Advertisement

ಬೇಜಾರಾಗ್ತಿದೆ, ಬೇಗ ಮಾತಾಡ್ಸು

03:55 PM Feb 27, 2018 | Harsha Rao |

ಈ ಲವರ್ಗಳಿಗೆ ಏನು ರೋಗ ಬಂದಿದೆ? ಅವರೆಲ್ಲಾ ಯಾಕೆ ಹುಚ್ಚು ಹಿಡಿದವರಂತೆ ಆಡ್ತಾ ಇರ್ತಾರೆ ಅಂತ ಮೊನ್ನೆ ತನಕ ನಾನೂ ಅಂದುಕೊಳ್ತಾ ಇದ್ದೆ. ಅದು ಹುಚ್ಚಲ್ಲ…ಅತಿಯಾದ ಪ್ರೀತಿ, ಕಾಳಜಿಯಿಂದ ಕಂಡು ಬರುವ ವರ್ತನೆ ಅಂತ ಅರಿವಾದದ್ದು ನಾನೂ ಪ್ರೀತಿಯ ಸುಳಿಗೆ ಸಿಕ್ಕಿಕೊಂಡ ಮೇಲೆಯೇ…

Advertisement

ತರೆಲ, ತುಂಟಾಟದಲ್ಲೇ ಮುಳುಗಿದ್ದ ನನ್ನ ಬದುಕಿಗೆ ಬ್ರೇಕ್‌ ಹಾಕಿ, ಸದಾ ನಿನ್ನ ಗುಂಗಿನಲ್ಲೇ ಇರೋ ಥರ ಮಾಡಿದವ ನೀನು. ಪ್ರೀತಿ ಅಂದ್ರೆ ಮೈಲು ದೂರ ಓಡುತ್ತಿದ್ದ ನನ್ನನ್ನು ಸೆರೆ ಹಿಡಿದು ಬಂಧಿಸಿದ ಮಾಯಗಾರ ನೀನು. ಎಷ್ಟೋ ಜನ ನನ್ನ ಹಿಂದೆ ಸುತ್ತಿದರೂ, ಯಾರಿಗೂ ಒಲಿಯದ ನಾನು ನಿನ್ನಲ್ಲಿ ಬಂಧಿಯಾದೆ. ಅಬ್ಟಾ, ಅದೆಂಥ ಶಕ್ತಿಯಿದೆ ನಿನ್ನ ಪ್ರೀತಿಗೆ?

   ಈ ಪ್ರೀತಿ ಏಕೆ ಎಲ್ಲರನ್ನೂ ಹುಚ್ಚರನ್ನಾಗಿ ಮಾಡುತ್ತೆ? ಪ್ರೀತಿ ಮಾಡೋರೆಲ್ಲಾ ಹುಚ್ಚರಾ? ಅದೇನೇನೋ ಮಾತಾಡ್ತೀವಿ, ನೂರು ಕನಸುಗಳು, ನೂರು ಆಸೆಗಳು, ನೂರೆಂಟು ಪ್ರಶ್ನೆಗಳು… ಎಂಥ ವಿಚಿತ್ರ ಅಲ್ವಾ.. ಪ್ರೀತಿಯಲ್ಲಿ ಬಿದ್ದ ಮರುಕ್ಷಣವೇ ಇವನು /ಇವಳು ನನ್ನವನು (ಳು) ಅನ್ನೋ ಜವಾಬ್ದಾರಿ ಬಂದುಬಿಡುತ್ತೆ ಅಲ್ವಾ? ನಾನೇ ಎಷ್ಟೋ ಸಲ ಅಂದೊRಂಡಿದ್ದೆ; ಈ ಲವರ್ಗಳೇಕೆ ಹುಚ್ಚರ ಥರ ಆಡ್ತಾರೆ ಅಂತ. ಬಟ್‌ ಅದು ಹುಚ್ಚಲ್ಲ, ಅತಿಯಾದ ಪ್ರೀತಿ, ಕಾಳಜಿ ಅಂತ ಗೊತ್ತಾಗಿದ್ದು ನೀನು ನನಗೆ ಸಿಕ್ಕಿದ ಮೇಲೆ.

