ಗದಗ: ಶಂಕರಾಚಾರ್ಯರು ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಬಹುದೊಡ್ಡ ಕೊಡುಗೆಗಳಲ್ಲಿ ಸೌಂದರ್ಯ ಲಹರಿಯೂ ಒಂದಾಗಿದ್ದು, ಸೌಂದರ್ಯ ಲಹರಿ ಪುಣ್ಯ ಸಂಪಾನೆ ಮಹಾಮಾರ್ಗವೆಂದು ರಾಜೇಶ್ವರಿ ಶೆಟ್ಟರ ಅಭಿಪ್ರಾಯಪಟ್ಟರು.
ನಗರದ ದೈವಜ್ಞ ಸಮಾಜದ ಮಹಿಳಾ ಮಂಡಳ ಸಮಾಜದ ಕಚೇರಿಯಲ್ಲಿ ನಡೆದ ಸೌಂದರ್ಯ ಲಹರಿ ಕಲಿಕಾ ಶಿಬಿರದಲ್ಲಿ ಅವರು ಮಾತನಾಡಿದರು.
ಸೌಂದರ್ಯ ಲಹರಿ ಮಹಾಮಂಜರಿಯು ಎಲ್ಲ ರೀತಿಯ ಆಪತ್ತುಗಳಿಂದ ರಕ್ಷಿಸಿ, ಇಷ್ಟಾರ್ಥಗಳನ್ನು ಈಡೇರಿಸುವುದರೊಂದಿಗೆ ನಮ್ಮನ್ನು ಸನ್ಮಾರ್ಗದತ್ತ ಮುನ್ನಡೆಸುತ್ತದೆ. ಸೌಂದರ್ಯ ಲಹರಿ ಪಠಣದಿಂದ ಮನೆಯಲ್ಲಿ ಶಾಂತಿ, ಸಕಲ ಸಂಪತ್ತನ್ನೂ ಪ್ರಸಾದಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದೈವಜ್ಞ ಸಮಾಜದ ಮಹಿಳಾ ಮಂಡಳದ ಅಧ್ಯಕ್ಷೆ ಸಂಧ್ಯಾ ವೆರ್ಣೇಕರ ಮಾತನಾಡಿದರು. ಇದೇ ವೇಳೆ ಸಮಾಜದ ಎಲ್ಲ ಮಹಿಳೆಯರಿಗೆ ಉಡಿ ತುಂಬಲಾಯಿತು.
ಉಷಾ, ಆಶಾ, ಜ್ಯೋತಿ, ಗೀತಾ, ರೇಖಾ, ಸಿಂಧು, ಪದ್ಮ, ಸಂಗೀತಾ, ಆಶಾ, ದೀಪಾ, ಅನಿತಾ, ನಿರ್ಮಲಾ, ಗಾಯತ್ರಿ, ಪೂಜಾ, ವೈಶಾಲಿ, ಗಾಯತ್ರಿ, ಪದ್ಮಾವತಿ, ರೋಹಿಣಿ, ರುಕ್ಮಿಣಿ, ಪಾರ್ವತಿ, ರೇಣುಕಾ ಅಮಾತ್ಯೆ ಇದ್ದರು. ಪುಷ್ಪಾ ಸ್ವಾಗತಿಸಿದರು. ಪದ್ಮಶ್ರೀ ವಂದಿಸಿದರು.