Advertisement

ಸೌರವ್‌ ಗಂಗೂಲಿ ಬಿಜೆಪಿ ಸೇರುತ್ತಾರೆಂಬ ವದಂತಿಗೆ ಜೀವ

12:55 AM Aug 25, 2020 | mahesh |

ಕೋಲ್ಕತ: ಮುಂದಿನ ವರ್ಷ ಬಂಗಾಲ ವಿಧಾನಸಭೆ ಚುನಾವಣೆಯಿದೆ. ಈ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷದ ನೇತೃತ್ವವನ್ನು ಬಿಸಿಸಿಐ ಅಧ್ಯಕ್ಷ, ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ವಹಿಸುತ್ತಾರೆಂಬ ವರದಿಗಳು ಈಗಾಗಲೇ ಓಡಾಡುತ್ತಿವೆ. ಈ ಚರ್ಚೆ ಜೋರಾಗಿರುವಾಗಲೇ ಸೌರವ್‌ ಗಂಗೂಲಿ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಲ ಸರಕಾರ ತನಗೆ ನೀಡಿದ್ದ 2 ಎಕರೆ ಜಾಗವನ್ನು ಹಿಂತಿರುಗಿಸಿದ್ದಾರೆ. ಶನಿವಾರ ನಡೆದಿರುವ ಈ ಬೆಳವಣಿಗೆಯಿಂದ, ಈಗಾಗಲೇ ಹಬ್ಬಿರುವ ವರದಿಗಳು ಹೌದು ಎನ್ನಲು ಸಾಕ್ಷ್ಯ ನೀಡಿದಂತಾಗಿದೆ.

Advertisement

ಗಂಗೂಲಿ ಎಜುಕೇಶನಲ್‌ ಆ್ಯಂಡ್‌ ವೆಲ್‌ಫೇರ್‌ ಸೊಸೈಟಿಗೆ ಬಂಗಾಲದ ಗೃಹಮಂಡಳಿ 2 ಎಕರೆ ಜಾಗ ವನ್ನು ಕೋಲ್ಕತದ ಪೂರ್ವಭಾಗದಲ್ಲಿ ನೀಡಿತ್ತು. ಐಸಿ ಎಸ್‌ಇ ಆಧಾರಿತ 12ನೇ ತರಗತಿವರೆಗಿನ ಶಾಲೆಯನ್ನು ಇಲ್ಲಿ ತೆರೆಯಲು ಗಂಗೂಲಿ ಹೊರಟಿದ್ದರು. ಆದರೆ ದಿಢೀರ್‌ ಬೆಳವಣಿಗೆಯಲ್ಲಿ ಸರಕಾರಕ್ಕೆ ಪತ್ರ ಬರೆದಿ ರುವ ಗಂಗೂಲಿ ಎಜುಕೇಶನಲ್‌ ಆ್ಯಂಡ್‌ ವೆಲ್‌ಫೇರ್‌ ಸೊಸೈಟಿ, ಜಮೀನನ್ನು ಹಿಂಪಡೆಯಲು ಮನವಿ ಮಾಡಿದೆ. ಅದನ್ನು ಅಲ್ಲಿನ ಸರಕಾರ ಅಂಗೀಕರಿಸಿದೆ. ಕಾನೂನು ತೊಂದರೆ ಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next