  ಎಷ್ಟೋ ಸಾರಿ ನಿನ್ನ ಮೇಲೆ ಕಾರಣವಿಲ್ಲದೇ ಮುನಿಸಿಕೊಂಡಿದ್ದುಂಟು. ಆದ್ರೂ, ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ನನ್ನನ್ನು ನಗಿಸ್ತೀಯಲ್ಲ? ಆ ಗುಣ ನಂಗೆ ತುಂಬಾ ಇಷ್ಟ. ಇತ್ತೀಚೆಗೆ ಎಲ್ಲಿ ನಾನು ನಿನ್ನನ್ನು ಕಳೆದುಕೊಂಡು ಬಿಡ್ತೀನೋ ಅನ್ನೋ ಭಯ ಕಾಡ್ತಿದೆ.
 ಪ್ರತಿ ಬಾರಿ ನಾನು ಕೇಳ್ಳೋ ಪ್ರಶ್ನೆ ಒಂದೇ, ನಾನಂದ್ರೆ ನಿಂಗೆ ಎಷ್ಟು ಇಷ್ಟ ಅಂತ? ಅದನ್ನೆಲ್ಲ ಬಾಯಾ¾ತಲ್ಲಿ ಹೇಳ್ಳೋಕ್‌ ಆಗಲ್ಲ ಅಂತೀಯ! ಅದ್ಯಾಕೋ ಗೊತ್ತಿಲ್ಲ, ನೀನು ನನ್ನನ್ನು ಎಷ್ಟೇ ಪ್ರೀತಿಸಿದ್ರೂ, ಪ್ರೀತಿಯನ್ನು ಎಷ್ಟೇ ವ್ಯಕ್ತ ಪಡಿಸಿದ್ರೂ, ನೀನು ನನ್ನಿಂದ ಎಲ್ಲಿ ದೂರ ಹೋಗಿ ಬಿಡ್ತೀಯೋ ಅನ್ನೋ ಭಯ ಕಾಡುತ್ತೆ.

ಸಾರಿ ಕಣೋ, ನಿನ್ನನ್ನು ತುಂಬಾ ಗೋಳ್‌ ಹೊಯೊRಳ್ತೀನಿ ನಾನು. ಪ್ರತಿ ಸಾರಿ ಜಗಳ ಆದಾಗಲೂ ನೀನು  ಕೊಡಿಸಿದ್ದನ್ನೆಲ್ಲಾ ನಿನ್ನ ಮುಂದೆ ಸುರಿದು ಚಿಕ್ಕ ಮಗುವಿನಂತೆ ಮುಖ ಊದಿಸಿಕೊಳ್ತೀನಿ. ಅದರಿಂದ ನಿನಗೆಷ್ಟು ಬೇಜಾರಾಗುತ್ತೆ ಅಂತ ಅರ್ಥ ಆಗುತ್ತೆ. ನಂಗೆ ಬೇಕಾಗಿರೋದು ಯಾವುದೇ ಉಡುಗೊರೆ ಅಲ್ಲ. ನೀನು, ನಿನ್ನ ಪ್ರೀತಿ ಮಾತ್ರ.

Advertisement

   ಪ್ರತಿ ಸಾರಿ ಜಗಳ ಆಗ್ತಿತ್ತು. ಆದ್ರೆ, ಇಷ್ಟೊಂದು ಸೀರಿಯಸ್‌ ಜಗಳ ಆಗಿರಲಿಲ್ಲ. ಇದೇ ಫ‌ಸ್ಟ್‌ ಟೈಂ ನೀನು ನನ್ನ ಮೇಲೆ ತುಂಬಾ ಮುನಿಸಿಕೊಂಡಿದ್ದೀಯಾ. ನಿನ್ನ ಬಿಟ್ಟು ನಂಗೆ ಇರೋಕ್‌ ಆಗ್ತಿಲ್ಲ. ನಿನ್ನ ಧ್ವನಿ ಕೇಳದೆ, ನಿನ್ನ ಮುಖ ನೋಡದೇ 15 ದಿನಗಳಾಯ್ತು. ನಾನೆಷ್ಟು ಬಡವಾಗಿದ್ದೇನೆ ಗೊತ್ತಾ ನಿಂಗೆ? ನೀನು ಯಾವಾಗ ಸರಿ ಹೋಗ್ತಿàಯ ಅಂತ ಈ ಜೀವ ಕಾಯ್ತಿದೆ.

ನನ್ನನ್ನು  ಕ್ಷಮಿಸು, ಇನ್ನೊಮ್ಮೆ ಈ ರೀತಿ ಮಾಡಲ್ಲ. ಸಂಬಂಧ ಅಂದ್ಮೇಲೆ ಅಲ್ಲಿ ಜಗಳ, ಪ್ರೀತಿ, ನೋವು, ನಗು, ನಲಿವು, ತಮಾಷೆ, ಕಾಳಜಿ, ಅಸೂಯೆ, ಗುಟ್ಟು, ಇದ್ದೇ ಇರುತ್ತವೆ. ಅವೆಲ್ಲಕ್ಕಿಂತ ಹೆಚ್ಚಾಗಿ ಪ್ರೀತಿ ಇರುತ್ತೆ. ಅದು ನಮ್ಮಿಬ್ಬರ ನಡುವೆ ಇದೆ ಅಂತ ಅಂದೊRಳ್ತೀನಿ. ಇನ್ನು ನಂಗೆ ಕಾಯೋಕ್‌ ಆಗಲ್ಲ. ಪ್ಲೀಸ್‌, ಬೇಗ ಮಾತಾಡಿಸು.

ಇಂತಿ ನಿನ್ನ ಪ್ರೀತಿಯ ಜಾನು
– ಸುನೀತ ರಾಥೋಡ್‌

Advertisement

Udayavani is now on Telegram. Click here to join our channel and stay updated with the latest news.

Next