
ಬೌಲಿಂಗ್; ಕಾಗಿಸೊ ರಬಾಡ 20-3-77-3
ಡ್ನೂನ್ ಒಲಿವರ್ 12-1-51-1
ಲುಂಗಿ ಎನ್‌ಗಿಡಿ 10.1-2-43-3
ಮಾರ್ಕೊ ಜಾನ್ಸೆನ್ 17-4-67-3
ಕೆಶವ್ ಮಹರಾಜ್ 1-0-8-0 ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್
ಗೆಲು ವಿನ ಗುರಿ (246 ರನ್ )
ಮಾರ್ಕ್‌ರಮ್ ಎಲ್‌ಬಿಡಬ್ಲ್ಯು ಶಾದೂìಲ್ 31
ಡೀನ್ ಎಲ್ಗರ್ ಬ್ಯಾಟಿಂಗ್ 46
ಪೀಟರ್‌ಸನ್ ಬಿ ಅಶ್ವಿನ್ 28
ಡುಸೆನ್ ಬ್ಯಾಟಿಂಗ್ 11
ಇತರ 2
ಒಟ್ಟು (2 ವಿಕೆ ಟಿ ಗೆ ) 118
ವಿಕೆಟ್ ಪತನ:1-47, 2-93.
ಬೌಲಿಂಗ್; ಜಸ್‌ಪ್ರೀತ್ ಬುಮ್ರಾ 10-1-42-0
ಮೊಹ ಮ್ಮದ್ ಶಮಿ 9-2-22-0
ಶಾರ್ದೂಲ್ ಠಾಕೂರ್ 9-1-24-1
ಮೊಹಮ್ಮದ್ ಸಿರಾಜ್ 4-0-14-0
ಆರ್. ಅಶ್ವಿನ್ 8-1-14-1