Advertisement

ಉತ್ಸವಗಳಿಂದ ಮೂಲ ಸತ್ವ ಉಳಿಕೆ: ಡಾ|ಹೆಗ್ಗಡೆ

11:55 AM Oct 07, 2017 | Team Udayavani |

ಉಡುಪಿ: ಪರ್ಯಾಯದಂತಹ ಉತ್ಸವಗಳು ಪರಂಪರೆಯ ಮೂಲ ಮೌಲ್ಯ, ಸತ್ವವನ್ನು ಉಳಿಸಿಕೊಂಡು ಹೋಗಲು ಸಹಕಾರಿ ಯಾಗುತ್ತವೆ. ಇಂತಹ ಘಟನೆಗಳು ಎತ್ತರದ ದೀಪಸ್ತಂಭದಂತಿದ್ದು ಆಧು ನಿಕತೆ ಯಿಂದ ಗೊತ್ತಿಲ್ಲದೆಯೂ ದಾರಿ ತಪ್ಪಿದವರನ್ನು ದಿಕ್ಸೂಚಿಯಾಗಿ ಕರೆಯುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ನುಡಿದರು. 

Advertisement

ಪಲಿಮಾರು ಮಠದ ಸಭಾಂಗಣದಲ್ಲಿ ಶುಕ್ರವಾರ ಪಲಿಮಾರು ಮಠ ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಲಯವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಆಧುನಿಕತೆಯ ಹೆಸರಿನಲ್ಲಿ ಮನಸ್ಸು, ಸಂಸಾರ ಭ್ರಷ್ಟವಾಗುತ್ತಿರುವಾಗ ಕಲೆ, ಸಾಹಿತ್ಯ, ಧರ್ಮ, ಪರಂಪರೆಯ ಮೂಲಕ ಮೂಲ ಸತ್ವವನ್ನು ಉಳಿಸಿಕೊಳ್ಳಬೇಕಾಗಿದೆ. ತಿಳಿ ವಳಿಕೆ ಇಲ್ಲದೆ ಕಾಲದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವವರೂ ಪರ್ಯಾಯದಂತಹ ಉತ್ಸವಗಳ ಮೂಲಕ ಹಿಂದುರುಗಿ ಬರಲು ಅವಕಾಶಗಳಿವೆ ಎಂದರು. 

ಪಲಿಮಾರು ಮಠದ ಹಿಂದಿನ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಮುಗ್ಧತೆ ಈಗಿನ ಶ್ರೀವಿದ್ಯಾಧೀಶತೀರ್ಥ ಶ್ರೀಪಾದ ರಲ್ಲಿಯೂ ಇದೆ ಎಂದು ಡಾ|ಹೆಗ್ಗಡೆ ಹೇಳಿದರು.  ಪಲಿಮಾರು ಮಠದ ವೆಬ್‌ಸೈಟ್‌ನ್ನು ಅನಾ ವರಣಗೊಳಿಸಿದ ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ ಆಳ್ವರು, ವರ್ಷ ವರ್ಷ ನಡೆಯುವ ಯಾವುದೇ ಉತ್ಸವವನ್ನಾದರೂ ಈ ವರ್ಷ ಹೇಗೆ ಮಾಡ ಬಹುದು ಎಂಬುದು ಸವಾಲಾಗುತ್ತದೆ. ಎಲ್ಲ ರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗುತ್ತದೆ ಎಂದರು. 

ಕಟೀಲು ದೇವಳದ ಅರ್ಚಕ ಹರಿ ನಾರಾಯಣ ದಾಸ ಆಸ್ರಣ್ಣ ಶುಭ ಕೋರಿ ದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರಾಘವೇಂದ್ರ ಆಚಾರ್ಯ ಸ್ವಾಗತಿಸಿ, ಶ್ರೀಧರ ಭಟ್‌ ವಂದಿಸಿ ದರು. ಪ್ರೊ| ಎಂ.ಎಲ್‌.ಸಾಮಗ ಕಾರ್ಯಕ್ರಮ ನಿರ್ವಹಿಸಿದರು. ದಿವಾನ್‌ ಶಿಬರೂರು ವೇದವ್ಯಾಸ ತಂತ್ರಿ, ಪದಾಧಿಕಾರಿಗಳಾದ ರಮೇಶ ರಾವ್‌ ಬೀಡು, ಪದ್ಮನಾಭ ಭಟ್‌, ಪ್ರಹ್ಲಾದ್‌ ಮೊದಲಾದವರು ಉಪಸ್ಥಿತರಿದ್ದರು. 

ಜಾಗೃತಿ ಸಂದೇಶಗಳು
ಸ್ವಚ್ಛತೆ ಕುರಿತು ಜಾಗೃತಿ ಸಂದೇಶವನ್ನು ಪರ್ಯಾಯದ ಮೆರವಣಿಗೆಯಲ್ಲಿ ಕೊಡಬಹುದು. ಹಿಂದೆ ಅನಾವೃಷ್ಟಿ ಇದ್ದರೆ ಈಗ ಕೆಲವೆಡೆ ಅತಿವೃಷ್ಟಿ ಇದೆ. ಅಮೂಲ್ಯವಾಗುತ್ತಿರುವ ನೀರಿನ ಬಳಕೆ ಬಗ್ಗೆ ಜಾಗೃತಿ ಇರಬೇಕಾಗಿದೆ.  

Advertisement

20ರಲ್ಲಿ  ಬಂಡಾಯ, 50ರಲ್ಲಿ  ಧಾರ್ಮಿಕ!
20ರಲ್ಲಿ ಬಂಡಾಯಗಾರನಾಗು ವುದು, 20ರಿಂದ 30ರ ಅವಧಿಯಲ್ಲಿ ವೈಯ ಕ್ತಿಕ ಬದುಕಿನ ಚಿಂತನೆ, 30 ರಿಂದ 40ರ ಅವಧಿಯಲ್ಲಿ ಬದುಕಿನ ಅನುಭವ ದಿಂದ ಭವಿಷ್ಯದ ಬಗ್ಗೆ ಚಿಂತೆ, 50ರ ಬಳಿಕ ಧರ್ಮ, ಪರಂಪರೆಯ ಬಗ್ಗೆ ತಿರುಗುವುದು ಸಹಜ. 
 ಡಾ| ಡಿ. ವೀರೇಂದ್ರ ಹೆಗ್ಗಡೆ 

Advertisement

Udayavani is now on Telegram. Click here to join our channel and stay updated with the latest news.

Next