Advertisement
ಐವರು ಪ್ರವಾಸಿಗರಿದ್ದ ನೌಕೆ ಭಾನುವಾರ ಪ್ರಯಾಣ ಆರಂಭಿಸಿದ 1 ಮುಕ್ಕಾಲು ಗಂಟೆಯ ಬಳಿಕ ನಾಪತ್ತೆಯಾಗಿ ಸಂಪರ್ಕ ಕಳೆದುಕೊಂಡಿತ್ತು. ಈಗ ಅದರಲ್ಲಿ ಕೇವಲ 24 ಗಂಟೆಗಳ ಅವಧಿಗಷ್ಟೇ ಸೀಮಿತವಾಗಿರುವಷ್ಟು ಆಮ್ಲಜನಕ ವ್ಯವಸ್ಥೆ ಇದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಕರಾವಳಿ ಪಡೆ, ಕೆನಡಾ ಜಂಟಿ ರಕ್ಷಣಾ ಪಡೆ ಹಾಗೂ ಫ್ರಾನ್ಸ್‌ನ ವಿಪತ್ತು ಪರಿಹಾರ ಪಡೆಗಳು ಶೋಧ ಕಾರ್ಯಾಚಾರಣೆ ಬಿರುಸುಗೊಳಿಸಿವೆ. ಈ ವೇಳೆ ಕೆನಾಡದ ಪಿ-3 ವಿಮಾನಕ್ಕೆ ಶೋಧಪ್ರದೇಶದಲ್ಲಿ ಸಿಗ್ನಲ್ ಒಂದು ಪತ್ತೆಯಾಗಿದ್ದು, ಪ್ರತಿ 30 ನಿಮಿಷಕ್ಕೊಮ್ಮೆ ಶಬ್ದ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಬ್ದಗಳ ಮೂಲ ಅನ್ವೇಷಿಸಲು ರಿಮೋಟ್ ಆಪರೇಟಡ್ ವೆಹಿಕಲ್ ಒಂದನ್ನೂ ನಿಯೋಜಸಲಾಗಿದ್ದು, ಶೀಘ್ರವೇ ಜಲಾಂತರ್ಗಾಮಿ ನೌಕೆ ಪತ್ತೆಯಾಗುವ ವಿಶ್ವಾಸವನ್ನೂ ರಕ್ಷಣಾ ಪಡೆಗಳು ವ್ಯಕ್ತ ಪಡಿಸಿವೆ.
Advertisement
Submarine; ನಾಪತ್ತೆಯಾದ ಜಲಾಂತರ್ಗಾಮಿಯಿಂದ ಶಬ್ದ!
10:04 AM Jun 22, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.