Advertisement

ಸೌಡ: ವೀರಾಂಜನೆಯ ವಿಗ್ರಹದಲ್ಲಿ ದೇವನಾಗರಿ ಲಿಪಿ ಪತ್ತೆ

10:00 PM Mar 10, 2021 | Team Udayavani |

ಶಂಕರನಾರಾಯಣ : ಹಾರ್ದಳ್ಳಿ- ಮಂಡಳ್ಳಿ ಗ್ರಾಮದ ಸೌಡ ಸಮೀಪದ ವಾರಾಹಿ ನದಿ ತಟದ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿರುವ ಶ್ರೀ ವೀರಾಂಜನೇಯ ವಿಗ್ರಹದಲ್ಲಿ ವಿಜಯನಗರ ಕಾಲದ ಸಂಸ್ಕೃತ ಭಾಷೆಯ ದೇವನಾಗರಿ ಲಿಪಿ ಪತ್ತೆಯಾಗಿದೆ.

Advertisement

ವಿಗ್ರಹದ ಪೀಠದಲ್ಲಿ ತಲೆಕೆಳಗಾಗಿ ಬರೆಯಲಾಗಿದ್ದು, 4 ಅಡ್ಡ ಪಟ್ಟಿಕೆಯಲ್ಲಿ ಶ್ರೀ ವೀರಾಂಜನೇಯರ ಮಂತ್ರಗಳನ್ನು ಒಳಗೊಂಡ ಸಂಸ್ಕೃತ ಭಾಷೆಯ ದೇವನಾಗರಿ ಲಿಪಿ ಕಾಣಬಹುದು. ಕೆಲ ಅಕ್ಷರ ಅಸ್ಪಷ್ಟವಾಗಿದೆ.

ಶ್ರೀ ವೀರಾಂಜನೇಯ ಸೌಡ ಎಂದು ಕರೆಸಿಕೊಳ್ಳುವ ಶ್ರೀ ಆಂಜನೇಯ ವಿಗ್ರಹವು ಸುಮಾರು 4 ಅಡಿ ಎತ್ತರವಿದೆ. ಶ್ರೀ ದೇವರ ಮಧ್ಯೆ ಪಟ್ಟಿಕೆಯಲ್ಲಿ ಖಡ್ಗ ತೋರಿಸುವು ದರ ಮೂಲಕ ವೀರತ್ವ ಗಮನಿಸಬಹುದು. ಹಾಗೆ ಬಾಲದಲ್ಲಿ ಘಂಟೆ, ಎಡ ಕೈ ಮಧ್ಯ ಭಾಗದಿಂದ ಗದೆ, ಬಲ ಕೈ ಅಭಯ ಹಸ್ತ ನೀಡಿದರೆ, ಎಡ ಕೈ ಎಡ ಕಾಲ ಮೇಲೆ ಇಟ್ಟಿರುವುದನ್ನು ನೋಡಬಹುದು.

ಈ ದೇವನಾಗರಿ ಲಿಪಿಯನ್ನು ಪ್ರದೀಪ ಕುಮಾರ್‌ ಬಸ್ರೂರು ಅವರು ಜಯಕರ ಜೋಗಿ, ಸಚೀನ್‌ ಕಕ್ಕುಂಜೆ, ಮಹಾಬಲೇಶ್ವರ ಬಾಯರಿ, ಸುಮುಖ ಬಾಯರಿ ಸಹಕಾರದಲ್ಲಿ ಪತ್ತೆ ಹಚ್ಚಿದ್ದಾರೆ. ಇವರಿಗೆ ಮೈಸೂರು ಕರ್ನಾಟಕ ವಿವಿ ಮುಕ್ತ ವಿಶ್ವ ವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ| ಶಲ್ವಪ್ಪಿಳ್ಳೈ ಅಯ್ಯಂಗಾರ್‌ ಅವರು ಮಾರ್ಗದರ್ಶನ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next